ಕರ್ನಾಟಕ

karnataka

ETV Bharat / bharat

ನಿಲ್ಲದ ಉಗ್ರರ ಉಪಟಳ.. ಜಮ್ಮು-ಕಾಶ್ಮೀರದಲ್ಲಿ ಈ ವರ್ಷ ಸಾವು-ನೋವುಗಳ ಸಂಖ್ಯೆ ಇಷ್ಟಿವೆ..

ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 321 ಜನ ಸಾವನ್ನಪ್ಪಿದ್ದರು. ಇದರಲ್ಲಿ 232 ಉಗ್ರರು, 56 ಭದ್ರತಾ ಪಡೆ ಸಿಬ್ಬಂದಿ ಮತ್ತು 33 ನಾಗರಿಕರೂ ಸೇರಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಾರಿ ಉಂಟಾದ ಅನಾಹುತ ಕಡಿಮೆ ಎಂದೇ ಹೇಳಬಹುದು..

ಜಮ್ಮುಕಾಶ್ಮೀರದಲ್ಲಿ ಈ ವರ್ಷದಲ್ಲಿ ಉಂಟಾದ ಸಾವುನೋವುಗಳೆಷ್ಟು ಗೊತ್ತಾ?
ಜಮ್ಮುಕಾಶ್ಮೀರದಲ್ಲಿ ಈ ವರ್ಷದಲ್ಲಿ ಉಂಟಾದ ಸಾವುನೋವುಗಳೆಷ್ಟು ಗೊತ್ತಾ?

By

Published : Oct 1, 2021, 4:50 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) :ಜಮ್ಮು ಮತ್ತು ಕಾಶ್ಮೀರದ ಹೆಸರನ್ನು ಕೇಳಿದರೆ ಗುಂಡಿನ ಸದ್ದು ಥಟ್ಟನೆ ನಮ್ಮ ಕಿವಿಯ ಮುಂದೆ ಹಾದು ಹೋದಂತಾಗುತ್ತದೆ. ಕಾರಣ ನಮ್ಮ ಭಾರತ ಶಿರವಾಗಿರುವ ಆ ರಾಜ್ಯವನ್ನು ಯಾವಾಗಲೂ ಇತರೆ ದೇಶದವರು ಹಾಗೂ ಉಗ್ರರು ಸಂಪೂರ್ಣ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಹಾತೊರೆಯುತ್ತಿದ್ದಾರೆ. ಆದರೆ, ನಮ್ಮ ಸೇನೆ ಹಾಗೂ ಪೊಲೀಸರು ಅವರಿಗೆ ತಕ್ಕ ಉತ್ತರವನ್ನೇ ನೀಡುತ್ತಾ ಬರುತ್ತಿದಾರೆ.

ಈ ವರ್ಷ ಕೇಂದ್ರಾಡಳಿತ ಪ್ರದೇಶದಲ್ಲಿ ವಿವಿಧ ಉಗ್ರಗಾಮಿ ಸಂಬಂಧಿತ ಸಂಘಟನೆಗಳ ಹೋರಾಟದ ಸಂದರ್ಭದಲ್ಲಿ 132 ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಪೊಲೀಸರು ವರದಿ ಬಿಡುಗಡೆ ಮಾಡಿದ್ದಾರೆ.

2021ರ ಜುಲೈನಲ್ಲಿ ಬರೋಬ್ಬರಿ 33 ಉಗ್ರರನ್ನು ಸದೆಬಡಿಯಲಾಗಿದೆ. ನಾಲ್ಕು ಭದ್ರತಾ ಪಡೆ ಸಿಬ್ಬಂದಿ ಮತ್ತು ಓರ್ವ ನಾಗರಿಕ ಈ ತಿಂಗಳಲ್ಲಿ ಹುತಾತ್ಮರಾಗಿದ್ದಾರೆ. ಈ ಮೂಲಕ ಈ ತಿಂಗಳಲ್ಲಿ ಹೆಚ್ಚಿನ ಸಾವು-ನೋವು ಸಂಭವಿಸಿವೆ.

ಸೆಪ್ಟೆಂಬರ್‌ನಲ್ಲಿ 14 ಸಾವು-ನೋವುಗಳು ವರದಿಯಾಗಿವೆ. ಇದರಲ್ಲಿ ಒಂಬತ್ತು ಉಗ್ರರು, ಮೂವರು ಭದ್ರತಾ ಪಡೆ ಸಿಬ್ಬಂದಿ ಮತ್ತು ಇಬ್ಬರು ನಾಗರಿಕರು ಸೇರಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.

ಜನವರಿ ಅತ್ಯಂತ ಶಾಂತಿಯುತ ತಿಂಗಳು ಎಂದು ತಿಳಿಸಿದ್ದಾರೆ. ಯಾಕಂದ್ರೆ, ಆ ತಿಂಗಳಲ್ಲಿ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ. ಇನ್ನುಳಿದಂತೆ ಹತ್ತು ಉಗ್ರರು ಮತ್ತು ಒಬ್ಬ ಭದ್ರತಾ ಪಡೆಯ ಸಿಬ್ಬಂದಿ ಈ ತಿಂಗಳಲ್ಲಿ ಸಾವಿಗೀಡಾಗಿದ್ದಾರೆ.

ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 321 ಜನ ಸಾವನ್ನಪ್ಪಿದ್ದರು. ಇದರಲ್ಲಿ 232 ಉಗ್ರರು, 56 ಭದ್ರತಾ ಪಡೆ ಸಿಬ್ಬಂದಿ ಮತ್ತು 33 ನಾಗರಿಕರೂ ಸೇರಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಾರಿ ಉಂಟಾದ ಅನಾಹುತ ಕಡಿಮೆ ಎಂದೇ ಹೇಳಬಹುದು.

ಈ ವರ್ಷದ ಸೆಪ್ಟೆಂಬರ್ ಅಂತ್ಯದ ವೇಳೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 94 ಉಗ್ರಗಾಮಿ ಸಂಬಂಧಿತ ಘಟನೆಗಳು ವರದಿಯಾಗಿವೆ. ಈವರೆಗೆ 176 ಜನರನ್ನು ಕೊಲ್ಲಲಾಗಿದೆ. ಅವರಲ್ಲಿ 132 ಉಗ್ರಗಾಮಿಗಳು, 25 ಭದ್ರತಾ ಪಡೆಗಳ ಸಿಬ್ಬಂದಿ ಮತ್ತು 19 ನಾಗರಿಕರು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಕಣಿವೆಯ ಯುವಕರು ಉಗ್ರಗಾಮಿತ್ವವನ್ನು ತೊರೆದು ಸಾಮಾಜಿಕ ಕಲ್ಯಾಣ ಕಾರ್ಯಗಳಲ್ಲಿ ತೊಡಗಿದ್ದಾರೆ ಎಂದು ಇದೇ ವೇಳೆ ಪೊಲೀಸ್​ ಅಧಿಕಾರಿ ಹೇಳಿದ್ದಾರೆ.

ABOUT THE AUTHOR

...view details