ETV Bharat / snippets

ರಾಯಚೂರು: ಸರ್ವೆ ಇಲಾಖೆಯ ರೆಕಾರ್ಡ್​​ ಕೀಪರ್​​​ ಲೋಕಾಯುಕ್ತ ಬಲೆಗೆ

ಲಂಚ
ಸಾಂದರ್ಭಿಕ ಚಿತ್ರ (ANI)
author img

By ETV Bharat Karnataka Team

Published : May 22, 2024, 10:58 AM IST

ರಾಯಚೂರು: ರೈತನಿಂದ ಲಂಚ ಪಡೆಯುತ್ತಿದ್ದ ಸರ್ವೆ ಇಲಾಖೆಯ ರೆಕಾರ್ಡ್​​ ಕೀಪರ್​​​ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ರಾಯಚೂರಿನ ಲಿಂಗಸೂಗೂರಿನಲ್ಲಿ ನಡೆದಿದೆ.

ಲಿಂಗಸೂಗೂರು ಪಟ್ಟಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ವೆ ಇಲಾಖೆಯ ರೆಕಾರ್ಡ್ ಕೀಪರ್ (ಅಭಿಲೇಖ ಪಾಲಕ) ಆದಪ್ಪ ಅಮರೇಢ ಹಡಪದ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದಾರೆ. ದೂರುದಾರ ರಾಮಣ್ಣ ಎಂಬವರಿಗೆ ಕನಸಾವಿ ಬೆಳ್ಳಿಹಾಳದ ಸರ್ವೆ ನಂಬರ್​ 92ರ ಟೋಂಚ್​​ ಟಿಪ್ಪಣಿ ನೀಡಲು ಆದಪ್ಪ ಹಡಪದ 24 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ರೈತ ರಾಮಣ್ಣ ಲೋಕಾಯುಕ್ತರಿಗೆ ದೂರು ನೀಡಿದ್ದರು.

ಮಂಗಳವಾರ ದೂರದಾರನಿಂದ 8 ಸಾವಿರ ರೂ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಯಚೂರು ಲೋಕಾಯುಕ್ತ ಪೊಲೀಸ್‍ ವರಿಷ್ಠಾಧಿಕಾರಿ ಎಂ.ಎನ್‍.ಶಶಿಧರ್ ನೇತೃತ್ವದಲ್ಲಿ ದಾಳಿ ನಡೆದಿದೆ.

ಇದನ್ನೂ ಓದಿ: ಒಟ್ಟಿಗೆ ಅಶ್ಲೀಲ ವಿಡಿಯೋ ವೀಕ್ಷಣೆ, ಅಪ್ರಾಪ್ತ ಸಹೋದರನಿಂದ ಆತನ ಸಹೋದರಿ ಗರ್ಭಿಣಿ: ಬಾಲಕ ಬೆಂಗಳೂರು ಪೊಲೀಸರ ವಶಕ್ಕೆ - Sister pregnant by brother

ETV Bharat Logo

Copyright © 2024 Ushodaya Enterprises Pvt. Ltd., All Rights Reserved.