ETV Bharat / technology

20 ಲಕ್ಷ ಭಾರತೀಯರಿಗೆ ಮೈಕ್ರೋಸಾಫ್ಟ್​ನಿಂದ AI ತರಬೇತಿ: ಬೆಂಗಳೂರಿನಲ್ಲಿ ನಾದೆಲ್ಲಾ ಹೇಳಿಕೆ - ಕೃತಕ ಬುದ್ಧಿಮತ್ತೆ

20 ಲಕ್ಷ ಭಾರತೀಯರಿಗೆ ಎಐ ಬಗ್ಗೆ ತರಬೇತಿ ನೀಡುವುದಾಗಿ ಮೈಕ್ರೋಸಾಫ್ಟ್​ ಹೇಳಿದೆ.

Microsoft to skill 2 mn Indians in AI, to further invest in country: Satya Nadella

author img

By ETV Bharat Karnataka Team

Published : Feb 7, 2024, 12:48 PM IST

ಬೆಂಗಳೂರು : ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ವಲಯದಲ್ಲಿನ ಪ್ರತಿಭಾವಂತರ ಕೊರತೆ ನೀಗಿಸಲು ಮೈಕ್ರೋಸಾಫ್ಟ್ ಇಂಡಿಯಾ 20 ಲಕ್ಷಕ್ಕೂ ಹೆಚ್ಚು ಜನರಿಗೆ ಕೃತಕ ಬುದ್ಧಿಮತ್ತೆ ಕೌಶಲಗಳ ತರಬೇತಿ ನೀಡಲಿದೆ ಎಂದು ಮೈಕ್ರೋಸಾಫ್ಟ್ ಅಧ್ಯಕ್ಷ ಮತ್ತು ಸಿಇಒ ಸತ್ಯ ನಾದೆಲ್ಲಾ ಬುಧವಾರ ಪ್ರಕಟಿಸಿದ್ದಾರೆ. ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಾದೆಲ್ಲಾ, ಈ ಹೊಸ ಎಐ ಯುಗದಲ್ಲಿ ಮುಂದುವರಿಯಬೇಕಾದರೆ ಯುವ ಜನತೆ ಎಐ ಬಗ್ಗೆ ಕಲಿತುಕೊಳ್ಳುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.

"ಈ ವಿಷಯದಲ್ಲಿ ನಮ್ಮ ಜವಾಬ್ದಾರಿ ನಿರ್ವಹಿಸುವುದು ನಮಗೆ ಸಂತೋಷದ ವಿಷಯವೇ ಆಗಿದೆ. ಕೌಶಲ ತರಬೇತಿ ಮಾತ್ರವಲ್ಲದೇ ಎಐ ವಲಯದಲ್ಲಿ ಹೊಸ ಉದ್ಯೋಗಗಳು ಕೂಡ ಸೃಷ್ಟಿಯಾಗಲಿವೆ" ಎಂದು ನಾದೆಲ್ಲಾ ಸಭೆಯಲ್ಲಿ ಹೇಳಿದರು. ಭಾರತವು ಅತ್ಯುತ್ತಮ ಸಾಫ್ಟ್​ವೇರ್ ಡೆವಲಪರ್​ಗಳನ್ನು ಹೊಂದಿದೆ ಮತ್ತು ಮೈಕ್ರೋಸಾಫ್ಟ್ ಒಡೆತನದ ಡೆವಲಪರ್ ಪ್ಲಾಟ್​ಫಾರ್ಮ್ ಗಿಟ್​ಹಬ್​ನಲ್ಲಿ ಭಾರತೀಯ ಎಐ ಎಂಜಿನಿಯರ್​ಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ ಎಂದು ಅವರು ತಿಳಿಸಿದರು.

ಗ್ರಾಮೀಣ ಭಾರತದಲ್ಲಿನ ಜನ ಕೂಡ ಈಗ ಎಐ ಆರ್ಥಿಕತೆಯಲ್ಲಿ ಭಾಗವಹಿಸುತ್ತಿದ್ದಾರೆ. ಭಾರತದಂತಹ ದೇಶದಲ್ಲಿ, ಪ್ರಮುಖ ವಿಜ್ಞಾನ-ಚಾಲಿತ ಕೈಗಾರಿಕೆಗಳಿಗೆ ಹೆಚ್ಚಿನ ಬಂಡವಾಳ ಹರಿದು ಬರುತ್ತಿರುವುದು ತುಂಬಾ ರೋಮಾಂಚನಕಾರಿಯಾಗಿದೆ. ವೈಜ್ಞಾನಿಕ ಕ್ರಾಂತಿಯನ್ನು ಮುನ್ನಡೆಸಲು ಭಾರತಕ್ಕೆ ಸಹಾಯ ಮಾಡುವುದು ನಮಗೆ ನಿಜಕ್ಕೂ ಸಂತೋಷವಾಗಿದೆ ಎಂದು ನಾದೆಲ್ಲಾ ಹೇಳಿದರು.

"ಕಂಪನಿಯು ಭಾರತದಲ್ಲಿ ಹೆಚ್ಚಿನ ಹೂಡಿಕೆ ಮಾಡುವುದನ್ನು ಮುಂದುವರಿಸಲಿದೆ. ಪ್ರಪಂಚದಾದ್ಯಂತದ ಯಾವುದೇ ಹೈಪರ್​ ಸ್ಕೇಲ್​ಗಿಂತ ನಾವು ಭಾರತದಲ್ಲಿ ಹೆಚ್ಚಿನ ಕ್ಲೌಡ್ ವಲಯಗಳನ್ನು ಹೊಂದಿದ್ದೇವೆ. ನಾವು ಪ್ರಸ್ತುತ ಭಾರತದಲ್ಲಿ ಮೂರು ಕ್ಲೌಡ್​ಗಳನ್ನು ಹೊಂದಿದ್ದೇವೆ ಮತ್ತು ನಾಲ್ಕನೆಯದು ಶೀಘ್ರದಲ್ಲೇ ಆರಂಭವಾಗಲಿದೆ. ಎಐ ಸೇರಿದಂತೆ ಕಡಿಮೆ ಲೇಟೆನ್ಸಿ ಹೊಂದಿರುವ ಕಂಪ್ಯೂಟಿಂಗ್ ನಿಮ್ಮೆಲ್ಲರಿಗೂ ಲಭ್ಯವಾಗುವಂತೆ ಮಾಡಲು ನಾವು ಖಂಡಿತವಾಗಿಯೂ ಭಾರತದಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದ್ದೇವೆ" ಎಂದು ನಾದೆಲ್ಲಾ ಹೇಳಿದರು.

ಕಳೆದ ವರ್ಷ ಜೂನ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದಾಗ ಇತರ ಬಿಗ್ ಟೆಕ್ ಸಿಇಒಗಳೊಂದಿಗೆ ನಾದೆಲ್ಲಾ ಅವರನ್ನು ಭೇಟಿ ಮಾಡಿದ್ದರು. ಸಭೆಯ ನಂತರ, ನಾದೆಲ್ಲಾ ಅವರ ಕಚೇರಿ ಪ್ರಧಾನಿ ಮೋದಿ ಅವರೊಂದಿಗಿನ ಭೇಟಿಯ ಬಗ್ಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿತ್ತು. "ಭಾರತೀಯರ ಜೀವನವನ್ನು ಸುಧಾರಿಸಲು ಸಹಾಯ ಮಾಡುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಒಂದು ಪ್ರಮುಖ ವಿಷಯವಾಗಿದೆ. ಭಾರತವು ವಿಶ್ವದ ಅತ್ಯಂತ ಉತ್ಕೃಷ್ಟ ಡೆವಲಪರ್ ಮತ್ತು ನವೋದ್ಯಮ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿದೆ ಮತ್ತು ಮೈಕ್ರೋಸಾಫ್ಟ್ ಭಾರತೀಯ ತಂತ್ರಜ್ಞಾನದ ಬೆಳವಣಿಗೆಗೆ ಬದ್ಧವಾಗಿದೆ" ಎಂದು ಮೈಕ್ರೋಸಾಫ್ಟ್ ಹೇಳಿಕೆಯಲ್ಲಿ ತಿಳಿಸಿತ್ತು.

ಇದನ್ನೂ ಓದಿ : ಸ್ಮಾರ್ಟ್​ಫೋನ್ ಮಾರುಕಟ್ಟೆ ಶೇ 19ರಷ್ಟು ಬೆಳವಣಿಗೆ: ಅಗ್ರಸ್ಥಾನದಲ್ಲಿ ಶಿಯೋಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.