ಕರ್ನಾಟಕ

karnataka

ETV Bharat / bharat

ನಕಲಿ ಮದ್ಯ ಸೇವಿಸಿ 13 ಜನ ಸಾವು: ಘಟನೆ ಮರೆಯಾಚಲು ಹೋಗಿ ಕಣ್ಣು ಕಳೆದುಕೊಂಡ ಇಬ್ಬರು!

ಕಳೆದ ಐದು ದಿನಗಳಲ್ಲಿ 13 ಜನ ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

People dead spurious liquor Bihar  Spurious liquor deaths in Bihar  spurious liquor in Bihar  Bihar news  ಬಿಹಾರದಲ್ಲಿ ನಕಲಿ ಮದ್ಯ ಸೇವಿಸಿ ಜನ ಸಾವು  ಬಿಹಾರದಲ್ಲಿ ನಕಲಿ ಮದ್ಯ ಹಾವಳಿ  ಬಿಹಾರ ಸುದ್ದಿ
ಹೋಗಿ ಕಣ್ಣು ಕಳೆದುಕೊಂಡ ಇಬ್ಬರು

By

Published : Mar 14, 2022, 10:39 AM IST

Updated : Mar 14, 2022, 11:09 AM IST

ಪಾಟ್ನಾ:ಬಿಹಾರದಲ್ಲಿ ಕಳೆದ ಐದು ದಿನಗಳಲ್ಲಿ ನಕಲಿ ಮದ್ಯ ಸೇವಿಸಿ 13 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಆದರೆ, ನಿನ್ನೆ ಒಂದೇ ದಿನಕ್ಕೆ ನಕಲಿ ಮದ್ಯ ಸೇವಿಸಿ ಐವರು ಮೃತಪಟ್ಟಿರುವ ಘಟನೆ ಭಾಗಲ್ಪುರದಲ್ಲಿ ನಡೆದಿದೆ.

ಪೊಲೀಸ್ ಮೂಲಗಳ ಪ್ರಕಾರ, ನಿನ್ನೆ ಬಾಗಲ್ಪುರದಲ್ಲಿ 5 ಜನ ನಕಲಿ ಮದ್ಯ ಸೇವಿಸಿ ಮೃತಪಟ್ಟಿದ್ದಾರೆ. ಮೃತರನ್ನು ಸಬೂರ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಂದನ್ ಝಾ, ಲೋದಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಿಶೋರ್ ಯಾದವ್, ನವೀನ್ ಯಾದವ್, ಬಾಬರ್ ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ರಿತೇಶ್ ಕುಮಾರ್ ಮತ್ತು ಸಜೋರ್ ಪೊಲೀಸ್ ಠಾಣಾ ವ್ಯಾಪ್ತಿಯ ಅವಿನಾಶ್ ಎಂದು ಗುರುತಿಸಲಾಗಿದೆ. ಘಟನೆ ಬೆಳಕಿಗೆ ಬಂದಾಗ, ಮೃತರ ಕುಟುಂಬ ಸದಸ್ಯರು ಘಟನೆಯನ್ನು ಮರೆಮಾಚಲು ಶವಗಳನ್ನು ಸುಟ್ಟು ಹಾಕಿದ್ದಾರೆ. ಈ ವೇಳೆ ಇಬ್ಬರಿಗೆ ಬೆಂಕಿ ತಗುಲಿದ್ದು, ಅವರು ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಓದಿ:ಭಾರತದಲ್ಲಿ ತಗ್ಗುತ್ತಿದೆ ಕೊರೊನಾ ಸೋಂಕಿನ ಹಾವಳಿ.. ಯಶಸ್ಸಾಗುತ್ತಿದೆ ಕೊರೊನಾ ವಿರುದ್ಧದ ಭಾರತ ಹೋರಾಟ!

ಇದೇ ರೀತಿಯ ಘಟನೆ ಮಾರ್ಚ್ 12 ರಂದು ನಡೆದಿದ್ದು, ಗೋಪಾಲಗಂಜ್ ಜಿಲ್ಲೆಯ ವೈಕುಂಠಪುರ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ನಾಲ್ವರು ನಕಲಿ ಮದ್ಯ ಸೇವನೆಯಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಕಲಿ ಮದ್ಯ ಸೇವನೆಯಿಂದ ಸಾವು ಸಂಭವಿಸಿದೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ. ಆದರೆ, ಎಸ್‌ಡಿಪಿಒ ಮತ್ತು ಡಿಎಂ ಅವರು ನಕಲಿ ಮದ್ಯ ಸೇವನೆಯಿಂದ ಸಾವು ಸಂಭವಿಸಿದೆ ಎಂದು ಆರೋಪ ನಿರಾಕರಿಸಿದರು.

ಓದಿ:ಹಣಕಾಸು ನಿರ್ವಹಣೆ ಬ್ಯಾಂಕ್​ ಖಾತೆಗಳ ಮೇಲೂ ಅವಲಂಬನೆ!

ಪಶ್ಚಿಮ ಚಂಪಾರಣ್ ಜಿಲ್ಲೆಯ ನೌತಾನ್ ಬ್ಲಾಕ್‌ನ ಖಾಪ್ ತೋಲಾ ಗ್ರಾಮದಲ್ಲಿ ಮಾರ್ಚ್ 9 ರಂದು ಮತ್ತೊಂದು ಘಟನೆ ನಡೆದಿದ್ದು, ಇಬ್ಬರು ನಕಲಿ ಮದ್ಯ ಸೇವನೆಯಿಂದ ಸಾವನ್ನಪ್ಪಿದ್ದಾರೆ. ಓರ್ವ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ರಂಜಿತ್ ಸಿಂಗ್ ಮತ್ತು ಮುನ್ನಾ ಸಿಂಗ್ ಎಂದು ಗುರುತಿಸಲಾಗಿದೆ.

ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಗಳು ರಾಜ್ಯದಲ್ಲಿ ಮದ್ಯ ನಿಷೇಧದ ಅನುಷ್ಠಾನದ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಕಳೆದ ಐದು ದಿನಗಳಲ್ಲಿ ನಕಲಿ ಮದ್ಯ ಸೇವಿಸಿ ಒಟ್ಟು 13 ಜನ ಸಾವನ್ನಪ್ಪಿದ್ದಾರೆ. ಆದರೂ ಸಹಿತ ನಕಲಿ ಮದ್ಯ ಹಾವಳಿ ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗುತ್ತಿದೆ ಎಂಬ ಅನುಮಾನ ಜನರಲ್ಲಿ ಮೂಡಿದೆ.


Last Updated : Mar 14, 2022, 11:09 AM IST

ABOUT THE AUTHOR

...view details