ಜಗದ್ವಿಖ್ಯಾತ ಜಗನ್ನಾಥ ರಥಯಾತ್ರೆ, ಲಕ್ಷಾಂತರ ಭಕ್ತರು ಭಾಗಿ- ಪುರಿಯಿಂದ LIVE - Puri Jagannath Rath Yatra - PURI JAGANNATH RATH YATRA
🎬 Watch Now: Feature Video
Published : Jul 8, 2024, 9:30 AM IST
|Updated : Jul 8, 2024, 3:33 PM IST
ಪುರಿ(ಒಡಿಶಾ): ವಿಶ್ವಪ್ರಸಿದ್ಧ ಪುರಿ ಜಗನ್ನಾಥ ಮಹಾರಥೋತ್ಸವದ 2ನೇ ದಿನದ ವೈಭವದ ಯಾತ್ರೆ ಆರಂಭವಾಗಿದೆ. 12ನೇ ಶತಮಾನದ ಜಗನ್ನಾಥ ದೇವಸ್ಥಾನದಿಂದ ಸುಮಾರು 2.5 ಕಿ.ಮೀ ದೂರದಲ್ಲಿರುವ ಗುಂಡಿಚಾ ದೇವಸ್ಥಾನದವರೆಗಿನ ಅದ್ಧೂರಿ ರಥೋತ್ಸವದಲ್ಲಿ ಲಕ್ಷಾಂತರ ಜನರು ಪಾಲ್ಗೊಂಡಿದ್ದಾರೆ. ಭಗವಾನ್ ಜಗನ್ನಾಥ, ಭಗವಾನ್ ಬಲಭದ್ರ ಮತ್ತು ದೇವಿ ಸುಭದ್ರಾ ರಥಗಳಿಗೆ ಪೂಜೆ ಸಲ್ಲಿಸಿದ ಬಳಿಕ ರಥಯಾತ್ರೆ ಆರಂಭಿಸಲಾಗಿದೆ. ರಥ ಯಾತ್ರೆ ಭಾನುವಾರ ಆರಂಭವಾಗಿ ವೈಭವದಿಂದ ಜರುಗಿತ್ತು. ಪ್ರತಿವರ್ಷ ಒಂದು ದಿನ ಮಾತ್ರ ಇರುತ್ತಿದ್ದ ರಥಯಾತ್ರೆ ಈ ಬಾರಿ ಎರಡು ದಿನ ನೆರವೇರುತ್ತಿರುವುದು ವಿಶೇಷ. ಭಾನುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಧಾನ ಜಗನ್ನಾಥ ರಥದ ಹಗ್ಗಗಳನ್ನು ಎಳೆಯುವ ಮೂಲಕ ಸಾಂಕೇತಿಕವಾಗಿ ಮಹಾ ಯಾತ್ರೆಗೆ ಚಾಲನೆ ನೀಡಿದ್ದರು. ರಥಗಳನ್ನು ಸಾವಿರಾರು ಭಕ್ತರು ಎಳೆದು ಕೃತಾರ್ಥರಾಗಿದ್ದರು. ವರ್ಷಂಪ್ರತಿ ಈ ಭವ್ಯ ರಥ ಯಾತ್ರೆಯಲ್ಲಿ ಸುಮಾರು ಹತ್ತು ಲಕ್ಷ ಭಕ್ತರು ಸೇರುತ್ತಾರೆ ಎಂದು ಅಂದಾಜಿಸಲಾಗಿದೆ. ಹೆಚ್ಚಿನ ಭಕ್ತರು ಒಡಿಶಾ ಮತ್ತು ನೆರೆ ರಾಜ್ಯಗಳಿಂದ ಬಂದರೆ, ದೇಶ-ವಿದೇಶದಿಂದಲೂ ಅನೇಕರು ಪಾಲ್ಗೊಳ್ಳುತ್ತಾರೆ. ಜಾಗತಿಕವಾಗಿಯೂ ಅತಿದೊಡ್ಡ ಧಾರ್ಮಿಕ ಯಾತ್ರೆಗಳ ಪೈಕಿ ಪುರಿ ರಥ ಯಾತ್ರೆಯೂ ಒಂದು.
Last Updated : Jul 8, 2024, 3:33 PM IST