ETV Bharat / technology

ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ರೆಡ್​ಮಿ ನೋಟ್​ 14 ಸೀರಿಸ್​; ಕೈಗೆಟುಕುವ ಬೆಲೆಗೆ ಏನೆಲ್ಲಾ ವೈಶಿಷ್ಟ್ಯಗಳು!! - REDMI NOTE 14 5G SERIES LAUNCHED

Redmi Note 14 5G Series Launched: ದೇಶಿಯ ಮಾರುಕಟ್ಟೆಗೆ ರೆಡ್​ಮಿ ನೋಟ್​ 14 ಸೀರಿಸ್​ ಕಾಲಿಟ್ಟಿದೆ. ಇದರ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣಾ ಬನ್ನಿ..

REDMI NOTE 14 SERIES FEATURES  REDMI NOTE 14 SERIES PRICE  REDMI NOTE 14 SERIES LAUNCHED  REDMI NOTE 14 SERIES
ರೆಡ್​ಮಿ ನೋಟ್​ 14 ಸೀರಿಸ್ (Photo Credit- Xiaomi)
author img

By ETV Bharat Tech Team

Published : Dec 10, 2024, 8:56 AM IST

Redmi Note 14 5G Series Launched: ಚೀನಾದ ಸ್ಮಾರ್ಟ್‌ಫೋನ್ ತಯಾರಕ Xiaomi ತನ್ನ ಹೊಸ ಸ್ಮಾರ್ಟ್‌ಫೋನ್ ರೆಡ್​ಮಿ ನೋಟ್​ 14 ಸೀರಿಸ್​ ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ, ಕಂಪನಿಯು 50 ಮೆಗಾಪಿಕ್ಸೆಲ್ ರಿಯರ್​ ಕ್ಯಾಮರಾದೊಂದಿಗೆ 16 ಮೆಗಾಪಿಕ್ಸೆಲ್ ಫ್ರಂಟ್​ ಕ್ಯಾಮರಾವನ್ನು ಸಹ ಒದಗಿಸಿದೆ. ಈ ಸ್ಮಾರ್ಟ್‌ಫೋನ್‌ನ ಔಟ್​ಲುಕ್​ ಜನರನ್ನು ಆಕರ್ಷಿಸುತ್ತದೆ. ಈ ಫೋನ್‌ನ ವೈಶಿಷ್ಟ್ಯಗಳು ಮತ್ತು ಬೆಲೆಯ ಬಗ್ಗೆ ವಿವರ ಇಲ್ಲಿದೆ..

ರೆಡ್​ಮಿ ನೋಟ್​ 14 5ಜಿ ವಿಶೇಷತೆಗಳು: ಕಂಪನಿಯು ಈ ಸೀರಿಸ್​ನಲ್ಲಿ ಮೂರು ಮಾಡೆಲ್​ಗಳನ್ನು ಪರಿಚಯಿಸಿದೆ. ಇದರಲ್ಲಿ ರೆಡ್​ಮಿ ನೋಟ್​ 14, ರೆಡ್​ಮಿ ನೋಟ್​ 14 ಪ್ರೊ ಮತ್ತು ರೆಡ್​ಮಿ ನೋಟ್​ 14 ಪ್ರೊ+ ಸೇರಿವೆ. ರೆಡ್​ಮಿ ನೋಟ್​ 14 5ಜಿ ಫ್ಲಾಟ್ ಎಡ್ಜ್ಸ್​ ಮತ್ತು ಪಂಚ್-ಹೋಲ್ ಕಟೌಟ್‌ನೊಂದಿಗೆ ತೆಳುವಾದ ಬೆಜೆಲ್‌ಗಳನ್ನು ಹೊಂದಿದೆ. 3.5 ಎಂಎಂ ಆಡಿಯೋ ಜಾಕ್, ಐಆರ್ ಬ್ಲಾಸ್ಟರ್, ಮೈಕ್ರೊಫೋನ್ ಮತ್ತು ಸ್ಪೀಕರ್ ಗ್ರಿಲ್‌ನಂತಹ ವೈಶಿಷ್ಟ್ಯಗಳನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ ಕಾಣಬಹುದು. ರೆಡ್​ಮಿ ನೋಟ್​ 14 5ಜಿ ಸೀರಿಸ್​ ಅನ್ನು HyperOS ನೊಂದಿಗೆ ಮಾಡಲಾಗಿದೆ. ರೆಡ್​ಮಿ ನೋಟ್​ 14 5ಜಿಯಲ್ಲಿ ಸ್ಮಾರ್ಟ್‌ಫೋನ್ 3D ಕರ್ವ್ಡ್ AMOLED ಡಿಸ್​ಪ್ಲೇ, ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, ಮೀಡಿಯಾ ಟೆಕ್ ಡೈಮೆನ್ಶನ್ 7300 ಅಲ್ಟ್ರಾ ಚಿಪ್‌ಸೆಟ್‌ನಂತಹ ಹಲವು ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ.

ಕ್ಯಾಮರಾ ಸೆಟಪ್: ಕಂಪನಿಯು ಈ ಫೋನ್‌ನ ಬ್ಯಾಕ್​ ಪೆನಲ್​ ಮೇಲಿನ ಎಡಭಾಗದಲ್ಲಿ ಕ್ಯಾಮರಾ ಮಾಡ್ಯೂಲ್ ಅನ್ನು ನೀಡಿದೆ. ಇದು 50MP ಸೋನಿ LYT-600 OIS ರಿಯರ್​ ಕ್ಯಾಮರಾವನ್ನು ಹೊಂದಿದೆ. ಇದರೊಂದಿಗೆ ಇದು 8MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಅನ್ನು ಹೊಂದಿದೆ. ಈ ಫೋನ್​ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16MP ಫ್ರಂಟ್​ ಕ್ಯಾಮರಾ ಹೊಂದಿದೆ.

ಡಿಸ್​ಪ್ಲೇ ಮತ್ತು ಬ್ಯಾಟರಿ: ಫೋನ್ ಸೂಪರ್ ಬ್ರೈಟ್ ಡಿಸ್​ಪ್ಲೇ ಹೊಂದಿದೆ. ಇದರಲ್ಲಿ ಉತ್ತಮ ಗೌಪ್ಯತೆ ನಿಯಂತ್ರಣವನ್ನು ಕ್ಲೈಮ್ ಮಾಡಲಾಗಿದೆ. ಈ ಸಾಧನವು ಆಂತರಿಕವಾಗಿ ಅಭಿವೃದ್ಧಿಪಡಿಸಿದ AI ವೈಶಿಷ್ಟ್ಯಗಳನ್ನು ಹೊಂದಿದೆ, ಇದು ಫೋನ್‌ನ ಬಳಕೆಯನ್ನು ಸುಲಭ ಮತ್ತು ಚುರುಕಾಗಿ ಮಾಡುತ್ತದೆ. ಕಂಪನಿಯು ಈ ಫೋನ್ ಅನ್ನು ಕಪ್ಪು ಮತ್ತು ತಿಳಿ ನೀಲಿ ಬಣ್ಣಗಳಲ್ಲಿ ಬಿಡುಗಡೆ ಮಾಡಿದೆ. ಇದು 55 mAh ಬ್ಯಾಟರಿಯನ್ನು ಸಹ ಹೊಂದಿದೆ.

ರೆಡ್​ಮಿ ನೋಟ್​ 14 ಪ್ರೊ: ಈ ಸ್ಮಾರ್ಟ್​ಫೋನ್​ 6.67-ಇಂಚಿನ 1.5K AMOLED ಡಿಸ್​ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್​ ಹೊಂದಿದೆ. ಕಾರ್ನಿಂಗ್ ಗೊರಿಲ್ಲಾ ವಿಕ್ಟಸ್ 2 ಪ್ರೊಟೆಕ್ಷನ್​ ಸಹ ಇದರಲ್ಲಿ ನೀಡಲಾಗಿದೆ. ಮಧ್ಯಮ ಶ್ರೇಣಿಯ ಸಾಧನವು ಮೀಡಿಯಾ ಟೆಕ್ ಡೈಮೆನ್ಶನ್ 7300 ಅಲ್ಟ್ರಾ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಈ ಸ್ಮಾರ್ಟ್‌ಫೋನ್ ಅನ್ನು 50MP+8MP+2MP ಯ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 50MP ಫ್ರಂಟ್​ ಕ್ಯಾಮರಾ ಮತ್ತು 45W ಸ್ಪೀಡ್​ ಚಾರ್ಜಿಂಗ್‌ನೊಂದಿಗೆ 5500mAh ಬ್ಯಾಟರಿಯಂತಹ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ.

ರೆಡ್​ಮಿ ನೋಟ್​ 14 ಪ್ರೊ+: ಈ ಸಾಧನವು ಮೊದಲ ಡ್ಯುಯಲ್ ಸೈಡ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಅನ್ನು ಹೊಂದಿದೆ. ಇದಕ್ಕೆ IP66+ IP68+ IP69 ಪ್ರಮಾಣೀಕರಣವನ್ನು ನೀಡಲಾಗಿದೆ. ಇದು 20 MP ಸೆಲ್ಫಿ ಕ್ಯಾಮರಾ ಮತ್ತು 50 MP ಟೆಲಿಫೋಟೋ ಕ್ಯಾಮರಾವನ್ನು ಒಳಗೊಂಡಿದೆ. ರೆಡ್​ಮಿ ನೋಟ್​ 14 ಪ್ರೊ ಪ್ಲಸ್​ 5G ನಲ್ಲಿ ಹೊಸ SuperAi ವೈಶಿಷ್ಟ್ಯಗಳು ಲಭ್ಯವಿರುತ್ತವೆ. ಈ ಫೋನ್ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಈ ಸಾಧನವು 6200 mAh ಬ್ಯಾಟರಿಯನ್ನು ಹೊಂದಿದೆ.

ಬೆಲೆ: ಕಂಪನಿಯು ರೆಡ್​ಮಿ ನೋಟ್​ 14 5ಜಿಯ 6GB/128GB ಮಾದರಿಯನ್ನು ರೂ. 17,999, 8GB/128GB ಮಾದರಿಯು ರೂ. 18999 ಮತ್ತು 8GB/256GB ಮಾದರಿಯನ್ನು ರೂ. 20,999 ಕ್ಕೆ ನಿಗದಿಪಡಿಸಿದೆ. ಇದರೊಂದಿಗೆ, ಕಂಪನಿಯ ಅಧಿಕೃತ ವೆಬ್‌ಸೈಟ್‌ನ ಹೊರತಾಗಿ, ಗ್ರಾಹಕರು ಈ ಸ್ಮಾರ್ಟ್‌ಫೋನ್ ಅನ್ನು ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ನಿಂದಲೂ ಖರೀದಿಸಬಹುದು.

ರೆಡ್​ಮಿ ನೋಟ್​ 14 ಪ್ರೊ 5ಜಿಯ 8GB/128GB ಬೆಲೆ 23,999 ರೂ. ಆದರೆ, 8GB/256GB ಬೆಲೆ 25,999 ರೂ. ಈ ಫೋನ್‌ ಡಿಸೆಂಬರ್ 13 ರಂದು ಮಾರುಕಟ್ಟೆಗೆ ಪ್ರವೇಶಿಸಲಿದೆ. ಈ ಫೋನ್ ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುತ್ತದೆ.

ರೆಡ್​ಮಿ ನೋಟ್​ 14 ಪ್ರೊ+ 5ಜಿಯ 8GB/128GB ಬೆಲೆ 29,999 ರೂ. ಆದರೆ, 8GB/256GB ಬೆಲೆ 31,999 ರೂ. ಇದಲ್ಲದೇ 12GB/512GB ಬೆಲೆ 34,999 ರೂ. ಈ ಫೋನ್‌ ಡಿಸೆಂಬರ್ 13 ರಂದು ಲಭ್ಯವಾಗಲಿದ್ದು, ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ ಮೂಲಕ ಖರೀದಿಸಬಹುದು.

ಓದಿ: ಕೈಗೆಟುಕುವ ದರದಲ್ಲಿ ಗೇಮಿಂಗ್​ ಫೋನ್; ಪವರ್​ಫುಲ್​ ಚಿಪ್​ಸೆಟ್​ ಸೇರಿದಂತೆ ಅನೇಕ ವೈಶಿಷ್ಟ್ಯಗಳು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.