ಹಾವೇರಿ: ಪತಿ-ಪತ್ನಿಯ ನಡುವೆ ಆರಂಭವಾದ ಜಗಳ ಪತ್ನಿ ಕೊಲೆಯಲ್ಲಿ ಮುಕ್ತಾಯಗೊಂಡ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಶಿವಪುರ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. 55 ವರ್ಷದ ನಾಗವ್ವ ಬೋವಿವಡ್ಡರ್ ಕೊಲೆಯಾದ ಪತ್ನಿ. 62 ವರ್ಷದ ಶೇಖಪ್ಪ ಬೋವಿವಡ್ಡರ್ ಕೊಲೆಗೈದ ಆರೋಪಿಯಾಗಿದ್ದಾನೆ.
ಕಳೆದ ನಾಲ್ಕೈದು ತಿಂಗಳುಗಳ ಹಿಂದೆ ಮಗ ಪೋಕ್ಸೋ ಕೇಸ್ನಲ್ಲಿ ಜೈಲು ಪಾಲಾಗಿದ್ದ. ಮಗನನ್ನು ಬಿಡಿಸಿಕೊಂಡು ಬರುವ ವಿಚಾರದಲ್ಲಿ ಇಬ್ಬರ ಮಧ್ಯೆ ಜಗಳವಾಗಿದೆ. ಜಗಳ ತಾರಕಕ್ಕೆ ಏರಿಕೆಯಾಗಿ ಪತಿ ಬಡಿಗೆಯಿಂದ ಹೊಡೆದು ಪತ್ನಿಯನ್ನು ಕೊಲೆ ಮಾಡಿದ್ದಾನೆ. ಹಾನಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಶಿವಮೊಗ್ಗ: ಕೌಟುಂಬಿಕ ಕಲಹ, ತಂದೆಯನ್ನೇ ಭೀಕರವಾಗಿ ಕೊಂದ ಅಪ್ರಾಪ್ತ ಮಗ - SON KILLS FATHER