ಸಿಯೋಲ್: ಕೃತಕ ಬುದ್ಧಿಮತ್ತೆಯನ್ನು ಕೇಂದ್ರಿಕರಿಸಿ ಈ ವಲಯದಲ್ಲಿ ತಂತ್ರಜ್ಞಾನ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸ್ಯಾಮ್‌ಸಂಗ್ ಸಿಯೋಲ್ ನ್ಯಾಷನಲ್ ಯೂನಿವರ್ಸಿಟಿ (ಎಸ್ಎನ್ಯು) ಜೊತೆಗೆ ಕೈ ಜೋಡಿಸಿದೆ. ಇದಕ್ಕಾಗಿ ಜಂಟಿ ಸಂಶೋಧನಾ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ಸ್ಯಾಮ್‌ಸಂಗ್ ತಿಳಿಸಿದೆ.
ತನ್ನ ಸಹಾಭಾಗಿತ್ವದ ಅಡಿಯಲ್ಲಿ ಮೊಬೈಲ್, ಟಿವಿ ಮತ್ತು ಗೃಹ ಬಳಕೆ ವಸ್ತುಗಳು ನಿರ್ವಹಣೆ ಮಾಡುವ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ ಸಾಧನಗಳ ವಿಭಾಗ ಎನ್ಎನ್ಯು ಮೂರು ವರ್ಷಗಳ ಒಪ್ಪಂದಕ್ಕೆ ಮುಂದಾಗಿದೆ. ಈ ವೇಳೆ ಸ್ಯಾಮ್‌ಸಂಗ್ ಎಐ ತಂತ್ರಜ್ಞಾನಗಳ ಮೇಲೆ ಜಂಟಿ ಯೋಜನೆಯನ್ನು ಎಸ್ಎನ್ಯು ಜೊತೆ ನಡೆಸಲಿದೆ.
ಸಂಸ್ಥೆ ಪ್ರಕಾರ, ಈ ಯೋಜನೆ ಮೂಲಕ ಸಾಧನಗಳ ಎಐ ಮತ್ತು ಮಲ್ಟಿ ಮಾಡಲ್ ಎಐ ಮೇಲೆ ಗಮನ ಕೇಂದ್ರಿಕರಿಸಲಿದೆ ಎಂದು ಯೊನ್ಹಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ವಿಶ್ವದ ಅತಿದೊಡ್ಡ ಸ್ಮಾರ್ಟ್ಫೋನ್ ಉತ್ಪಾದನಾ ಸಂಸ್ಥೆ ಆಗಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್24 ಸೇರಿದಂತೆ ಇತ್ತೀಚಿನ ತನ್ನ ಉತ್ಪನ್ನಗಳಲ್ಲಿ ಎಐ ತಂತ್ರಜ್ಞಾನದ ಅಳವಡಿಕೆಗೆ ಮುಂದಾಗಿದೆ.
ಎಸ್ಎನ್ಯು ಜೊತೆಗಿನ ಈ ಉದ್ಯಮ ಅಕಾಡೆಮಿಯಾ ಸಹಯೋಗವು ಕೋರ್ ಎಐ ತಂತ್ರಜ್ಞಾನಗಳನ್ನು ರಕ್ಷಿಸಲು ಮತ್ತು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಎಐ ಕ್ಷೇತ್ರದಲ್ಲಿ ತನ್ನ ಉತ್ಪನ್ನ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಸ್ಯಾಮ್‌ಸಂಗ್ ತಿಳಿಸಿದೆ.
ಅಲ್ಲದೇ ಸ್ಯಾಮ್‌ಸಂಗ್- ಎಸ್ಎನ್ಯು ಎಐ ಪ್ರಯೋಗಾಲಯದಲ್ಲಿ ಸಂಸ್ಥೆಗಾಗಿ ಶ್ರಮಪಡುವ ಪ್ರತಿಭಾನ್ವಿತ ಮಾನವ ಸಂಪನ್ಮೂಲವನ್ನು ಪೋಷಿಸಿ, ರಕ್ಷಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದೆ.
ಎಸ್ಎನ್ಯು ಮತ್ತು ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ ನಡುವಿನ ಜಂಟಿ ಎಐ ಸಂಶೋಧನಾ ಕೇಂದ್ರ ಅಭಿವೃದ್ಧಿ ಸಂಬಂಧ ಈ ಒಪ್ಪಂದದಲ್ಲಿ ನಾವು ನಮ್ಮ ತಂತ್ರಜ್ಞಾನ ಮತ್ತು ಎಐ ಕ್ಷೇತ್ರದಲ್ಲಿನ ಉತ್ಪನಗಳ ಸ್ಪರ್ಧಾತ್ಮಕತೆ ಬಲಗೊಳಿಸುವುದು. ಭವಿಷ್ಯದಲ್ಲಿ ಎಐ ಸಂಶೋಧನೆಯಲ್ಲಿ ಪ್ರತಿಭಾನ್ವಿತ ಜನರನ್ನು ರಕ್ಷಿಸಿ ಕೊಡುಗೆ ನೀಡುವ ಗುರಿ ಹೊಂದಿದೆ ಎಂದು ಸ್ಯಾಮ್ಸಂಗ್ನ ಅಧ್ಯಕ್ಷ ಜಿಯೋನ್ ಕ್ಯುಂಗ್ ಹೂನ್ ತಿಳಿಸಿದ್ದಾರೆ.
ಇದನ್ನೂ ಓದಿ: ಸಿಯೋಲ್ನಲ್ಲಿ ಮುಂದಿನ ಎಐ ಶೃಂಗಸಭೆ: ಕೃತಕ ಬುದ್ಧಿಮತ್ತೆ ಬಳಕೆ, ಸುರಕ್ಷತೆಯ ಬಗ್ಗೆ ಚರ್ಚೆ