ನೆಲಮಂಗಲ: ಸಾಮಾಜಿಕ ಜಾಲತಾಣಗಳಲ್ಲಿ ಫಾಲೋವರ್ಸ್ ಮತ್ತು ಲೈಕ್ಸ್ ಹೆಚ್ಚಿಸಿಕೊಳ್ಳಲು ಹೆದ್ದಾರಿಯಲ್ಲಿ ಭಯಾನಕ ಬೈಕ್ ವೀಲಿಂಗ್ ಮಾಡಿ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ ಆರೋಪಿಯನ್ನು ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ. ವಿಲೀಂಗ್ ಮೂಲಕ ಇತರ ವಾಹನ ಸವಾರರಿಗೆ ಅಡ್ಡಿಪಡಿಸುತ್ತಿದ್ದ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.
ನೆಲಮಂಗಲದ ರಾಘವೇಂದ್ರ ನಗರದ ನಿವಾಸಿ ಅಭಿಷೇಕ್(20) ಬಂಧಿತ ಯುವಕ. ಅಭಿಷೇಕ್ ಇನ್ಸ್ಟಾಗ್ರಾಂನಲ್ಲಿ 26 ನಕಲಿ ಖಾತೆಗಳನ್ನು ತೆರೆದಿದ್ದ, ಪ್ರತಿಯೊಂದರಲ್ಲೂ 2 ಸಾವಿರದಿಂದ 3 ಸಾವಿರ ಫಾಲೋವರ್ಸ್ ಇದ್ದರು. ಒಂದೊಂದು ಖಾತೆಯಲ್ಲಿ 17ರಿಂದ 20 ಬೈಕ್ ವಿಲೀಂಗ್ ವಿಡಿಯೋಗಳನ್ನು ಹಂಚಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ತಿಳಿಸಿದ್ದಾರೆ.
ಯುವಕನ ವಿಡಿಯೋಗಳನ್ನು ಗಮನಿಸಿದ ನೆಲಮಂಗಲ ಸಂಚಾರ ಪೊಲೀಸರು, ಬೈಕ್ ನಂಬರ್ ಪತ್ತೆ ಮಾಡಿ ಬಂಧಿಸಲು ಮುಂದಾಗಿದ್ದರು. ಅಭಿಷೇಕ್ ಬೈಕ್ ವಿಲೀಂಗ್ ಮಾಡುತ್ತಾ ಕುಣಿಗಲ್ ಕಡೆ ಹೋಗುತ್ತಿದ್ದ ವೇಳೆ ಹಿಂಬಾಲಿಸಿದ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: 16 ಮಂದಿ ಮನೆ ಭೋಗ್ಯದಾರರಿಗೆ ವಂಚನೆ ಆರೋಪ: ಮನೆ ಮಾಲೀಕರ ಬಂಧನ