"ಮಾನವ ಜನ್ಮ ದೊಡ್ಡದಲ್ಲ, ಮಾನವೀಯತೆ ದೊಡ್ಡದು.. ಧರ್ಮ ದೊಡ್ಡದಲ್ಲ, ದಯೆ ದೊಡ್ಡದು" - ಗುರು ಬಸವಣ್ಣರ ಈ ಮಾತು ಸಾರ್ವಕಾಲಿಕ. ಇಂದು ಕಾಯಕ, ದಾಸೋಹ, ಸಮಾನತೆಯ ತತ್ವಗಳನ್ನು ವಿಶ್ವಕ್ಕೆ ಸಾರಿದ 12ನೇ ಶತಮಾನದ ಕ್ರಾಂತಿಕಾರಿ ಬಸವಣ್ಣನ ಜಯಂತಿ.
ಕೋವಿಡ್ ಉಲ್ಬಣದಿಂದಾಗಿ ಈ ಬಾರಿ ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯಿಂದ ಟ್ವಿಟರ್ ಅಭಿಯಾನ ಆರಂಭವಾಗಿದೆ. #BasavaJayanti ಹ್ಯಾಷ್ ಟ್ಯಾಗ್ ಅಡಿಯಲ್ಲಿ ಬಸವಣ್ಣನವರ ತತ್ವ -ಸಂದೇಶದ ಕುರಿತು ಟ್ವೀಟ್ ಮಾಡುವಂತೆ ಕರ್ನಾಟಕದ ಕೆಲವು ಶ್ರೀಗಳು ಕೋರಿದ್ದರು. ಇದೀಗ ಟ್ವಿಟರ್ನಲ್ಲಿ ಬಸವಣ್ಣನವರ ಬೋಧನೆಗಳ ಸುರಿಮಳೆಯೇ ಆಗುತ್ತಿದೆ.
ಬಸವಣ್ಣನವರ ನೀತಿ ಬೋಧನೆಗಳು 888 ವರ್ಷಗಳ ಹಿಂದೆಯೇ ಉದಯವಾಗಿದ್ದರೂ, ಅವು ಸರ್ವ ಧರ್ಮಿಯರಿಗೂ ಸದಾಕಾಲ ಅನುಕರಣೀಯ.