'ಮತಗಟ್ಟೆಯೊಳಗೆ ಮೊಬೈಲ್ ಬಿಡಿ': ಮಹಿಳಾ ಪೊಲೀಸ್ ಸಿಬ್ಬಂದಿ ಜೊತೆ ಪೋಲಿಂಗ್ ಏಜೆಂಟ್‌, ಮತದಾರರ ವಾಗ್ವಾದ - Quarrel In Polling Booth - QUARREL IN POLLING BOOTH

🎬 Watch Now: Feature Video

thumbnail

By ETV Bharat Karnataka Team

Published : May 7, 2024, 2:20 PM IST

ರಾಯಚೂರು: ಪೋಲಿಂಗ್ ಬೂತ್ ಒಳಗಡೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವ ವಿಚಾರಕ್ಕೆ ಮಹಿಳಾ ಪೊಲೀಸ್ ಸಿಬ್ಬಂದಿ ಜೊತೆ ಪೋಲಿಂಗ್ ಏಜೆಂಟ್‌, ಮತದಾರರು ವಾಗ್ವಾದ ನಡೆಸಿರುವ ಘಟನೆ ರಾಯಚೂರಿನಲ್ಲಿ ಇಂದು ನಡೆದಿದೆ.

ನಗರದ ಬೇಸ್ತವಾರ ಪೇಟೆಯ ಬಡಾವಣೆಯ ಮತಗಟ್ಟೆ ಸಂಖ್ಯೆ 99ರಲ್ಲಿ ಘಟನೆ ಜರುಗಿದೆ. ಮತಗಟ್ಟೆ ಕೇಂದ್ರದಲ್ಲಿ ಮೊಬೈಲ್ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಆದಾಗ್ಯೂ, ಮೊಬೈಲ್ ಜೊತೆಯೇ ಒಳಗಡೆ ಬಿಡುವಂತೆ ಏಜೆಂಟರು, ಮತದಾರರು ಒತ್ತಾಯಿಸಿದ್ದಾರೆ. 

ಆದರೆ ಯಾವುದೇ ಕಾರಣಕ್ಕೂ ಮತಗಟ್ಟೆಯೊಳಗೆ ಮೊಬೈಲ್ ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದು ಪೊಲೀಸ್ ಸಿಬ್ಬಂದಿ ವಾದಿಸಿದರು. ಮತದಾನ ಆರಂಭವಾದಾಗಿನಿಂದ ಶುರುವಾದ ಈ ವಾಗ್ವಾದ, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಮುಂದುವರಿಯಿತು. ಹಿರಿಯ ಅಧಿಕಾರಿಗಳು ಆಗಮಿಸಿದ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.

ಇದನ್ನೂ ಓದಿ: ಮತ ಚಲಾಯಿಸಿದ ಎರಡೂ ಕಾಲುಗಳಿಲ್ಲದ ವೃದ್ಧ: ಕಾಲಿಗೆ ಗಾಯವಾದರೂ ಮತದಾನಕ್ಕೆ ಆಗಮಿಸಿದ ಯುವತಿ - Old Man Cast Vote

ಶತಾಯುಷಿ ತಾತನ ಜೊತೆ ಸಾಗರ್ ಖಂಡ್ರೆ ಮತದಾನ: ಉಮೇಶ ಜಾಧವ್​, ಈ.ತುಕರಾಂ, ಶ್ರೀರಾಮುಲು ವೋಟ್​​ - lok sabha voting

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.