ಆಗ್ರಾ:ಉತ್ತರಪ್ರದೇಶದ ಮೈನ್ಪುರಿ ಜಿಲ್ಲೆಯ ಯೋಧರೊಬ್ಬರ ಜಮೀನಿನಲ್ಲಿ ಭೂಮಿ ಸಮತಟ್ಟು ಮಾಡುವಾಗ 4 ಸಾವಿರ ವರ್ಷಗಳ ಹಿಂದಿನ(1800 ರಿಂದ 1500 BC) ತಾಮ್ರದ ಆಯುಧಗಳು ಕಂಡುಬಂದಿವೆ. ಕುರವಲಿ ಗ್ರಾಮದ ನಿವಾಸಿಯಾದ ಬಹದ್ದೂರ್ ಸಿಂಗ್ ಎಂಬುವರು ತಗ್ಗು-ದಿಮ್ಮಿಗಳಿಂದ ಕೂಡಿದ್ದ ಜಮೀನನ್ನು ಸಮತಟ್ಟು ಮಾಡುತ್ತಿದ್ದರು. ಈ ವೇಳೆ ಸಮತಟ್ಟು ಮಾಡುವ ಯಂತ್ರಕ್ಕೆ ನೆಲದಲ್ಲಿ ಹುದುಗಿಸಿಟ್ಟಿದ್ದ ತಾಮ್ರದ ಆಯುಧಗಳು ತಾಕಿ ಹೊರಬಂದಿವೆ. ಬಳಿಕ ಜಮೀನು ಮಾಲೀಕ ಮತ್ತು ಜನರು ಅದರ ಸುತ್ತಲೂ ಅಗೆದಾಗ 77 ತಾಮ್ರದ ಆಯುಧಗಳು ಸಿಕ್ಕಿವೆ.
ಬಳಿಕ ಈ ವಿಷಯವನ್ನು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು, ಕ್ರಿಸ್ತಪೂಪೂರ್ವ ಕಾಲದ ಆಯುಧಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ 8 ದಿನ ಅಲ್ಲಿಯೇ ಠಿಕಾಣಿ ಹೂಡಿ ಇನ್ನಷ್ಟು ಆಯುಧಗಳ ಬಗ್ಗೆ ಪತ್ತೆ ಕಾರ್ಯ ನಡೆಸಿದ್ದಾರೆ.