ಮನೆಯ ಮುದ್ದಿನ ಶ್ವಾನಕ್ಕೆ ಸಂಭ್ರಮದ ಸೀಮಂತ: ವಿಡಿಯೋ ನೋಡಿ - Dog Baby Shower - DOG BABY SHOWER
🎬 Watch Now: Feature Video
Published : Jun 2, 2024, 3:29 PM IST
ಮಂಡ್ಯ: ನಾಯಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ?. ಅದರಲ್ಲೂ ಕೆಲವರಂತೂ ತಮ್ಮ ಸ್ವಂತ ಮಕ್ಕಳಿಗಿಂತಲೂ ತುಸು ಹೆಚ್ಚೇ ಮುದ್ದು ಮಾಡುತ್ತಾರೆ. ತಮ್ಮ ಕುಟುಂಬದ ಸದಸ್ಯನಂತೆ ಸಾಕುವುದನ್ನೂ ನೋಡಿದ್ದೇವೆ.
ಇದಕ್ಕೆ ಹೊಸ ಉದಾಹರಣೆ ಮಂಡ್ಯ ತಾಲೂಕಿನಲ್ಲಿ ಸಿಕ್ಕಿದೆ. ಯಲಿಯೂರು ಗ್ರಾಮದ ಮನೆಯೊಂದರಲ್ಲಿ ಗರ್ಭಿಣಿ ಸಾಕು ನಾಯಿಗೆ ಸಂಭ್ರಮದ ಸೀಮಂತ ಕಾರ್ಯ ಮಾಡಲಾಗಿದೆ. ಈ ಶ್ವಾನ ಈಗಾಗಲೇ ಏಳು ಮರಿಗಳಿಗೆ ಜನ್ಮ ನೀಡಿ ಕೆಲವು ತಿಂಗಳು ಕಳೆದಿದೆ. ತನ್ನ ಮರಿಗಳೊಂದಿಗೆ ಆಟವಾಡುತ್ತಾ ಮನೆ ಮಾಲೀಕರೊಂದಿಗೂ ಸಂತೋಷದಿಂದ ಓಡಾಡುತ್ತಿದೆ.
ಶ್ವಾನ ಲಾಸಿಗೆ ಮನೆಮಂದಿ ಅದ್ಧೂರಿಯಾಗಿ ಸೀಮಂತ ಕಾರ್ಯ ಮಾಡಿದ್ದಾರೆ. ಪ್ರೀತಿಯ ಸಾಕು ಶ್ವಾನಕ್ಕೆ ಹೊಸ ಬಟ್ಟೆ ತೊಡಿಸಿ, ಕುಂಕುಮ ಇಟ್ಟು, ಹೂವಿನ ಹಾರ ಹಾಕಿದ್ದಾರೆ. ಇದರ ಜೊತೆಗೆ ಬಾಳೆಹಣ್ಣು, ಬೆಲ್ಲ, ಬಳೆ, ವೀಳ್ಯದೆಲೆಯನ್ನು ಇಟ್ಟಿದ್ದರು. ಈ ಕಾರ್ಯಕ್ರಮದ ವಿಡಿಯೋ ನೋಡಿ.
ಇದನ್ನೂ ಓದಿ: ಗಜರಾಜನಿಗೂ ಇಷ್ಟ ಮಾವು: ಮರ ಹತ್ತಿ ಹಣ್ಣು ಕಿತ್ತು ತಿಂದ ಆನೆ- ವಿಡಿಯೋ - Elephant Ate Mango