ಕರ್ನಾಟಕ

karnataka

ETV Bharat / bharat

ನೀರಿನ ಹೊಂಡದಲ್ಲಿ ಮುಳುಗಿ ಆರು ಮಕ್ಕಳ ದಾರುಣ ಸಾವು

ಗುರುಗ್ರಾಮ್‌ನಲ್ಲಿ ಮಳೆ ನೀರಿನ ಹೊಂಡದಲ್ಲಿ ಸ್ನಾನ ಮಾಡಲೆಂದು ಇಳಿದು ಆರು ಮಕ್ಕಳು ಮುಳುಗಿದ್ದಾರೆ.

6-children-drowned-in-gurugram-pond
ಮಳೆಯ ನೀರಿನ ಹೊಂಡದಲ್ಲಿ ಮುಳುಗಿ ಆರು ಮಕ್ಕಳ ದಾರುಣ ಸಾವು

By

Published : Oct 9, 2022, 11:06 PM IST

ಗುರುಗ್ರಾಮ್ (ಹರಿಯಾಣ): ಹರಿಯಾಣದ ಗುರುಗ್ರಾಮ್‌ನಲ್ಲಿ ಭಾನುವಾರ ಭಾರಿ ದುರಂತ ಸಂಭವಿಸಿದೆ. ಮಳೆಯ ನೀರಿನ ಹೊಂಡದಲ್ಲಿ ಆರು ಮಕ್ಕಳು ಮುಳುಗಿ ಸಾವನ್ನಪ್ಪಿದ್ದಾರೆ. ಮೃತ ಎಲ್ಲ ಮಕ್ಕಳು 8ರಿಂದ 13 ವರ್ಷದೊಳಗಿವರಾಗಿದ್ದಾರೆ.

ಕಳೆದ ಎರಡು ದಿನಗಳಿಂದ ಗುರುಗ್ರಾಮದಲ್ಲಿ ಮಳೆಯಾಗುತ್ತಿದೆ. ಮಳೆಯಿಂದಾಗಿ ಕೆಲವೆಡೆ ಜಲಾವೃತವಾಗಿದೆ. ಇದರ ನಡುವೆ ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆರು ಜನ ಮಕ್ಕಳು ಹೊಂಡದಲ್ಲಿ ಸ್ನಾನ ಮಾಡಲೆಂದು ಇಳಿದು, ಮುಳುಗಿದ್ದಾರೆ.

ಇದನ್ನೂ ಓದಿ:ರಾಷ್ಟ್ರೀಯ ಉದ್ಯಾನವನದಲ್ಲಿ ಘೇಂಡಾಮೃಗಕ್ಕೆ ಗಾಯ: ಟ್ರಕ್​ ಚಾಲಕನಿಗೆ 14 ಸಾವಿರ ದಂಡ

ಇತ್ತ, ಮಕ್ಕಳು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಂತೆಯೇ ಎನ್‌ಡಿಆರ್‌ಎಫ್ ತಂಡ, ಅಗ್ನಿಶಾಮಕ ದಳ, ಗುರುಗ್ರಾಮ್ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಕಾರ್ಯಾಚರಣೆ ಆರಂಭಿಸಿ ಎಲ್ಲ ಮಕ್ಕಳ ಮೃತದೇಹಗಳನ್ನು ಹೊರ ತೆಗೆದಿದ್ದಾರೆ.

ಇದನ್ನೂ ಓದಿ:ಬೆಂಕಿ ಬಿದ್ದ ಕಾರಿನಿಂದ 6 ಜನರನ್ನು ರಕ್ಷಿಸಿದ ಸೈನಿಕರು

ABOUT THE AUTHOR

...view details