ಶ್ರೀನಗರ: ಇಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಕೋವಿಡ್ ವಿರೋಧಿ ಪ್ರತಿಕಾಯವನ್ನು( anti-covid antibodies) ಶ್ರೀನಗರದಲ್ಲಿ ಶೇಕಡಾ 89.77 ರಷ್ಟು ಮತ್ತು ಪುಲ್ವಾಮಾ ಜಿಲ್ಲೆಯಲ್ಲಿ ಶೇಕಡಾ 78.24 ರಷ್ಟು ಜನ ಹೊಂದಿದ್ದಾರೆ ಎಂದು ಕಂಡುಬಂದಿದೆ.
ಕಣಿವೆರಾಜ್ಯದಲ್ಲಿನ 84.3% ರಷ್ಟು ಜನರಲ್ಲಿ ಕೋವಿಡ್ ವಿರೋಧಿ ಪ್ರತಿಕಾಯ
7 ವರ್ಷಕ್ಕಿಂತ ಮೇಲ್ಪಟ್ಟ ಜನರ ಮೇಲೆ ಈ ಸಮೀಕ್ಷೆ ನಡೆಸಲಾಗಿದೆ. ಕಣಿವೆಯ ಪ್ರತಿ ಜಿಲ್ಲೆಯಿಂದ 400 ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿತ್ತು. ಒಟ್ಟು 3586 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ 3025 ಮಾದರಿಗಳಲ್ಲಿ ಕೊರೊನಾ ವಿರೋಧಿ ಪ್ರತಿಕಾಯಗಳು ಇರುವುದು ಪತ್ತೆಯಾಗಿದೆ.
ಸಮುದಾಯ ವೈದ್ಯಕೀಯ ವಿಭಾಗ, ಸರ್ಕಾರಿ ವೈದ್ಯಕೀಯ ಕಾಲೇಜು, ಶ್ರೀನಗರ, ರಾಷ್ಟ್ರೀಯ ಆರೋಗ್ಯ ಮಿಷನ್ ಸಹಯೋಗದೊಂದಿಗೆ ಕೊರೊನಾ ವಿರೋಧಿ ಪ್ರತಿಕಾಯಗಳ ಬಗ್ಗೆ ಸಮೀಕ್ಷೆಯನ್ನು ಆರಂಭಿಸಿದೆ. 84.3% ಜನರು ವೈರಸ್ ವಿರುದ್ಧ ಪ್ರತಿಕಾಯಗಳನ್ನು ಹೊಂದಿದ್ದಾರೆ ಇದರಲ್ಲಿ ಕಂಡು ಹಿಡಿಯಲಾಗಿದೆ.
7 ವರ್ಷಕ್ಕಿಂತ ಮೇಲ್ಪಟ್ಟ ಜನರ ಮೇಲೆ ಈ ಸಮೀಕ್ಷೆ ನಡೆಸಲಾಗಿದೆ. ಕಣಿವೆಯ ಪ್ರತಿ ಜಿಲ್ಲೆಯಿಂದ 400 ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿತ್ತು. ಒಟ್ಟು 3586 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ 3025 ಮಾದರಿಗಳಲ್ಲಿ ಕೊರೊನಾ ವಿರೋಧಿ ಪ್ರತಿಕಾಯಗಳು ಇರುವುದು ಪತ್ತೆಯಾಗಿದೆ. ಹೀಗಾಗಿ, ಕಣಿವೆಯ 10 ಜಿಲ್ಲೆಗಳ ಒಟ್ಟು ಜನಸಂಖ್ಯೆಯ 84.3% ರಷ್ಟು ಜನರು ಪ್ರತಿಕಾಯಗಳನ್ನು ಹೊಂದಿದ್ದಾರೆ .