ಜ್ಯುವೆಲ್ಲರಿ ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನಿಸಿ ವಿಫಲ: ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ - robbery attempt cctv video - ROBBERY ATTEMPT CCTV VIDEO
🎬 Watch Now: Feature Video
Published : Sep 14, 2024, 11:23 AM IST
ಬೆಂಗಳೂರು: ಜ್ಯುವಲೆರಿ ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನಿಸಿ ವಿಫಲವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೆಪ್ಟೆಂಬರ್ 5 ರಂದು ಬನಶಂಕರಿ ಎರಡನೇ ಹಂತದ ಬಿಡಿಎ ಕಾಂಪ್ಲೆಕ್ಸ್ ಸಮೀಪದ ರಾಜಲಕ್ಷ್ಮಿ ಜ್ಯುವೆಲರ್ಸ್ ಅಂಗಡಿಯಲ್ಲಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕಳ್ಳರ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬ್ಯಾಗಿನಲ್ಲಿ ಗ್ಯಾಸ್ ಕಟರ್ ಸಮೇತ ಮಧ್ಯರಾತ್ರಿ ಚಿನ್ನದ ಅಂಗಡಿ ಬಳಿ ಬಂದಿದ್ದ ಇಬ್ಬರು ಕಳ್ಳರು ಶಟ್ಟರ್ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಆಗಲೆ ಪಕ್ಕದ ಅಂಗಡಿಯಲ್ಲಿದ್ದ ಕೆಲಸಗಾರರು ಬೆಳಕು ನೋಡಿ ಕಳ್ಳ ಕಳ್ಳ ಎಂದು ಕೂಗಿಕೊಂಡಿದ್ದಾರೆ. ತಕ್ಷಣ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಘಟನೆಯ ಸಂಬಂಧ ಜ್ಯುವೆಲರಿ ಅಂಗಡಿ ಮಾಲೀಕ ಗೋದಾರಾಮ್ ಚೌಧರಿ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಶೋಧಕಾರ್ಯ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮಾರಾಟಕ್ಕಿಟ್ಟಿದ್ದ ಗಣೇಶ ಮೂರ್ತಿಯನ್ನೂ ಬಿಡದೇ ಕದ್ದೊಯ್ದ ಕಳ್ಳರು - Ganesha Idol Theft
ಇದನ್ನೂ ಓದಿ: ಮೇಕೆ ಕಳ್ಳತನ ಪ್ರಕರಣ: 36 ವರ್ಷದ ಬಳಿಕ ಹೊರ ಬಿದ್ದ ಮಹಾ ತೀರ್ಪು - Bihar Goat Theft Case