ನವದೆಹಲಿ: 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಜನವರಿ 3ರಿಂದ ಕೋವಿಡ್-19 ಲಸಿಕಾ ಅಭಿಯಾನ ಪ್ರಾರಂಭಿಸಲಾಗಿದೆ. ಈವರೆಗೆ 2 ಕೋಟಿ ಮಕ್ಕಳು ತಮ್ಮ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.
ಜನವರಿ 16, 2021ರಂದು ಪ್ರಾರಂಭವಾದ 'ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್' ಅಡಿಯಲ್ಲಿ ಭಾರತವು ಈವರೆಗೆ ಒಟ್ಟು 150.06 ಕೋಟಿ ಲಸಿಕೆ ಡೋಸ್‌ಗಳನ್ನು ಯಶಸ್ವಿಯಾಗಿ ನೀಡಿದೆ.
ಹೆಚ್ಚುವರಿಯಾಗಿ, ಕೇಂದ್ರ ಸರ್ಕಾರವು ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರು ಮತ್ತು ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಸ್ ನೀಡಲು ಯೋಜನೆ ರೂಪಿಸಿದೆ ಎಂದು ಹೇಳಿದ್ದಾರೆ.
ಓದಿ:Weekend Curfew : ಕರ್ಫ್ಯೂಗೆ ಹಲವೆಡೆ ಉತ್ತಮ ಸ್ಪಂದನೆ.. ಕೆಲವೆಡೆ ನಿಯಮ ಉಲ್ಲಂಘನೆ..
ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಸ್ ನೀಡುವ ಕುರಿತು ಮಾಹಿತಿ ನೀಡಿದ ಭಾರತದ ಕೋವಿಡ್-19 ಕಾರ್ಯಪಡೆ ಅಧ್ಯಕ್ಷ ಡಾ. ವಿ ಕೆ ಪೌಲ್, ಮುನ್ನೆಚ್ಚರಿಕಾ ಕ್ರಮವಾಗಿ ಜನವರಿ 10ರಿಂದ ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಸ್ ನೀಡಲಾಗುವುದು.
ಅರ್ಹರಿಗೆ ಲಸಿಕೆಗಳನ್ನು ಮಿಶ್ರಣ ಮಾಡಿ ನೀಡುವುದಿಲ್ಲ. ಕೋವಿಶೀಲ್ಡ್ ಲಸಿಕೆಯ ಮೊದಲೆರಡು ಡೋಸ್ ಪಡೆದವರಿಗೆ ಅದೇ ಲಸಿಕೆಯ 3ನೇ ಡೋಸ್ ಮತ್ತು ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಪಡೆದವರಿಗೆ 3ನೇ ಡೋಸ್ ಆಗಿ ಅದೇ ಲಸಿಕೆ ನೀಡಲಾಗುತ್ತದೆ ಎಂದರು.
ಓದಿ:ಒಂದೂವರೆ ಲಕ್ಷದ ಸನಿಹಕ್ಕೆ ಕೊರೊನಾ ಪ್ರಕರಣಗಳು.. ಏರುತ್ತಲೇ ಇದೆ ಕೋವಿಡ್ ಭಯದ ಅಲೆ!