ETV Bharat / technology

ಭಾರತದಲ್ಲಿ ಫೆಬ್ರವರಿಯಲ್ಲಿ 76 ಲಕ್ಷಕ್ಕೂ ಹೆಚ್ಚು ಖಾತೆ ಬ್ಯಾನ್​ ಮಾಡಿದ ವಾಟ್ಸಾಪ್​​ - WhatsApp banned 76 lakh accounts - WHATSAPP BANNED 76 LAKH ACCOUNTS

ದ್ವೇಷ ಪೂರಿತ ವಿಷಯಗಳ ಹಂಚಿಕೆ, ನಿಂದನೆ ಸೇರಿದಂತೆ ಹಾನಿಕಾರ ನಡುವಳಿಕೆಯನ್ನು ತಡೆಗಟ್ಟುವ ಕ್ರಮವನ್ನು ವಾಟ್ಸಾಪ್​ ಒಳಗೊಂಡಿದೆ.

WhatsApp  banned more than 76 lakh accounts in India

author img

By ETV Bharat Karnataka Team

Published : Apr 2, 2024, 2:23 PM IST

ನವದೆಹಲಿ: ಮೆಟಾ ಮಾಲೀಕತ್ವದ ವಾಟ್ಸಾಪ್​ ಭಾರತದಲ್ಲಿ ಫೆಬ್ರವರಿ ತಿಂಗಳಲ್ಲಿ 76 ಲಕ್ಷ ಖಾತೆಯನ್ನು ನಿಷೇಧಿಸಿರುವುದಾಗಿ ತಿಳಿಸಿದೆ. ದ್ವೇಷಪೂರಿತ ವಿಷಯಗಳ ಹಂಚಿಕೆ ಅಥವಾ ಹಾನಿಕಾರ ನಡುವಳಿಕೆ ಅನುಕರಣೆ ಹಿನ್ನೆಲೆ ಈ ನಿಷೇಧವನ್ನು ಐಟಿ ನಿಯಮ 2021ರ ಪ್ರಕಾರ ನಡೆಸಲಾಗಿದೆ.

ಫೆಬ್ರವರಿ 1 ರಿಂದ 29ರವರೆಗೆ 76,28,000 ವಾಟ್ಸಾಪ್​ ಖಾತೆಗಳನ್ನು ಬ್ಯಾನ್​ ಮಾಡಲಾಗಿದ್ದು, ಈ ಖಾತೆಗಳಲ್ಲಿ 14,24,000 ಈ ಮೊದಲು ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ದೇಶದಲ್ಲಿ 500 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್​ ಪ್ಲಾಟ್‌ಫಾರ್ಮ್ ಆಗಿರುವ ವಾಟ್ಸಾಪ್​​ ಫೆಬ್ರವರಿಯಲ್ಲಿ ದಾಖಲೆ ಮಟ್ಟದಲ್ಲಿ 16,618 ದೂರನ್ನು ಪಡೆದಿದೆ.

ಖಾತೆ ವಿರುದ್ಧದ ವರದಿಯ ಆಧಾರದ ಮೇಲೆ ವಾಟ್ಸಾಪ್​ ಈ ಕ್ರಮಕ್ಕೆ ಮುಂದಾಗಿದೆ. ಈ ಖಾತೆ ವಿರುದ್ಧದ ಕ್ರಮದಲ್ಲಿ ಸಂಸ್ಥೆಯ ಮಾನದಂಡದ ವಿರುದ್ಧವಾಗಿ ಹಾನಿಕಾರಕ ನಡುವಳಿಕೆ ಅನುಸರಿಸುವ ಖಾತೆ ಮೇಲೆ ಕ್ರಮ ಕೈಗೊಳ್ಳುವ, ನಿಷೇಧಿಸುವ ಮತ್ತು ಈ ಹಿಂದೆ ನಿಷೇಧಿಸಿದ ಖಾತೆಯನ್ನು ಮತ್ತೆ ಪುನರ್​ ಸ್ಥಾಪಿಸುವ ಅಧಿಕಾರವನ್ನು ವಾಟ್ಸಾಪ್​ ಹೊಂದಿದೆ.

ಜನವರಿ 1 ರಿಂದ 31ರವರೆಗೆ ಸಂಸ್ಥೆ 67,28,000 ಖಾತೆಯನ್ನು ನಿಷೇಧಿಸಿತು.

ಈ ಬಳಕೆದಾರ ಸುರಕ್ಷತಾ ವರದಿಯ ಸ್ವೀಕಾರ ಮತ್ತು ದೂರಗಳ ಅನುಸಾರ ವಾಟ್ಸಾಪ್​ ಈ ಕ್ರಮವನ್ನು ನಡೆಸಿದೆ. ದ್ವೇಷ ಪೂರಿತ ವಿಷಯಗಳ ಹಂಚಿಕೆ, ನಿಂದನೆ ಸೇರಿದಂತೆ ಹಾನಿಕಾರ ನಡುವಳಿಕೆಯನ್ನು ತಡೆಗಟ್ಟುವ ಕ್ರಮವನ್ನು ವಾಟ್ಸಾಪ್​ ಒಳಗೊಂಡಿದೆ.

ಈ ಕುರಿತು ಮೇಲ್ವಿಚಾರಣೆ ಮಾಡಲು ಎಂಜಿನಿಯರ್‌ಗಳು, ಡೇಟಾ ವಿಜ್ಞಾನಿಗಳು, ವಿಶ್ಲೇಷಕರು, ಸಂಶೋಧಕರು ಮತ್ತು ಕಾನೂನು ಜಾರಿ, ಆನ್‌ಲೈನ್ ಸುರಕ್ಷತೆ ಮತ್ತು ತಂತ್ರಜ್ಞಾನದ ಬೆಳವಣಿಗೆಗಳಲ್ಲಿ ತಜ್ಞರ ತಂಡವನ್ನು ನೇಮಿಸಿಕೊಳ್ಳುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಲಕ್ಷಾಂತರ ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಸಶಕ್ತಗೊಳಿಸುವ ಪ್ರಯತ್ನದಲ್ಲಿ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಕುಂದುಕೊರತೆ ಮೇಲ್ಮನವಿ ಸಮಿತಿಯೊಂದನ್ನು (ಜಿಎಸಿ- Grievance Appellate Committee) ಆರಂಭಿಸಿದೆ. ಇದು ವಿಷಯ ಮತ್ತು ಇತರ ಸಮಸ್ಯೆಗಳ ಬಗ್ಗೆ ಬಳಕೆದಾರರ ದೂರುಗಳನ್ನು ಪರಿಶೀಲಿಸುತ್ತದೆ.

ಬೃಹತ್ ತಂತ್ರಜ್ಞಾನ ಕಂಪನಿಗಳನ್ನು ನಿಯಂತ್ರಿಸುವ ಭಾಗವಾಗಿ ಹೊಸ ಸಮಿತಿ ರಚಿಸಲಾಗಿದೆ ಎನ್ನಲಾಗಿದೆ. ಇದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ನಿರ್ಧಾರಗಳ ವಿರುದ್ಧ ಬಳಕೆದಾರರ ಮನವಿಗಳನ್ನು ಸ್ವೀಕರಿಸಿ ಅವುಗಳನ್ನು ಪರಿಶೀಲಿಸುತ್ತದೆ. ಇತ್ತೀಚೆಗೆ ತಿದ್ದುಪಡಿ ಮಾಡಲಾದ ಐಟಿ ನಿಯಮಗಳು, 2021 ರ ಅಡಿ ಅಗತ್ಯವಿರುವಂತೆ ಮೂರು ಕುಂದುಕೊರತೆ ಮೇಲ್ಮನವಿ ಸಮಿತಿಗಳನ್ನು (ಜಿಎಸಿ) ಸ್ಥಾಪಿಸಲು ಐಟಿ ಸಚಿವಾಲಯ ಸೂಚನೆ ನೀಡಿದೆ. (ಐಎಎನ್​ಎಸ್​)

ಇದನ್ನೂ ಓದಿ: ನಾಲ್ಕರಲ್ಲಿ ಓರ್ವ ಯೂಟ್ಯೂಬರ್ ಆದಾಯ ಗಳಿಸುತ್ತಿರುವುದು Shorts​ನಿಂದ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.