ETV Bharat / snippets

5 ಸೀಳುನಾಯಿಗಳ ಸಂಶಯಾಸ್ಪದ ಸಾವು: ವಿಷ ಪ್ರಾಶನ ಶಂಕೆ

author img

By ETV Bharat Karnataka Team

Published : May 28, 2024, 10:59 PM IST

5-wild-dogs-suspicious-death
ಸೀಳುನಾಯಿಗಳು ಸಂಶಯಾಸ್ಪದ ಸಾವು (ETV Bharat)

ಚಾಮರಾಜನಗರ : ಸಂಶಯಾಸ್ಪದವಾಗಿ 5 ಸೀಳುನಾಯಿಗಳು ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ತಾಲೂಕಿನ
ಕರಡಿಗುಡ್ಡದ ಸಮೀಪ ಮಂಗಳವಾರ ನಡೆದಿದೆ. ಕೊಳ್ಳೇಗಾಲ ತಾಲೂಕಿನ ಹಿತ್ತಲ ದೊಡ್ಡಿ ಗ್ರಾಮದ ಕರಡಿಗುಡ್ಡದ ಸಮೀಪ ಕೂಸಣ್ಣ ಎಂಬವರ ಜಮೀನಿನ ಬಳಿ ಸೀಳುನಾಯಿಗಳು ಅಸುನೀಗಿದ್ದು, ವಿಷಪ್ರಾಶನದ ಶಂಕೆ ವ್ಯಕ್ತವಾಗಿದೆ.

ಸಾಕುಪ್ರಾಣಿಗಳ ರಕ್ಷಣೆಗಾಗಿ ಕೆಲವರು ಹಾಕಿದ ವಿಷಾಹಾರ ಸೇವಿಸಿ ಸೀಳುನಾಯಿ ಸಾವನ್ನಪ್ಪಿರಬಹುದು ಎಂಬ ಸಂಶಯ ವ್ಯಕ್ತವಾಗುತ್ತಿದೆ. ಅರಣ್ಯ ಅಧಿಕಾರಿಗಳು, ಪಶು ವೈದ್ಯರು ಸ್ಥಳಕ್ಕೆ ಭೇಟಿ ಕೊಟ್ಟು ಮೃತಪಟ್ಟ ನಾಯಿಗಳ ಮರಣೋತ್ತರ ಪರೀಕ್ಷೆ ನಡೆಸಿ ಕಳೆಬರಹವನ್ನು ಅಲ್ಲಿಯೇ ಮಣ್ಣು ಮಾಡಲಾಗಿದೆ.

ಇದನ್ನೂ ಓದಿ : ಐದು ಬೀದಿ ನಾಯಿಗಳ ಸಂಶಯಾಸ್ಪದ ಸಾವು: ವಿಷ ಆಹಾರ ನೀಡಿರುವ ಶಂಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.