ಕೋಲ್ಕತಾ(ಪಶ್ಚಿಮ ಬಂಗಾಳ): ಅಪ್ಪನ ಮೃತದೇಹದೊಂದಿಗೆ ಮಗ ಮೂರು ತಿಂಗಳು ಕಳೆದಿರುವ ವಿಚಿತ್ರ ಘಟನೆ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದಲ್ಲಿ ನಡೆದಿದೆ. ನೆರೆಹೊರೆಯ ಜನರು ಅವರ ಮನೆಗೆ ಹೋಗಿ ಪರಿಶೀಲನೆ ನಡೆಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.
ವಿವರ:

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 70 ವರ್ಷದ ಸಂಗ್ರಾಮ್ ಡೇ ಎಂಬವರು ಕಳೆದ ಮೂರು ತಿಂಗಳ ಹಿಂದೆ ಸಾವನ್ನಪ್ಪಿದ್ದಾರೆ. ತಂದೆಯ ಅಂತ್ಯಕ್ರಿಯೆ ನಡೆಸುವ ಬದಲು ಪುತ್ರ ಕೌಶಿಕ್ ಮೃತದೇಹದೊಂದಿಗೆ ಕಾಲ ಕಳೆಯುತ್ತಿದ್ದ. ಸಂಗ್ರಾಮ್ ಡೇ ಅವರ ಪತ್ನಿ ಅರುಣಾ ಕೂಡ ಕೆಲ ತಿಂಗಳಿಂದ ಅನಾರೋಗ್ಯಕ್ಕೀಡಾಗಿದ್ದು, ಹಾಸಿಗೆ ಹಿಡಿದಿದ್ದರು. ಹೀಗಾಗಿ, ಗಂಡನ ಸಾವಿನ ಸುದ್ದಿ ಬಗ್ಗೆ ಅವರಿಗೆ ಗೊತ್ತಾಗಿಲ್ಲ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಕೌಶಿಕ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ. ಆತನಿಗೆ ತಂದೆಯ ಸಾವಿನ ಬಳಿಕ ಏನು ಮಾಡಬೇಕೆಂದು ತೋಚಲಿಲ್ಲವಂತೆ. ಈ ಸಂಗತಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಸಂಗ್ರಾಮ್ ಡೇ ಮನೆಯಿಂದ ಕೊಳೆತ ವಸ್ತುವಿನ ವಾಸನೆ ಹಾಗೂ ಕೌಶಿಕ್ ಮನೆಯಿಂದ ಹೊರಬಾರದ ಕಾರಣ ಸ್ಥಳೀಯರು ಅಲ್ಲಿಗೆ ಧಾವಿಸಿ ನೋಡಿದ್ದಾರೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ. ಈಗಾಗಲೇ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿದ್ದಾರೆ. ಇದೊಂದು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಮಗನನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಯುತ್ತಿದೆ.
ಸಂಗ್ರಾಮ್ ಡೇ ಮುಂಬೈನ ಬಾಬಾ ಆಟೋಮಿಕ್ ರಿಸರ್ಚ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದು, ನಿವೃತ್ತರಾಗಿದ್ದರು.