ETV Bharat / snippets

ಬೆಂಗಳೂರು: ಧಾರಾಕಾರ ಮಳೆ ಮಧ್ಯೆ ಗಂಧದ ಮರ ಕತ್ತರಿಸಿ ಕದ್ದೊಯ್ದರು!

author img

By ETV Bharat Karnataka Team

Published : 17 hours ago

BENGALURU RAIN
ಗಂಧದ ಮರ ಕಳವು (ETV Bharat)

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನತೆ ತತ್ತರಿಸಿದರೆ, ಇತ್ತ ಕಳ್ಳರು ತಮ್ಮ ಕಸುಬು ಮುಂದುವರೆಸಿದ್ದಾರೆ. ನಗರದ ಬಿಬಿಎಂಪಿ ಪಾರ್ಕ್‌ವೊಂದರಲ್ಲಿದ್ದ ಗಂಧದ ಮರ ಕಳುವಾಗಿದೆ.

ಯಲಹಂಕ ಜುಡಿಷಿಯಲ್ ಲೇಔಟ್‌ನ ಬಿಬಿಎಂಪಿ ಪಾರ್ಕ್‌ನಲ್ಲಿ ಮಂಗಳವಾರ ರಾತ್ರಿ ಘಟನೆ ನಡೆದಿದೆ. ಮಳೆಯ ನಡುವೆಯೇ ಶ್ರೀಗಂಧದ ಮರವನ್ನು ಕಳ್ಳರು ಕತ್ತರಿಸಿ ಹೊತ್ತೊಯ್ದಿದ್ದಾರೆ. ಬೆಳಗ್ಗೆ ಸ್ಥಳೀಯರು ವಾಕಿಂಗ್‌ಗೆ ಹೋದಾಗ ಮರ ಕಳ್ಳತನವಾಗಿರುವುದನ್ನು ಗಮನಿಸಿದ್ದಾರೆ.

ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಯಲಹಂಕ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಉಳಿದ ಶ್ರೀಗಂಧದ ತುಂಡುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಸುರಿಯುತ್ತಿರುವ ಮಳೆಯಿಂದ ಬೆಂಗಳೂರಲ್ಲಿ ಹಲವು ಅವಾಂತರ: ಜನಜೀವನ ಅಸ್ತವ್ಯಸ್ತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.