ಕೋರಾಪುಟ್(ಒಡಿಶಾ):ಮಳೆ ನೀರಿನಿಂದ ತುಂಬಿಕೊಂಡಿದ್ದ ಹೊಂಡಕ್ಕೆ ಇಳಿದಿದ್ದ ನಾಲ್ವರು ಬಾಲಕರು ಈಜು ಬಾರದೇ ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ಒಡಿಶಾದಲ್ಲಿ ಇಂದು ನಡೆದಿದೆ.
ಕೋರಾಪುಟ್ ಜಿಲ್ಲೆಯ ಮಜಿಗುಡಾ ಗ್ರಾಮದಲ್ಲಿ ರಸ್ತೆ ನಿರ್ಮಾಣದ ಮಣ್ಣಿಗಾಗಿ ದೊಡ್ಡ ಗಾತ್ರದಲ್ಲಿ ಹೊಂಡ ಅಗೆಯಲಾಗಿತ್ತು. ಈಚೆಗೆ ಸುರಿದ ಮಳೆಯಿಂದ ಈ ಹೊಂಡದಲ್ಲಿ ನೀರು ತುಂಬಿಕೊಂಡಿದೆ.
ಇಂದು ಮಧ್ಯಾಹ್ನದ ವೇಳೆ ಹೊಂಡದ ಪಕ್ಕದಲ್ಲೇ ಆಟವಾಡುತ್ತಿದ್ದ ನಾಲ್ವರು ಬಾಲಕರು ನೀರಿಗಿಳಿದಿದ್ದು, ಈಜು ಬಾರದ ಕಾರಣ ಎಲ್ಲರೂ ಮುಳುಗಿ ಸಾವನ್ನಪ್ಪಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ನಾಲ್ವರ ಮೃತದೇಹವನ್ನು ನೀರಿನಿಂದ ಹೊರತೆಗೆದು ಕುಟುಂಬಸ್ಥರಿಗೆ ನೀಡಲಾಗಿದೆ. ಈ ಸಂಬಂಧ ಕೋರಾಪುಟ್ ಸದರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ನಿರಂತರವಾಗಿ ಪತ್ತೆಯಾಗುತ್ತಿವೆ ಜಿಂಕೆಗಳ ಕಳೇಬರ: ಈವರೆಗೆ 13 ಸಾವು