ಕರ್ನಾಟಕ

karnataka

ETV Bharat / bharat

ಕಾಲ್​ ಸೆಂಟರ್​​​ ಮೂಲಕ 15 ಕೋಟಿ ರೂ. ವಂಚನೆ: 37 ಆರೋಪಿಗಳ ಬಂಧನ - ದೆಹಲಿ ಕಾಲ್​ಸೆಂಟರ್​ ಸುದ್ದಿ

ಬಿಂದಾಪುರ ಮತ್ತು ಜನಕ್​ಪುರಿ ಪ್ರದೇಶಗಳಲ್ಲಿ ಇರುವ ಕಾಲ್​ಸೆಂಟರ್​ಗಳಿಂದ ವಿದೇಶದಲ್ಲಿರುವ ಜನರನ್ನು ವಂಚಿಸಲಾಗುತ್ತಿತ್ತು. ಕಾಲ್​ ಸೆಂಟರ್​ನಲ್ಲಿ ಕೆಲಸ ಮಾಡುವವರು ವಿದೇಶದಲ್ಲಿರುವವರಿಗೆ ಕರೆ ಮಾಡಿ, ಅವರಿಂದ ಹಣ ಪಡೆಯುತ್ತಿದ್ದರು. ಹೀಗೆ ಮಾಡಿ ಸುಮಾರು 15 ಕೋಟಿ ರೂ. ಲಪಟಾಯಿಸಲಾಗಿತ್ತು.

ಬಿಂದಾಪುರ ಮತ್ತು ಜನಕ್​ಪುರಿ ಪ್ರದೇಶಗಳಲ್ಲಿ ಇರುವ ಕಾಲ್​ಸೆಂಟರ್​
ಬಿಂದಾಪುರ ಮತ್ತು ಜನಕ್​ಪುರಿ ಪ್ರದೇಶಗಳಲ್ಲಿ ಇರುವ ಕಾಲ್​ಸೆಂಟರ್​

By

Published : Mar 23, 2021, 10:52 PM IST

ನವದೆಹಲಿ: ಇಲ್ಲಿನ ಜನಕ್‌ಪುರಿ ಮತ್ತು ಬಿಂದಾಪುರ ಪ್ರದೇಶದಲ್ಲಿ ಕಾಲ್ ​ಸೆಂಟರ್ ತೆರೆಯುವ ಮೂಲಕ ವಿದೇಶದಲ್ಲಿರುವ ವ್ಯಕ್ತಿಗಳಿಂದ ಕೋಟಿ ಕೋಟಿ ರೂಪಾಯಿ ಲಪಟಾಯಿಸಿರುವ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

ಸೈಬರ್ ಸೆಲ್​ನಂತಹ ಮೂರು ಕಾಲ್ ಸೆಂಟರ್​ಗಳ ಮೇಲೆ ದಾಳಿ ನಡೆಸಿ, ಅಲ್ಲಿಂದ ಒಟ್ಟು 37 ಜನರನ್ನು ಬಂಧಿಸಲಾಗಿದೆ. ಈ ಗ್ಯಾಂಗ್ ಕಳೆದ ಒಂದು ವರ್ಷದಲ್ಲಿ ಸುಮಾರು 15 ಕೋಟಿ ರೂಪಾಯಿ ವಂಚಿಸಿದೆ. ಈ ಕಾಲ್ ಸೆಂಟರ್​ಗಳಿಂದ ಹೆಚ್ಚಿನ ಪ್ರಮಾಣದ ಕಂಪ್ಯೂಟರ್ ಮತ್ತು ಮೊಬೈಲ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಾಲ್​ ಸೆಂಟರ್​​​ ಮೂಲಕ ಸುಮಾರು 15 ಕೋಟಿ ರೂ. ವಂಚನೆ

ಬಿಂದಾಪುರ ಮತ್ತು ಜನಕ್​ಪುರಿ ಪ್ರದೇಶಗಳಲ್ಲಿ ಇರುವ ಕಾಲ್​ ಸೆಂಟರ್​ಗಳಿಂದ ವಿದೇಶದಲ್ಲಿರುವ ಜನರು ಮೋಸ ಹೋಗುತ್ತಿದ್ದಾರೆ ಎಂದು ಸೈಬರ್ ಸೆಲ್ ತಂಡಕ್ಕೆ ತಿಳಿಸಲಾಗಿದೆ ಎಂದು ಡಿಸಿಪಿ ಅನಿಮೆಶ್ ರಾಯ್ ತಿಳಿಸಿದ್ದಾರೆ. ಈ ಮಾಹಿತಿಯ ಮೇರೆಗೆ ಇನ್ಸ್‌ಪೆಕ್ಟರ್ ಸಜ್ಜನ್ ಸಿಂಗ್ ಮತ್ತು ಪ್ರವೀಣ್ ಅವರ ತಂಡ ಬಿಂದಾಪುರ ಮತ್ತು ಜನಕ್‌ಪುರಿಯಲ್ಲಿನ 3 ಕಾಲ್ ಸೆಂಟರ್‌ಗಳ ಮೇಲೆ ದಾಳಿ ನಡೆಸಿದೆ.

ಇವುಗಳಲ್ಲಿ, ಜನಕ್‌ಪುರಿಯಲ್ಲಿರುವ ಎರಡೂ ಕಾಲ್ ಸೆಂಟರ್‌ಗಳನ್ನು ಒಂದೇ ಗುಂಪು ನಡೆಸುತ್ತಿತ್ತು. ಈ ಸಂಬಂಧ ಎರಡು ಎಫ್‌ಐಆರ್ ದಾಖಲಿಸುವ ಮೂಲಕ ಒಟ್ಟು 37 ಜನರನ್ನು ಬಂಧಿಸಲಾಗಿದೆ. ಆರೋಪಿಗಳಲ್ಲಿ ಮ್ಯಾನೇಜರ್, ಮೇಲ್ವಿಚಾರಕ, ಆಪರೇಟರ್ ಇತ್ಯಾದಿ ಸೇರಿದ್ದಾರೆ. ಈ ಪೈಕಿ 9 ಆರೋಪಿಗಳು ಬಿಂದಾಪುರ ಕಾಲ್ ಸೆಂಟರ್​ನವರಾಗಿದ್ದು, 28 ಆರೋಪಿಗಳು ಜನಕ್​​ಪುರಿಯ ಎರಡು ಕಾಲ್ ಸೆಂಟರ್​ನಲ್ಲಿ ಕೆಲಸ ಮಾಡುವವರಾಗಿದ್ದಾರೆ.

ಓದಿ:ಬಿಹಾರ ವಿಧಾನಸಭೆಯಲ್ಲಿ ಪೊಲೀಸ್ ಮಸೂದೆಯಿಂದ ಕೋಲಾಹಲ

ಈ ಸೆಂಟರ್​ಗಳಲ್ಲಿದ್ದ 56 ಡೆಸ್ಕ್‌ಟಾಪ್ ಮತ್ತು 41 ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೂರು ಕಾಲ್ ಸೆಂಟರ್​​ಗಳು ಈವರೆಗೆ ಸಾವಿರಾರು ಜನರಿಂದ 15 ಕೋಟಿ ರೂ. ವಸೂಲಿ ಮಾಡಿವೆ. ಅವರು ಅಮೆರಿಕ ಸೇರಿದಂತೆ ವಿವಿಧ ದೇಶಗಳ ಜನರನ್ನು ಸಂಪರ್ಕಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಡಿಸಿಪಿ ಆಯೇಶ್ ರಾಯ್ ಅವರ ಪ್ರಕಾರ, ಈ ಗ್ಯಾಂಗ್‌ನಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಇಂಗ್ಲಿಷ್ ಮಾತನಾಡುವಲ್ಲಿ ಪರಿಣಿತರಾಗಿದ್ದಾರೆ. ಅವರ ಮಾತಿನ ಶೈಲಿ ವಿದೇಶಿ ಜನರಂತೆ ಇರುವುದರಿಂದ ಅವರು ಬಲಿಪಶು ಆಗುತ್ತಿದ್ದರು. ಕರೆ ಮಾಡುವವರು ಪ್ರತಿ ತಿಂಗಳು 25ರಿಂದ 40 ಸಾವಿರ ರೂಪಾಯಿಗಳನ್ನು ಪಡೆಯುತ್ತಿದ್ದರು. ತಂಡದ ನಾಯಕ ಪ್ರತಿ ತಿಂಗಳು 60ರಿಂದ 70 ಸಾವಿರ ರೂಪಾಯಿಗಳನ್ನು ಪಡೆಯುತ್ತಿದ್ದರೆ, ಮ್ಯಾನೇಜರ್ ತಿಂಗಳಿಗೆ ಒಂದು ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದ ಎನ್ನಲಾಗಿದೆ.

ABOUT THE AUTHOR

...view details