ನವದೆಹಲಿ: 'ಆಪರೇಷನ್ ಗಂಗಾ' ಅಡಿಯಲ್ಲಿ ಉಕ್ರೇನ್ನಿಂದ 11 ವಿಶೇಷ ನಾಗರಿಕ ವಿಮಾನಗಳ ಮೂಲಕ 2,135 ಭಾರತೀಯ ನಾಗರಿಕರು ಇಂದು ಮನೆಗೆ ಮರಳಿದ್ದಾರೆ.
ಇಂದು ವಿಶೇಷ ನಾಗರಿಕ ವಿಮಾನಗಳಲ್ಲಿ ಒಂಬತ್ತು ದೆಹಲಿಗೆ ಬಂದಿಳಿದರೆ, ಎರಡು ಮುಂಬೈಗೆ ಬಂದಿವೆ. ಬುಡಾಪೆಸ್ಟ್‌ನಿಂದ ಆರು ವಿಮಾನಗಳು, ಬುಕಾರೆಸ್ಟ್‌ನಿಂದ ಎರಡು, ರ್ಜೆಸ್ಜೋವ್‌ನಿಂದ ಎರಡು ಮತ್ತು ಕೊಸಿಸ್‌ನಿಂದ ಒಂದು ವಿಮಾನಗಳು ಬಂದಿವೆ.
ಇದನ್ನೂ ಓದಿ:ಸಾರಿಗೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದಾಗ ಕಾಮುಕನಿಂದ ಕಿರುಕುಳ.. ಫೇಸ್ಬುಕ್ನಲ್ಲಿ ವಿಡಿಯೋ ಸಹಿತ ಘಟನೆ ಬಿಚ್ಚಿಟ್ಟ ಶಿಕ್ಷಕಿ
ಫೆಬ್ರವರಿ 22 ರಂದು ವಿಶೇಷ ವಿಮಾನಗಳು ಪ್ರಾರಂಭವಾದಾಗಿನಿಂದ ಸುಮಾರು 16,000 ಭಾರತೀಯರನ್ನು ಇಲ್ಲಿಯವರೆಗೆ ಸ್ಥಳಾಂತರಿಸಲಾಗಿದೆ.
ಸೋಮವಾರ ಎಂಟು ವಿಶೇಷ ವಿಮಾನಗಳು ವಿದ್ಯಾರ್ಥಿಗಳನ್ನು ಕರೆತರಲು ಹೋಗಲಿವೆ. ಇದರಲ್ಲಿ ಬುಡಾಪೆಸ್ಟ್ (5), ಸುಸೇವಾ (2) ಮತ್ತು ಬುಕಾರೆಸ್ಟ್ (1) ಗೆ ಹಾರಲಿದ್ದು, 1,500 ಕ್ಕೂ ಹೆಚ್ಚು ಭಾರತೀಯರನ್ನು ಮರಳಿ ಮನೆಗೆ ಸ್ಥಳಾಂತರಿಸುವ ನಿರೀಕ್ಷೆಯಿದೆ.