ಬೆಲ್ಲಂಕೊಂಡ(ತೆಲಂಗಾಣ):ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರೈತನ ಒಂದು ಎಕರೆ ಜಮೀನಿನಲ್ಲೇ ಬರೋಬ್ಬರಿ 19 ವಿದ್ಯುತ್ ಕಂಬಗಳು ನಿರ್ಮಾಣಗೊಂಡಿದ್ದು, ಇದರಿಂದ ಸಂಕಷ್ಟಕ್ಕೊಳಗಾಗಿದ್ದಾನೆ.
ತೆಲಂಗಾಣದ ಬೆಲ್ಲಂಕೊಂಡ ಮಲ್ಲಾರೆಡ್ಡಿ ಉಳಿಮೆ ಮಾಡಲು ಕೇವಲ ಒಂದು ಎಕರೆ ಜಮೀನು ಹೊಂದಿದ್ದಾರೆ. ವಿದ್ಯುತ್ ಉಪಕೇಂದ್ರದ ಪಕ್ಕದಲ್ಲೇ ಜಮೀನು ಇರುವುದರಿಂದ ಇಷ್ಟೊಂದು ವಿದ್ಯುತ್ ಕಂಬ ನಿರ್ಮಾಣ ಮಾಡಲಾಗಿದೆ. ಕಂಬ ನಿರ್ಮಾಣ ಮಾಡುವ ಸಂದರ್ಭದಲ್ಲಿ ಅಧಿಕಾರಿಗಳು ಸರಿಯಾಗಿ ಸಮೀಕ್ಷೆ ನಡೆಸಿಲ್ಲ ಎಂದು ರೈತ ಆಕ್ರೋಶ ಹೊರಹಾಕಿದ್ದಾನೆ.
ಜಮೀನಿನಲ್ಲಿ ಇಷ್ಟೊಂದು ವಿದ್ಯುತ್ ಕಂಬ ನಿರ್ಮಿಸುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಧಿಕಾರಿಗಳೊಂದಿಗೆ ರೈತ ಜಗಳವಾಡಿದ್ದಾರೆ. ಆದರೆ, ಇದರಿಂದ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾನೆ.