ಕರ್ನಾಟಕ

karnataka

By

Published : Mar 24, 2021, 6:49 AM IST

ETV Bharat / bharat

ದೆಹಲಿಯಲ್ಲಿ ಮೂರು ಅಕ್ರಮ ಕಾಲ್ ಸೆಂಟರ್​ಗಳ ಮೇಲೆ ದಾಳಿ: 37 ಮಂದಿ ಬಂಧನ

ಯುಎಸ್ ಡ್ರಗ್ ಎನ್‌ಫೋರ್ಸ್‌ಮೆಂಟ್​ನ ಸಿಬ್ಬಂದಿ ಎಂಬಂತೆ ನಟಿಸಿ ವಿದೇಶಿ ಪ್ರಜೆಗಳನ್ನು ವಂಚಿಸುತ್ತಿದ್ದ ಮೂರು ಅಕ್ರಮ ಕಾಲ್ ಸೆಂಟರ್​ಗಳ ಮೇಲೆ ದಾಳಿ ನಡೆಸಿದ ದೆಹಲಿ ಪೊಲೀಸರು, 37 ಜನರನ್ನು ಬಂಧಿಸಿದ್ದಾರೆ.

3 illegal call centres busted in Delhi, 37 held for duping foreign nationals
ದೆಹಲಿಯಲ್ಲಿ ಮೂರು ಅಕ್ರಮ ಕಾಲ್ ಸೆಂಟರ್​ಗಳ ಮೇಲೆ ದಾಳಿ

ನವದೆಹಲಿ:ಆಪಲ್ ಮತ್ತು ಅಮೆಜಾನ್ ಟೆಕ್ ಸಪೋರ್ಟ್​ಗಾಗಿ ಸೇವೆಗಳನ್ನು ಒದಗಿಸುವಂತೆ ನಟಿಸಿ ವಿದೇಶಿ ಪ್ರಜೆಗಳನ್ನು ವಂಚಿಸಿದ ಮೂರು ಅಕ್ರಮ ಕಾಲ್ ಸೆಂಟರ್​ಗಳ ಮೇಲೆ ದಾಳಿ ನಡೆಸಿದ ದೆಹಲಿ ಪೊಲೀಸರು, 37 ಜನರನ್ನು ಬಂಧಿಸಿದ್ದಾರೆ.

ವಿದೇಶಿಗರನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು, ತಾವು ಯುಎಸ್ ಡ್ರಗ್ ಎನ್‌ಫೋರ್ಸ್‌ಮೆಂಟ್​ನ ಸಿಬ್ಬಂದಿಯಂದು ಎಂದು ನಟಿಸಿ ಧ್ವನಿ ರೆಕಾರ್ಡಿಂಗ್ ಕಳುಹಿಸುತ್ತಿದ್ದರು. ಬಳಿಕ ಅವರಿಂದ ಹಣ ಸುಲಿಗೆ ಮಾಡುತ್ತಿದ್ದರು.

ಜನಕ್​ಪುರಿಯಲ್ಲಿ ಎರಡು ಹಾಗೂ ಬಿಂದಾಪುರದಲ್ಲಿ ಒಂದು ಅಕ್ರಮ ಕಾಲ್​ ಸೆಂಟರ್​ ನಡೆಸಲಾಗುತ್ತಿದೆ ಎಂಬ ರಹಸ್ಯ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ವವಸ್ಥಾಪಕರು, ಮೇಲ್ವಿಚಾರಕರು ಮತ್ತು ನಿರ್ವಾಹಕರು ಸೇರಿ ಒಟ್ಟು 37 ಮಂದಿಯನ್ನು ಬಂಧಿಸಿದ್ದಾರೆ. ಈ ಪೈಕಿ 9 ಮಂದಿ ಬಿಂದಾಪುರ ಕೇಂದ್ರದಲ್ಲಿ ಮತ್ತು 28 ಮಂದಿ ಜನಕ್‌ಪುರಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು.

ಅಕ್ರಮ ಕಾಲ್​ ಸೆಂಟರ್​ಗಳ ವಿರುದ್ಧ ಎರಡು ಪತ್ಯೇಕ ಪ್ರಕರಣಗಳು ದಾಖಲಾಗಿದ್ದು, ಮೂರು ಕಾಲ್​ ಸೆಂಟರ್​ಗಳಿಂದ 56 ಡೆಸ್ಕ್‌ಟಾಪ್‌ಗಳು ಮತ್ತು 41 ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ, 10 ಕೋಟಿಗೂ ಅಧಿಕ ಜನರನ್ನು ಈವರೆಗೆ ಸಂಪರ್ಕಿಸಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ಓದಿ:ಪ್ರಜಾಪ್ರಭುತ್ವದ ನಾಶ: ದೆಹಲಿ ಸರ್ಕಾರದ ತಿದ್ದುಪಡಿ ಮಸೂದೆ ಬಗ್ಗೆ ಖರ್ಗೆ ಆಕ್ರೋಶ

ABOUT THE AUTHOR

...view details