ದಾವಣಗೆರೆ: ಸಿಇಐಆರ್ ಪೋರ್ಟಲ್ ನೆರವಿನಿಂದ ದಾವಣಗೆರೆ ಪೊಲೀಸರು ಲಕ್ಷಾಂತರ ರೂ. ಮೌಲ್ಯದ 39 ಮೊಬೈಲ್ಗಳನ್ನು ಪತ್ತೆ ಹಚ್ಚಿ, ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಚನ್ನಗಿರಿ ಪೊಲೀಸ್ ಉಪ ವಿಭಾಗ, ಸಂತೆಬೆನ್ನೂರು, ಬಸವಾಪಟ್ಟಣ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳುವು, ಸುಲಿಗೆ ಹಾಗೂ ಕಳೆದುಕೊಂಡಿರುವ ಮೊಬೈಲ್ಗಳನ್ನು ಸಿಇಐರ್ ವೆಬ್ ಪೋರ್ಟಲ್ನಲ್ಲಿ ನೋಂದಾಯಿಸಿ ಬ್ಲಾಕ್ ಮಾಡಿ, ಪತ್ತೆ ಹಚ್ಚಲಾಗಿದೆ.
ಎಸ್ಪಿ ಉಮಾ ಪ್ರಶಾಂತ್ ಸೂಚನೆ ಮೇರೆಗೆ ಮೊಬೈಲ್ ವಾರಸುದಾರರಿಗೆ ಹಸ್ತಾಂತರ ಮಾಡಲಾಗಿದೆ. ಚನ್ನಗಿರಿ ಡಿವೈಎಸ್ಪಿ ರುದ್ರಪ್ಪ ಉಜ್ಜಿನಕೊಪ್ಪ ಅವರು ಚನ್ನಗಿರಿ ಕಚೇರಿಯಲ್ಲಿ ಮೊಬೈಲ್ ಹಸ್ತಾಂತರಿಸಿದ್ದಾರೆ. ಸಂತೆಬೆನ್ನೂರು ಪೊಲೀಸ್ ಠಾಣೆ ಪಿಐ ಲಿಂಗನಗೌಡ ನೆಗಳೂರು ಸೇರಿದಂತೆ ಇತರ ಸಿಬ್ಬಂದಿ ಉಪಸ್ಥಿತರಿದ್ದರು.
ಮೊಬೈಲ್ ಕಳೆದ ಬಳಿಕ ದೂರುದಾರರು ಸಿಇಐಆರ್ ಪೋರ್ಟಲ್ನಲ್ಲಿ ನೋಂದಾಯಿಸಿ ಮೊಬೈಲ್ ಹುಡುಕಿಕೊಡುವಂತೆ ಮನವಿ ಮಾಡಿದ್ದರು. ಸುಲಿಗೆ, ಕಳುವಾದ, ಕಳೆದುಕೊಂಡ ಮೊಬೈಲ್ಗಳನ್ನು ಪತ್ತೆ ಹಚ್ಚಿದ ಪೊಲೀಸರ ಕಾರ್ಯಕ್ಕೆ ವಾರಸುದಾರರು ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ನಿಮ್ಮ ಮೊಬೈಲ್ ಕಳುವಾಗಿದೆಯೇ ? ಹಾಗಾದ್ರೆ ಸಿಇಐಆರ್ ಪೋರ್ಟಲ್ಗೆ ದೂರು ನೀಡಿ