ಮಂಗಳೂರು: ಇತ್ತೀಚೆಗೆ ನಗರದ ಜೈಲಿನ ಮೇಲೆ ಪೊಲೀಸರು ನಡೆಸಿದ ದಾಳಿ ವೇಳೆ ಕೈದಿಗಳ ಬಳಿಯಿದ್ದ ಗಾಂಜಾ ವಶಪಡಿಸಿಕೊಂಡಿದ್ದರು. ವೈದ್ಯಕೀಯ ತಪಾಸಣೆ ನಡೆಸಿದಾಗ 40 ಕೈದಿಗಳು ಮಾದಕ ದ್ರವ್ಯ ಸೇವಿಸಿರುವುದು ದೃಢಪಟ್ಟಿದೆ.
ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, 'ಜೈಲಿನಲ್ಲಿ 300ಕ್ಕೂ ಹೆಚ್ಚು ಕೈದಿಗಳಿದ್ದಾರೆ. ಅವರಲ್ಲಿ ಸಂಶಯ ಬಂದ 110 ಮಂದಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದೆವು. ಅವರಲ್ಲಿ 40 ಮಂದಿ ಮಾದಕ ದ್ರವ್ಯ ಸೇವಿಸಿರುವುದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ' ಎಂದು ತಿಳಿಸಿದರು.
'ಜೈಲಿನೊಳಗೆ ಕೈದಿಗಳು ಮೊಬೈಲ್ ಬಳಸುವುದಕ್ಕೆ ಅವಕಾಶ ಇಲ್ಲ. ಆದರೂ, 25 ಮೊಬೈಲ್ಗಳು ಜೈಲಿನಲ್ಲಿ ಪತ್ತೆಯಾಗಿವೆ. ಬಿಗಿಭದ್ರತೆ ಇದ್ದರೂ ಮಾದಕ ಪದಾರ್ಥ ಹಾಗೂ ಮೊಬೈಲ್ ಹೇಗೆ ರವಾನೆಯಾಗುತ್ತಿದೆ ಎಂಬ ಬಗ್ಗೆ ತನಿಖೆ ಪ್ರಗತಿಯಲ್ಲಿದೆ' ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕರಾವಳಿಯಲ್ಲಿ ಮತ್ತೆ ಭೂಗತ ಲೋಕದ ಸದ್ದು! ಹಫ್ತಾ ವಸೂಲಿಗೆ ಯತ್ನ, ಕಲಿ ಯೋಗೀಶನ ಸಹಚರರ ಸೆರೆ - Extortion Case