ಕೋಲಾರ: 3 ಸಾವಿರ ದೀಪಗಳಲ್ಲಿ ಬೆಳಗಿದ ಅಂಬೇಡ್ಕರ್-ವಿಡಿಯೋ - Three thousand lights
🎬 Watch Now: Feature Video
Published : Feb 11, 2024, 10:08 AM IST
ಕೋಲಾರ: ನಗರದಲ್ಲಿ ಮೂರು ಸಾವಿರ ದೀಪಗಳಿಂದ ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಪ್ರದರ್ಶಿಸಲಾಯಿತು. ಕೋಲಾರ ಜಿಲ್ಲಾಧಿಕಾರಿಗಳ ಕಛೇರಿ ಕಟ್ಟಡದ ಮೇಲೆ ಭಾವಚಿತ್ರ ಆಕರ್ಷಕವಾಗಿ ಮೂಡಿಬಂತು. ಡ್ರೋಣ್ ಕ್ಯಾಮರಾದಲ್ಲಿ ಈ ದೃಶ್ಯವನ್ನು ಸೆರೆ ಹಿಡಿಯಲಾಗಿದೆ.
ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರದರ್ಶನದ ಆಯೋಜನೆ ಮಾಡಲಾಗಿತ್ತು. ಭಾರತ ದೇಶ ಸಂವಿಧಾನವನ್ನು ಅಂಗೀಕರಿಸಿಕೊಂಡು 75 ವರ್ಷಗಳಾಗಿರುವ ಪ್ರಯುಕ್ತ ರಾಜ್ಯಾದ್ಯಂತ ಸಂವಿಧಾನ ಜಾಗೃತಿ ಜಾಥಾ ಎಂಬ ವಿನೂತನ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ನಡೆಸುತ್ತಿದೆ. ಇದರ ಅಂಗವಾಗಿ ಕೋಲಾರದ ಡಿಸಿ ಕಟ್ಟಡದ ಮೇಲೆ ಸತತ ಎರಡು ದಿನಗಳ ಪ್ರಯತ್ನದಿಂದ ಸುಮಾರು ಮೂರು ಸಾವಿರ ದೀಪಗಳ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಅದ್ಭುತವಾಗಿ ಮೂಡಿಸಲಾಗಿದೆ.
ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲೂ ಸದ್ದು ಮಾಡುತ್ತಿದ್ದು, ನೋಡುಗರನ್ನು ಸೆಳೆಯುತ್ತಿದೆ. ಕೋಲಾರದಲ್ಲೂ ಜನರು ಈ ದೃಶ್ಯ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 'ಡ್ರಗ್ಸ್ ಮುಕ್ತ ಕರ್ನಾಟಕ' ಅಭಿಯಾನ; ಜಪ್ತಿ ಮಾಡಿದ್ದ 36 ಕೋಟಿ ಮೌಲ್ಯದ ಮಾದಕ ವಸ್ತುವಿಗೆ ಬೆಂಕಿ