ETV Bharat / technology

ಉದ್ಯೋಗ ಜಗತ್ತಿನಲ್ಲಿ ಪ್ರಾಬಲ್ಯ ಮೆರೆಯಲಿರುವ ಎಐ: ಈ ಕೋರ್ಸ್​ ಕಲಿಯೋದರಿಂದ ಹಲವು ಲಾಭ! - AI skills

author img

By ETV Bharat Tech Team

Published : 3 hours ago

Updated : 3 hours ago

AI skills: ಉದ್ಯೋಗ ಮಾರುಕಟ್ಟೆಗೆ ಅಗತ್ಯವಾದ ಕೌಶಲ್ಯಗಳನ್ನು ನೀವು ಕಲಿತರೆ, ನಿಮ್ಮ ವೃತ್ತಿಜೀವನದಲ್ಲಿ ಯಾವುದೇ ತಿರುವು ಇರುವುದಿಲ್ಲ. ಪ್ರಸ್ತುತ AI ತಂತ್ರಜ್ಞಾನವು ಸಾಫ್ಟ್‌ವೇರ್ ವಲಯದಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. AI ಸಂಬಂಧಿತ ಕೋರ್ಸ್‌ಗಳು/ಕೌಶಲ್ಯಗಳನ್ನು ಕಲಿಯುವುದರಿಂದ ನಿಮಗೆ ಉತ್ತಮ ಸಾಧನೆ ಮಾಡಲು ಸಹಾಯ ಮಾಡುತ್ತದೆ. ಆ ಕೋರ್ಸ್​ಗಳು ಯಾವುವು ಎಂಬುದು ತಿಳಿಯೋಣಾ ಬನ್ನಿ..

ARTIFICIAL INTELLIGENCE COURSE  AI RELATED COURSES  LEARNING AI COURSES  ESSENTIAL TO EXCEL IN THE JOB
ಉದ್ಯೋಗ ಜಗತ್ತಿನಲ್ಲಿ ಪ್ರಾಬಲ್ಯ ಮೆರೆಯಲಿರುವ ಎಐ (AI)

AI skills: AI (Artificial Intelligence) ತಂತ್ರಜ್ಞಾನದ ಪರಿಚಯದೊಂದಿಗೆ ಡಿಜಿಟಲ್ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆಗಳು ನಡೆಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಸಾಫ್ಟ್‌ವೇರ್ ಉದ್ಯಮದಲ್ಲಿ ಯಶಸ್ವಿಯಾಗಲು ಈ AI ಕೌಶಲ್ಯಗಳು ನಿರ್ಣಾಯಕವಾಗಿವೆ. ಉದ್ಯೋಗ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಕಾಲಕಾಲಕ್ಕೆ ತಮ್ಮ ಕೌಶಲ್ಯವನ್ನು ಸುಧಾರಿಸುವವರು ತಮ್ಮ ವೃತ್ತಿಜೀವನದಲ್ಲಿ ಉತ್ಕೃಷ್ಟರಾಗಬಹುದು. ಮುಂದಿನ ದಿನಗಳಲ್ಲಿ ಯಾವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳು ಉದ್ಯೋಗ ಮಾರುಕಟ್ಟೆಯನ್ನು ಆಳಲಿವೆ ಗೊತ್ತಾ? ಇದೇ ವಿಷಯದ ಬಗ್ಗೆ ಪ್ರಸಿದ್ಧ ಜಾಬ್​ ಸರ್ಚ್​ ಪೋರ್ಟಲ್ ಇಂಡೀಡ್ ಮಾಡಿದ ಅವಲೋಕನದಲ್ಲಿ ಅನೇಕ ಆಸಕ್ತಿದಾಯಕ ಸಂಗತಿಗಳು ಬಹಿರಂಗವಾಗಿವೆ.

AI ತಂತ್ರಜ್ಞಾನವು ವಿಸ್ತಾರವಾಗುತ್ತಿದ್ದಂತೆ ಟೆಕ್ ಕಂಪನಿಗಳು ಉದ್ಯೋಗಾಕಾಂಕ್ಷಿಗಳಿಂದ ಈ ಕೌಶಲ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಆದ್ದರಿಂದ ಇವುಗಳನ್ನು ಕಲಿಯುವುದರಿಂದ ನೀವು ಸುಲಭವಾಗಿ ಸಾಫ್ಟ್‌ವೇರ್ ಕ್ಷೇತ್ರವನ್ನು ಪ್ರವೇಶಿಸುವ ಅವಕಾಶವನ್ನು ಪಡೆಯುತ್ತೀರಿ. ಮುಂದಿನ ದಿನಗಳಲ್ಲಿ ಯಾವ AI ತಂತ್ರಜ್ಞಾನಗಳಿಗೆ ಹೆಚ್ಚಿನ ಬೇಡಿಕೆಯಿದೆ ಎಂಬುದನ್ನು ಸಹ ಬಹಿರಂಗಪಡಿಸಿದೆ. ಮುಂದಿನ 1 ರಿಂದ 5 ವರ್ಷಗಳಲ್ಲಿ ಈ ತಂತ್ರಜ್ಞಾನಗಳಲ್ಲಿ ಉತ್ತಮ ಸಾಧನೆ ಮಾಡುವವರಿಗೆ ಉದ್ಯೋಗಗಳ ಕೊರತೆ ಇರುವುದಿಲ್ಲ ಎಂದು ಜಾಬ್​ ಸರ್ಚ್​ ಪೋರ್ಟಲ್​ ಇಂಡೀಡ್​ ನಂಬುತ್ತದೆ. ಜನರೇಟಿವ್ AI ನಲ್ಲಿ ಲಭ್ಯವಾಗುವ 42 ಪ್ರತಿಶತ ಉದ್ಯೋಗಗಳು ಯಂತ್ರ ಕಲಿಕೆಗೆ ಸಂಬಂಧಿಸಿವೆ ಎಂದು ಅಂದಾಜಿಸಲಾಗಿದೆ.

AI ಉದ್ಯೋಗಗಳಿಗೆ ಅಗತ್ಯವಿರುವ ಟಾಪ್ 15 ಕೌಶಲ್ಯಗಳು ಇವು: ವರದಿಯ ಪ್ರಕಾರ.. ಪ್ರಸ್ತುತ ಉದ್ಯೋಗ ಮಾರುಕಟ್ಟೆಗೆ ಅಗತ್ಯವಿರುವ AI ಕೌಶಲ್ಯಗಳು / ಕೋರ್ಸ್‌ಗಳನ್ನು ನೀವು ಕಲಿತರೆ ಉದ್ಯೋಗಾವಕಾಶಗಳು ಒದಗಿ ಬರಲಿವೆ. ಮಷಿನ್ ಲರ್ನಿಂಗ್ (42 ಶೇಕಡಾ), ಪೈಥಾನ್ (40 ಶೇಕಡಾ), AI (36 ಶೇಕಡಾ ), ಕಮ್ಯುನಿಕೇಷನ್​ ಸ್ಕಿಲ್ಸ್​ (23 ಪ್ರತಿಶತ), ನ್ಯಾಚುರಲ್​ ಲಾಂಗ್ವೇಜ್​ ಪ್ರೊಸೆಸಿಂಗ್​ (20 ಪ್ರತಿಶತ), ಟೆನ್ಸರ್ ಫ್ಲೋ (19 ಪ್ರತಿಶತ), ಡೇಟಾ ಸೈನ್ಸ್​ (17 ಪ್ರತಿಶತ), AWS (14 ಪ್ರತಿಶತ), ಡೀಪ್​ ಲರ್ನಿಂಗ್​ (14 ಪ್ರತಿಶತ), ಜಾವಾ (11 ಪ್ರತಿಶತ), ಅಜುರೆ (11 ಪ್ರತಿಶತ), ಇಮೇಜ್ ಪ್ರೊಸೆಸಿಂಗ್ (10 ಪ್ರತಿಶತ), SQL (10 ಪ್ರತಿಶತ), ಪೈಟಾರ್ಚ್ (9 ಪ್ರತಿಶತ), ಅಗೈಲ್ (8 ಪ್ರತಿಶತ) ಕೋರ್ಸ್​ಗಳಿಗೆ ಹೆಚ್ಚಿನ ಬೇಡಿಕೆಗಳಿವೆ.

ಭಾರತದಲ್ಲಿ AI ಮಾರುಕಟ್ಟೆಯ ಮೌಲ್ಯವು 2027 ರ ವೇಳೆಗೆ 17 ಬಿಲಿಯನ್ ಡಾಲರ್‌ಗಳನ್ನು ತಲುಪುತ್ತದೆ ಎಂದು ಅಂದಾಜಿಸಲಾಗಿದೆ. ಇದು ವಾರ್ಷಿಕವಾಗಿ ಸುಮಾರು 25 ರಿಂದ 35 ಪ್ರತಿಶತದಷ್ಟು ಬೆಳವಣಿಗೆಯೊಂದಿಗೆ ಮುನ್ನಡೆಯುತ್ತಿದೆ. ಅಂತಹ ಪ್ರಮುಖ AI ಕೌಶಲ್ಯಗಳನ್ನು ಪಡೆದುಕೊಳ್ಳುವುದರ ಮೇಲೆ ಉದ್ಯೋಗ ಮಾರುಕಟ್ಟೆಯು ಗಮನಹರಿಸಬೇಕು ಎಂದು ವಾಸ್ತವವಾಗಿ ಸೂಚಿಸುತ್ತದೆ. ಮಷಿನ್​ ಲರ್ನಿಂಗ್​ನಂತೆಯೇ.. ನೇಮಕಾತಿ ಮಾಡುವವರು 40 ಪ್ರತಿಶತದಷ್ಟು ಪೈಥಾನ್ ಕೌಶಲ್ಯಗಳನ್ನು ಬಯಸುತ್ತಾರೆ. AI ಕೋರ್ ಕೌಶಲ್ಯಗಳು ಮತ್ತು ಕಮ್ಯುನಿಕೇಷನ್​ ಸ್ಕಿಲ್ಸ್​ ಸಹ ಹೆಚ್ಚಿನ ಬೇಡಿಕೆಯಲ್ಲಿವೆ. ಆದ್ದರಿಂದ ಅವುಗಳನ್ನು ಕಲಿಯುವವರಿಗೆ ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಅವಕಾಶಗಳಿವೆ.

ಓದಿ: ಸಾಮಾಜಿಕ, ಆರ್ಥಿಕ ಪ್ರಗತಿ ಹೆಚ್ಚಿಸಲು AI ತಂತ್ರಜ್ಞಾನ ಬಳಕೆ: ಕೇಂದ್ರ - AI To Boost Economic Progress

Last Updated : 3 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.