ETV Bharat / technology

ಕೇವಲ 10 ಸಾವಿರಕ್ಕೆ 5ಜಿ ಸ್ಮಾರ್ಟ್​ಫೋನ್​ ಪರಿಚಯಿಸಿದ ಮೊಟೊರೊಲಾ: ಏನುಂಟು, ಏನಿಲ್ಲ - ಇಲ್ಲಿದೆ ಮಾಹಿತಿ

Moto G35 5G Launched: ಕೈಗೆಟುಕುವ ದರದಲ್ಲಿ ಮೊಟೊರೊಲಾ ಕಂಪನಿ 5ಜಿ ಸ್ಮಾರ್ಟ್​ಫೋನ್​ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಇದರ ಬೆಲೆ ಮತ್ತು ವೈಶಿಷ್ಟ್ಯಗಳು ಹೀಗಿವೆ.

MOTO G35 5G  MOTO G35 5G PRICE  MOTO G35 5G SPECIFICATIONS  MOTO G35 5G FEATURES
ಕೇವಲ 10 ಸಾವಿರಕ್ಕೆ 5ಜಿ ಸ್ಮಾರ್ಟ್​ಫೋನ್​ ಪರಿಚಯಿಸಿದ ಮೊಟೊರೊಲಾ (Motorola)
author img

By ETV Bharat Tech Team

Published : 6 hours ago

Moto G35 5G Launched: ಭಾರತೀಯ ಮಾರುಕಟ್ಟೆಗೆ ಕೇವಲ 10 ಸಾವಿರ ರೂಪಾಯಿಗೆ ಹೊಸ 5G ಸ್ಮಾರ್ಟ್ ಫೋನ್ ಬಂದಿದೆ. ಪ್ರಮುಖ ಮೊಬೈಲ್ ತಯಾರಿಕಾ ಕಂಪನಿ ಮೊಟೊರೊಲಾ 'ಜಿ' ಸರಣಿಯಲ್ಲಿ ಮತ್ತೊಂದು ಮೊಬೈಲ್ ಬಿಡುಗಡೆ ಮಾಡಿದೆ. 'Moto G35 5G' ಎಂದು ಹೆಸರಿಸಲಾದ ಈ ಫೋನ್ Android 14 ಆಧಾರಿತ Halo UI ಸ್ಕ್ರೀನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

'Moto G35 5G' ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳು:

  • ಡಿಸ್​ಪ್ಲೇ: 6.72 ಇಂಚಿನ ಫುಲ್​ ಹೆಚ್​ಡಿ
  • ರಿಫ್ರೆಶ್ ರೇಟ್​: 120Hz
  • ಟಚ್​ ಸ್ಯಾಂಪ್ಲಿಂಗ್​ ರೇಟ್​: 240Hz
  • ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್​
  • ಬ್ಯಾಟರಿ: 5,000mAh
  • ಪ್ರೊಸೆಸರ್: Qualcomm Snapdragon 6S ಜನರೇಷನ್ 3
  • 20W ವೈರ್ಡ್ ಚಾರ್ಜಿಂಗ್
  • ಡಾಲ್ಬಿ ಅಟ್ಮಾಸ್-ಸಪೋರ್ಟ್​ ಸ್ಟಿರಿಯೊ ಸ್ಪೀಕರ್‌ಗಳು
  • IP52 ರೇಟೆಡ್ ಲೆದರ್ ಫಿನಿಶ್

ಕ್ಯಾಮರಾ ಸೆಟಪ್: ಈ ಹೊಸ ಫೋನ್ 50 ಎಂಪಿ ಕ್ವಾಡ್ ಪಿಕ್ಸೆಲ್ ಪ್ರೈಮರಿ ರಿಯರ್ ಸೆನ್ಸಾರ್, ಅಲ್ಟ್ರಾ ವೈಡ್ ಆಂಗಲ್‌ನೊಂದಿಗೆ 8 ಎಂಪಿ ಸೆನ್ಸಾರ್ ಮತ್ತು ಸೆಲ್ಫಿಗಳಿಗಾಗಿ 16 ಎಂಪಿ ಫ್ರಂಟ್ ಕ್ಯಾಮರಾ ಹೊಂದಿದೆ.

ಕನೆಕ್ಟಿವಿಟಿ ವೈಶಿಷ್ಟ್ಯಗಳು:

  • ಡ್ಯುಯಲ್ ಹ್ಯಾಂಡ್ ವೈಫೈ
  • ಬ್ಲೂಟೂತ್ 5.0
  • 3.5 ಎಂಎಂ ಆಡಿಯೊ ಜಾಕ್
  • USB ಟೈಪ್-ಸಿ ಪೋರ್ಟ್

ಕಲರ್​ ಆಪ್ಷನ್​: ಕಂಪನಿಯು ಇದನ್ನು ಕೇವಲ ಒಂದೇ ಮಾಡೆಲ್​ನಲ್ಲಿ ಹೊರ ತಂದಿದೆ. ಈ ಫೋನ್​ ರೆಡ್​, ಲೀಫ್​ ಗ್ರೀನ್​ ಮತ್ತು ಮಿಡ್​ನೈಟ್​ ಬ್ಲೂ ಎಂಬ ಮೂರು ಕಲರ್​ಗಳಲ್ಲಿ ಪರಿಚಯಿಸಿದೆ.

ಬೆಲೆ: ಕಂಪನಿಯು Moto G35 5G ಮೊಬೈಲ್ '4GB+128GB' ರೂಪಾಂತರವನ್ನು ರೂ.9,999 ಕ್ಕೆ ನಿಗದಿಪಡಿಸಿದೆ.

ಎಲ್ಲೆಲ್ಲಿ ಲಭ್ಯ?: ಹೊಸ 'ಮೊಟೊ ಜಿ35 5ಜಿ' ಮೊಬೈಲ್ ಅನ್ನು ಫ್ಲಿಪ್‌ಕಾರ್ಟ್ ಮತ್ತು ಮೊಟೊರೊಲಾ ರಿಟೇಲ್ ಸ್ಟೋರ್‌ಗಳಲ್ಲಿ ಖರೀದಿಸಬಹುದು.

ಓದಿ: ಐಫೋನ್​ ಬಳಕೆದಾರರಿಗೆ ಸಿಹಿ ಸುದ್ದಿ- ಸೂಪರ್ ಎಐ​ ಫೀಚರ್​ಗಳ ಜೊತೆ ಆದಷ್ಟು ಬೇಗ ಲಭ್ಯವಾಗಲಿದೆ iOS 18.2 ಅಪ್​ಡೇಟ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.