ಕರ್ನಾಟಕ

karnataka

ETV Bharat / bharat

75ನೇ ಸ್ವಾತಂತ್ರ್ಯೋತ್ಸವ: ಕ್ರಾಂತಿಕಾರಿ ಭಗತ್‌ ಸಿಂಗ್‌ ಇಡೀ ಹೋರಾಟದಲ್ಲಿ ನ್ಯಾಯಕ್ಕಾಗಿ ಹಾರಿಸಿದ್ದು ಒಂದೇ ಗುಂಡು.. - ಭಗತ್ ಸಿಂಗ್, ಸುಖದೇವ್, ರಾಜಗುರು

75 Years of Independence: ವಸಾಹತುಶಾಹಿ ಪೊಲೀಸರ ಅನಾಗರಿಕತೆಗೆ ಪ್ರತೀಕಾರ ತೀರಿಸಿಕೊಳ್ಳಲು ಕ್ರಾಂತಿಕಾರಿ ಭಗತ್‌ ಸಿಂಗ್‌ ನಿರ್ಧರಿಸಿದ್ದರು. ಎಜೆ ಸ್ಕಾಟ್ ಎಂದು ತಪ್ಪಾಗಿ ಭಾವಿಸಿದ ಸಾಮಾನ್ಯ ಪೊಲೀಸ್‌ ಸಾಂಡರ್ಸ್ ಅವರನ್ನು ಹೊಡೆದುರುಳಿಸಿ ಶಿಕ್ಷೆಗೆ ಗುರಿಯಾಗಿದ್ದರು.

75 Years of Independence :Bhagat Singh, a revolutionary who shot only one bullet for justice
ಕ್ರಾಂತಿಕಾರಿ ಭಗತ್‌ ಸಿಂಗ್‌ ಇಡೀ ಹೋರಾಟದಲ್ಲಿ ನ್ಯಾಯಕ್ಕಾಗಿ ಹಾರಿಸಿದ್ದು ಒಂದೇ ಗುಂಡು...

By

Published : Dec 4, 2021, 8:08 PM IST

Updated : Dec 5, 2021, 6:55 AM IST

ಚಂಡೀಗಢ: ಶಾಂತಿಯುತವಾದ ಭಾರತೀಯ ಸ್ವಾತಂತ್ರ್ಯ ಚಳವಳಿಯು ಕೆಲವು ಕ್ರಾಂತಿಕಾರಿಗಳಿಗೆ ಜನ್ಮ ನೀಡಿತ್ತು. ಈ ಸಾಲಿನಲ್ಲಿ ಮೊದಲು ಕೇಳಿ ಬರುವ ಹೆಸರೇ ಭಗತ್ ಸಿಂಗ್. ಇವರ ಜೊತೆಗೆ ಮತ್ತಿಬ್ಬರು ಸುಖದೇವ್ ಮತ್ತು ರಾಜಗುರು. ಮೂವರು ಕ್ರಾಂತಿಕಾರಿಗಳು ತಮ್ಮ ಸಿದ್ಧಾಂತ ಹಾಗೂ ರಾಷ್ಟ್ರದ ಮೇಲಿನ ಪ್ರೀತಿಗಾಗಿ ಯುವ ಪೀಳಿಗೆಗೆ ಇಂದಿಗೂ ಸ್ಫೂರ್ತಿಯಾಗಿದ್ದಾರೆ.

75ನೇ ಸ್ವಾತಂತ್ರ್ಯೋತ್ಸವ: ಕ್ರಾಂತಿಕಾರಿ ಭಗತ್‌ ಸಿಂಗ್‌ ಇಡೀ ಹೋರಾಟದಲ್ಲಿ ನ್ಯಾಯಕ್ಕಾಗಿ ಹಾರಿಸಿದ್ದು ಒಂದೇ ಗುಂಡು...

1907ರ ಸೆಪ್ಟೆಂಬರ್ 28 ರಂದು ಅವಿಭಜಿತ ಭಾರತದ ಲಿಯಾಲ್ಪುರದಲ್ಲಿ ಜನಿಸಿದ್ದ ಭಗತ್ ಸಿಂಗ್, ದೇಹವನ್ನು ಕೊಲ್ಲಬಹುದು. ಆದರೆ, ಬಲವಾದ ಮನಸ್ಸು, ಆಲೋಚನೆಗಳು ಅಮರವಾಗಿ ಉಳಿಯುತ್ತವೆ ಎಂದು ನಂಬಿದ್ದರು. ಅದರಂತೆ ತನ್ನ ಜೀವನದ ಮೂಲಕ ಸಾಬೀತುಪಡಿಸಿದ್ದರು. ಜನಸಾಮಾನ್ಯರಿಗಾಗಿ, ಸಾಮ್ರಾಜ್ಯಶಾಹಿಗಳನ್ನು ಕೆಳಗಿಳಿಸಿ ಕ್ರಾಂತಿಯಿಂದ ಬದುಕಲಿ ಎಂಬ ಘೋಷಣೆಗಳ ಮೂಲಕ ಸಿಂಗ್‌ ಸಾಮಾನ್ಯರ ಬೆಂಬಲಕ್ಕೆ ನಿಂತಿದ್ದವರು. ತಮ್ಮ ಬರಹ, ಭಾಷಣಗಳ ಮೂಲಕ ಮೌಲಾನಾ ಹಸರತ್ ಮೊಹಾನಿಯ ಇಂಕ್ವಿಲಾಬ್ ಜಿಂದಾಬಾದ್ ಅನ್ನು ಜನಪ್ರಿಯಗೊಳಿಸಿದ್ದರು.

ಪೊಲೀಸ್‌ ಸಾಂಡರ್ಸ್ ಪ್ರಕರಣದಲ್ಲಿ ಭಗತ್‌ ಸಿಂಗ್‌ಗೆ ಶಿಕ್ಷೆ

ಭಾರತದಿಂದ ಬ್ರಿಟಿಷರನ್ನು ಓಡಿಸಲು 1928ರಲ್ಲಿ ಭಗತ್‌ ಸಿಂಗ್‌ ಪಣತೊಟ್ಟಿದ್ದರು. ಸೈಮನ್ ಆಯೋಗದ ಆಗಮನ ಹಾಗೂ ಮಹಾತ್ಮ ಗಾಂಧಿಯವರ ಅಹಿಂಸಾ ಚಳವಳಿ ಬೆಂಬಲಿಸಿದ್ದ ಲಾಲ್ ಲಜಪತ್ ರಾಯ್ ಅವರ ಮರಣವು ಭಗತ್ ಸಿಂಗ್ ಅವರ ಜೀವನದಲ್ಲಿ ನಿರ್ಣಾಯಕ ಕ್ಷಣವಾಗಿತ್ತು. 7 ಸದಸ್ಯರ ಸೈಮನ್ ಆಯೋಗದ ಆಗಮನವು ವ್ಯಾಪಕ ಪ್ರತಿಭಟನೆಗೆ ಕಾರಣವಾಯಿತು. ಬ್ರಿಟಿಷರ ಹಿಂಸೆಗೆ ತಕ್ಕ ಪಾಠ ಕಲಿಸಲು ಅವರು ಇಡೀ ರಾಷ್ಟ್ರದ ಪರವಾಗಿ ನಿಂತರು. ವಸಾಹತುಶಾಹಿ ಪೊಲೀಸರ ಅನಾಗರಿಕತೆಗೆ ಪ್ರತೀಕಾರ ತೀರಿಸಿಕೊಳ್ಳಲು ನಿರ್ಧರಿಸಿದರು. ಅವರು ಎಜೆ ಸ್ಕಾಟ್ ಎಂದು ತಪ್ಪಾಗಿ ಭಾವಿಸಿದ ಸಾಮಾನ್ಯ ಪೊಲೀಸ್‌ ಸಾಂಡರ್ಸ್ ಅವರನ್ನು ಹೊಡೆದುರುಳಿಸಿ ದೇಶಭ್ರಷ್ಟರಾದರು.

1929ರ 8 ಏಪ್ರಿಲ್‌ನಲ್ಲಿ ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್ತ ದೆಹಲಿಯ ಸೆಂಟ್ರಲ್ ಲೆಜಿಸ್ಲೇಟಿವ್ ಅಸೆಂಬ್ಲಿ ಹಾಲ್‌ನ ಗ್ಯಾಲರಿಯಿಂದ ಬಾಂಬ್ ಎಸೆದಿದ್ದರು. ಕಿವುಡ ಸರ್ಕಾರವನ್ನು ಎಬ್ಬಿಸಲು ಸ್ಫೋಟಗಳು ಅಗತ್ಯವಿದೆ ಎಂದು ಕರಪತ್ರಗಳನ್ನು ಎಸೆದು ಸುದ್ದಿಯಾದರು. ಇದು ಕೇವಲ ಸ್ಫೋಟ ಮತ್ತು ಯಾರಿಗೂ ಗಾಯವಾಗದ ಕಾರಣ, ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಆದರೆ, ಹೇಗಾದರೂ ಮಾಡಿ ಭಗತ್ ಸಿಂಗ್ ನನ್ನು ಗಲ್ಲಿಗೇರಿಸಲು ಬಯಸಿದ ಬ್ರಿಟಿಷರು ಸೌಂಡರ್ಸ್ ಹತ್ಯೆಯ ತನಿಖೆ ಆರಂಭಿಸಿದರು.

ನಿಯಮ ಉಲ್ಲಂಘಿಸಿ ಗಲ್ಲು ಶಿಕ್ಷೆ

1930ರ ಅಕ್ಟೋಬರ್ 7 ರಂದು ನ್ಯಾಯಮಂಡಳಿಯು ಸಾಂಡರ್ಸ್ ಹತ್ಯೆಯಲ್ಲಿ ಭಗತ್ ಸಿಂಗ್, ಸುಖದೇವ್ ಹಾಗೂ ರಾಜಗುರು ತಪ್ಪಿತಸ್ಥರೆಂದು ಪರಿಗಣಿಸಿ ಮರಣದಂಡನೆ ವಿಧಿಸಿತು. 1931ರ ಮಾರ್ಚ್‌ 23 ರಂದು ಲಾಹೋರ್ ಜೈಲಿನ ಹೊರಗೆ ಸಂಜೆ ಈ ಮೂವರು ಕ್ರಾಂತಿಕಾರಿಗಳನ್ನು ಗಲ್ಲಿಗೇರಿಸಿದರು. ಬ್ರಿಟಿಷ್ ಆಡಳಿತಗಾರರ ಕೋಪ ಮತ್ತು ಹತಾಶೆ ಅಲ್ಲಿಗೆ ನಿಲ್ಲಲಿಲ್ಲ. ಹುತಾತ್ಮರ ಶವಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲು ನಿರಾಕರಿಸಿ, ಜೈಲಿನ ಹಿಂಬದಿಯ ಗೋಡೆ ಒಡೆದು ಶವಗಳನ್ನು ಹೊರತೆಗೆದು ಹುಸೇನಿವಾಲಾದಲ್ಲಿ ಅವುಗಳನ್ನ ಸುಟ್ಟು ಸಟ್ಲೆಜ್ ನದಿಗೆ ಎಸೆದರು.

ಭಗತ್‌ ಸಿಂಗ್‌ ಅವರ ಪೂರ್ವಜರ ಮನೆಯನ್ನು ಈಗಲೂ ಪಾಕಿಸ್ತಾನದ ಲಾಹೋರ್‌ನ ಭಗತ್ ಸಿಂಗ್ ಸ್ಮಾರಕ ಪ್ರತಿಷ್ಠಾನವು ರಕ್ಷಿಸಿದೆ. ಲಾಹೋರ್ ಮೂಲದ ಭಗತ್ ಸಿಂಗ್ ಮೆಮೋರಿಯಲ್ ಫೌಂಡೇಶನ್ ಭಗತ್ ಸಿಂಗ್ ರಾಷ್ಟ್ರೀಯ ಹುತಾತ್ಮ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸುತ್ತಿದೆ. ಭಗತ್ ಸಿಂಗ್ ಅವರ ಕೆಚ್ಚೆದೆಯ ಹೋರಾಟ ಭಾರತೀಯರು ಹೆಮ್ಮೆ ಪಡುವಂತದ್ದು.

ಇದನ್ನೂ ಓದಿ:75ನೇ ಸ್ವಾತಂತ್ರ್ಯೋತ್ಸವ: ಮಧ್ಯಪ್ರದೇಶದ ಹರ್ದಾದಲ್ಲಿನ ಸೋಕಲ್‌ ಕುಟುಂಬದ ಕೊಡುಗೆ ಸ್ಮರಣೀಯ...

Last Updated : Dec 5, 2021, 6:55 AM IST

ABOUT THE AUTHOR

...view details