ಕರ್ನಾಟಕ

karnataka

ETV Bharat / bharat

ಬಡವರಿಗೆ ಸೂರು.. PMAY ಅಡಿ 80 ಲಕ್ಷ ಮನೆ ನಿರ್ಮಾಣಕ್ಕಾಗಿ 48 ಲಕ್ಷ ಕೋಟಿ ರೂ. ಬಜೆಟ್​ನಲ್ಲಿ ಮೀಸಲು

Union Budget-2022-23: ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯ ಸಾಕಾರಕ್ಕೆ ರಾಜ್ಯ ಸರ್ಕಾರಗಳು ವಸತಿ ನಿರ್ಮಾಣಕ್ಕಾಗಿ ಸೂಕ್ತ ಜಾಗವನ್ನು ಗುರುತಿಸಿ ಬಡವರಿಗೆ ಸೂರು ಒದಗಿಸಬೇಕು. ಬಜೆಟ್​ನಲ್ಲಿ ಮೀಸಲಿಟ್ಟಿ ಅನುದಾನವನ್ನು ಯೋಜನೆಯಡಿ ಬಳಸಿಕೊಂಡು ವಸತಿರಹಿತರಿಗೆ ಸೂರು ಒದಗಿಸಿ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ತಿಳಿಸಿದ್ದಾರೆ.

lakh-houses
ಪಿಎಂಎವೈ ಯೋಜನೆ

By

Published : Feb 1, 2022, 5:16 PM IST

ನವದೆಹಲಿ:ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ಆವಾಸ್​ ಯೋಜನೆಯಡಿ(ಪಿಎಂಎವೈ) ಮುಂದಿನ ವರ್ಷದೊಳಗೆ ಬಡವರಿಗಾಗಿ 80 ಲಕ್ಷ ಮನೆಗಳ ನಿರ್ಮಾಣಕ್ಕೆ ಯೋಜಿಸಲಾಗಿದೆ. ಇದಕ್ಕಾಗಿ 48 ಸಾವಿರ ಕೋಟಿ ರೂಪಾಯಿಗಳನ್ನು ಬಜೆಟ್​ನಲ್ಲಿ ಮೀಸಲಿಡಲಾಗಿದೆ.

'ಮುಂದಿನ ಹಣಕಾಸು ವರ್ಷ ಅಂದರೆ 2022-23 ರೊಳಗೆ ದೇಶಾದ್ಯಂತ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಪಿಎಂಎವೈ ಯೋಜನೆಯಡಿ 80 ಲಕ್ಷ ಮನೆಗಳ ನಿರ್ಮಾಣ ಗುರಿ ಹೊಂದಲಾಗಿದೆ. ಇದಕ್ಕಾಗಿ ಬಜೆಟ್​ನಲ್ಲಿ 48 ಸಾವಿರ ಕೋಟಿ ರೂಪಾಯಿ ನೀಡಲಾಗಿದೆ. ಇದು ಆರ್ಥಿಕವಾಗಿ ಹಿಂದುಳಿದ ಮತ್ತು ಬಡತನದ ರೇಖೆಗಿಂತ ಕೆಳಗಿನ ವರ್ಗಕ್ಕೆ ಈ ಯೋಜನೆಯ ಸದುಪಯೋಗ ಸಿಗಲಿದೆ' ಎಂದು ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನೆ ವೇಳೆ ತಿಳಿಸಿದರು.

ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯ ಸಾಕಾರಕ್ಕೆ ರಾಜ್ಯ ಸರ್ಕಾರಗಳು ವಸತಿ ನಿರ್ಮಾಣಕ್ಕಾಗಿ ಸೂಕ್ತ ಜಾಗವನ್ನು ಗುರುತಿಸಿ ಬಡವರಿಗೆ ಸೂರು ಒದಗಿಸಿಬೇಕು. ಬಜೆಟ್​ನಲ್ಲಿ ಮೀಸಲಿಟ್ಟಿ ಅನುದಾನವನ್ನು ಯೋಜನೆಯಡಿ ಬಳಸಿಕೊಂಡು ವಸತಿರಹಿತರಿಗೆ ಸೂರು ಒದಗಿಸಿ ಎಂದು ನಿರ್ಮಲಾ ಸೀತಾರಾಮನ್​ ತಿಳಿಸಿದ್ದಾರೆ.

ಬಜೆಟ್​ ಮಂಡನೆಗೂ ಮುನ್ನ ನಡೆಸಲಾದ ಆರ್ಥಿಕ ಸಮೀಕ್ಷೆಯ ವೇಳೆ 2020-21 ರಲ್ಲಿ 33.99 ಲಕ್ಷ ಮನೆಗಳು ಮತ್ತು 25 ನವೆಂಬರ್​ 2021 ರೊಳಗೆ ಗ್ರಾಮೀಣ ಭಾಗದಲ್ಲಿ 26.20 ಲಕ್ಷ ಮನೆಗಳು ನಿರ್ಮಾಣವಾದರೆ, 2021-22ರ ಹಣಕಾಸು ವರ್ಷದಲ್ಲಿ ನಗರ ಪ್ರದೇಶದಲ್ಲಿ 14.56 ಲಕ್ಷ ಮನೆಗಳು ನಿರ್ಮಾಣವಾಗಿರುವುದು ಸಮೀಕ್ಷೆಯಲ್ಲಿ ತಿಳಿದು ಬಂದಿತ್ತು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details