ETV Bharat / snippets

ಮೈಸೂರು: 2022ರಲ್ಲಿ ಪತ್ನಿಯನ್ನು ಕೊಂದ ಪತಿಗೆ 7 ವರ್ಷ ಶಿಕ್ಷೆ, 1 ಸಾವಿರ ರೂ. ದಂಡ

ಪತ್ನಿಯನ್ನು ಕೊಂದ ಪತಿಗೆ 7 ವರ್ಷ ಶಿಕ್ಷೆ
ಪತ್ನಿಯನ್ನು ಕೊಂದ ಪತಿಗೆ 7 ವರ್ಷ ಶಿಕ್ಷೆ ((ಸಾಂದರ್ಭಿಕ ಚಿತ್ರ))
author img

By ETV Bharat Karnataka Team

Published : Aug 14, 2024, 1:46 PM IST

ಮೈಸೂರು: ಪತ್ನಿಯನ್ನು ಕೊಲೆಗೈದ ಪತಿಗೆ ಮೈಸೂರಿನ ಏಳನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 7 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. ಮೈಸೂರಿನ ಬನ್ನಿಮಂಟಪದ ನಿವಾಸಿ ರಾಜೇಶ್​​ ಶಿಕ್ಷೆಗೆ ಗುರಿಯಾದವ.

ರಾಧಾರನ್ನು(ಕೊಲೆಯಾದವರು) ವಿವಾಹವಾಗಿದ್ದ ರಾಜೇಶ್​​​ ಆಕೆಯ ಬಗ್ಗೆ ಅನುಮಾನ ಹೊಂದಿದ್ದ. ಇದೇ ವಿಚಾರಕ್ಕೆ ನಿತ್ಯ ಗಲಾಟೆ ನಡೆಯುತ್ತಿತ್ತು. 2022ರ ಆಗಸ್ಟ್​ 27ರಂದು ಮನೆಯಲ್ಲಿ ಮಲಗಿದ್ದ ರಾಧಾ ಅವರನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ಧ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಎನ್.ಆರ್​.ಠಾಣೆ ಪೊಲೀಸರು ರಾಜೇಶ್​ನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಎಂ.ರಮೇಶ ಅವರು ಅಪರಾಧಿಗೆ "7 ವರ್ಷ ಶಿಕ್ಷೆಯೊಂದಿಗೆ 1 ಸಾವಿರ ರೂ. ದಂಡ" ವಿಧಿಸಿದ್ದಾರೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಕೆ. ನಾಗರಾಜ ವಾದ ಮಂಡಿಸಿದ್ದರು.

ಇದನ್ನೂ ಓದಿ: ಶಿಸ್ತಿನಲ್ಲಿರಿಸಲು ಬಾಲಕಿಗೆ ಗೃಹ ಬಂಧನ: ಅಜ್ಜಿ, ತಾತನ ಮನವೊಲಿಸಿ ಪರೀಕ್ಷೆಗೆ ಹಾಜರಾಗಲು ಹೊಯ್ಸಳ ಪೊಲೀಸರ ನೆರವು - Hoysala police helped the girl

ETV Bharat Logo

Copyright © 2024 Ushodaya Enterprises Pvt. Ltd., All Rights Reserved.