ಸ್ವಾತಂತ್ರ್ಯ ಸಿಕ್ಕ ಬಳಿಕ ಮೊದಲ ಬಾರಿಗೆ ಈ ವಿಶ್ವಪ್ರಸಿದ್ಧ ದರ್ಗಾದಲ್ಲಿ ನೆರವೇರಿದೆ ಧ್ವಜಾರೋಹಣ: ವಿಡಿಯೋ
🎬 Watch Now: Feature Video
ರೂರ್ಕಿ(ಉತ್ತರಾಖಂಡ): ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಇದೇ ಮೊದಲ ಬಾರಿಗೆ 75ನೇ ಗಣರಾಜ್ಯೋತ್ಸವದ ಹಿನ್ನೆಲೆ ವಿಶ್ವಪ್ರಸಿದ್ಧ ಪಿರಾನ್ ಕಲಿಯಾರ್ ಶರೀಫ್ ದರ್ಗಾದಲ್ಲಿ ನಿನ್ನೆ ರಾಷ್ಟ್ರಧ್ವಜವನ್ನು ಹಾರಿಸಲಾಗಿದೆ. ನೂರಾರು ಯಾತ್ರಾರ್ಥಿಗಳು ಮತ್ತು ಸ್ಥಳೀಯರು ಧ್ವಜಾರೋಹಣದ ವೇಳೆ ರಾಷ್ಟ್ರ ಗೀತೆಯನ್ನು ಹಾಡಿ, ಹಿಂದೂಸ್ತಾನ್ ಜಿಂದಾಬಾದ್, ಭಾರತ್ ಮಾತಾ ಕಿ ಜೈ ಘೋಷಣೆಗಳನ್ನು ಕೂಗಿದರು. ಧ್ವಜಾರೋಹಣ ನೆರವೇರಿಸಿದ ಉತ್ತರಾಖಂಡ ವಕ್ಫ್ ಮಂಡಳಿ ಅಧ್ಯಕ್ಷ ಶಾದಾಬ್ ಶಾಮ್ಸ್ ಮಾತನಾಡಿ, ಇಲ್ಲಿ ತ್ರಿವರ್ಣ ಧ್ವಜ ಹಾರಿಸಲು ನನಗೆ ಅವಕಾಶ ಸಿಕ್ಕಿರುವುದಕ್ಕೆ ತುಂಬಾ ಸಂತೋಷವಾಗಿದೆ ಎಂದರು.
ಶುಕ್ರವಾರ ನಡೆದ 75ನೇ ಗಣರಾಜೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉತ್ತರಾಖಂಡ ವಕ್ಫ್ ಮಂಡಳಿ ಅಧ್ಯಕ್ಷ ಶಾದಾಬ್ ಶಾಮ್ಸ್, ರೂರ್ಕಿ ಜಂಟಿ ಮ್ಯಾಜಿಸ್ಟ್ರೇಟ್, ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ರೂರ್ಕಿ ತಹಶೀಲ್ದಾರ್, ದರ್ಗಾ ವ್ಯವಸ್ಥಾಪಕ ರಜಿಯಾ ಮತ್ತು ಯಾತ್ರಿಕರು, ಸ್ಥಳೀಯರು ಉಪಸ್ಥಿತರಿದ್ದರು.
ಪಿರಾನ್ ಕಲಿಯಾರ್ ಮುಸ್ಲಿಮರ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಈ ದರ್ಗಾ ಹರಿದ್ವಾರ ಜಿಲ್ಲೆಯ ರೂರ್ಕಿ ಬಳಿ ಇದೆ. ಇದನ್ನು ಹಜರತ್ ಮಖ್ದೂಮ್ ಅಲ್ಲಾವುದ್ದೀನ್ ಅಲಿ ಅಹ್ಮದ್ ಸಬೀರ್ ಅವರ ದರ್ಗಾ ಎಂದೂ ಕರೆಯುತ್ತಾರೆ. ಈ ದರ್ಗಾಕ್ಕೆ ಪ್ರತಿ ವರ್ಷ ದೇಶದ ವಿವಿಧೆಡೆಗಳಿಂದ ಮತ್ತು ಪಾಕಿಸ್ತಾನದಿಂದಲೂ ಭಕ್ತರು ಆಗಮಿಸುತ್ತಾರೆ. ಈ ದರ್ಗಾದಲ್ಲಿ ಪೂಜೆ ಸಲ್ಲಿಸಲು ಮುಸ್ಲಿಮರು ಮಾತ್ರವಲ್ಲದೇ ಹಿಂದೂಗಳೂ ಬರುವುದು ವಿಶೇಷವಾಗಿದೆ.
ಇದನ್ನೂ ಓದಿ: ಕರ್ತವ್ಯ ಪಥದಲ್ಲಿ 'ಆವಾಹನ': 112 ಮಹಿಳೆಯರಿಂದ ಸಂಗೀತ ವಾದ್ಯಗಳ ಪರೇಡ್- ವಿಡಿಯೋ