ETV Bharat / technology

ನೀವು ಐಫೋನ್ ಪ್ರಿಯರಾ?, ಅವರಿಗಿದೆ ಗುಡ್ ನ್ಯೂಸ್: iPhone 16 Pro, pro Max ವೈಶಿಷ್ಟ್ಯಗಳ್ಯಾವುವು- ಲಾಂಚ್ ಯಾವಾಗ? - IPhone Latest Model Features

ಐಫೋನ್ ಪ್ರಿಯರಿಗೆ ಒಳ್ಳೆಯ ಸುದ್ದಿಯೊಂದು ಬಂದಿದೆ. ಆಪಲ್ ಕಂಪನಿಯು ಐಫೋನ್ 16 ಸರಣಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ ಎಂದು ವರದಿಯಾಗಿದೆ. ಈ ಹೊಸ ಐಫೋನ್ ಹೊಸ ವಿನ್ಯಾಸ ಮತ್ತು ಅತ್ಯುತ್ತಮ ಕ್ಯಾಮೆರಾ ವೈಶಿಷ್ಟ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ ಎಂದೂ ತಿಳಿದು ಬಂದಿದೆ. ಸಂಪೂರ್ಣ ವಿವರಗಳು ನಿಮಗಾಗಿ.

iPhone 16 Pro ಮತ್ತು Pro Max ವೈಶಿಷ್ಟ್ಯಗಳು (ಮೂಲ: ಗೆಟ್ಟಿ ಚಿತ್ರಗಳು)
iPhone 16 Pro ಮತ್ತು Pro Max ವೈಶಿಷ್ಟ್ಯಗಳು (ಮೂಲ: ಗೆಟ್ಟಿ ಚಿತ್ರಗಳು) (iPhone 16 Pro And Pro Max Features (Source : Getty Images))
author img

By ETV Bharat Karnataka Team

Published : May 30, 2024, 10:02 PM IST

iPhone 16 Pro- Pro Max: ಟೆಕ್ ದೈತ್ಯ ಆಪಲ್ ಪ್ರತಿ ವರ್ಷ ಹೊಸ ಐಫೋನ್ ಸರಣಿಯ ಫೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಈ ವರ್ಷವೂ ಐಫೋನ್ 16 ಸರಣಿ ಹೊರ ತರಲು ಸನ್ನದ್ಧವಾಗಿದೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಹೊಸ ಮಾದರಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆಯಂತೆ. ಈ ಐಫೋನ್ 16 ಸರಣಿಯು ಉತ್ತಮ ಕ್ಯಾಮೆರಾ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ ಎಂದು ವರದಿಯಾಗಿದೆ. iPhone 16 Pro ಮತ್ತು iPhone 16 Pro Max ನ ವೈಶಿಷ್ಟ್ಯಗಳೇನು ಎಂಬುದನ್ನು ತಿಳಿದಕೊಳ್ಳೋಣ

ಐಫೋನ್ 16 ಪ್ರೊ ಮ್ಯಾಕ್ಸ್‌ನಲ್ಲಿ ಹೊಸ ಕ್ಯಾಮೆರಾ ಸೋನಿ ಐಎಂಎಕ್ಸ್ 903, ಐಫೋನ್ 16 ಪ್ರೊ ಮ್ಯಾಕ್ಸ್‌ನಲ್ಲಿ ಹೊಸ ಕ್ಯಾಮೆರಾ ಸೆನ್ಸಾರ್‌ನ ಸಾಧ್ಯತೆಯಿದೆ ಎಂದು ಕಂಪನಿಯ ಮೂಲಗಳಿಂದ ತಿಳಿದು ಬಂದಿದೆ. ಈ ಹೊಸ ಸಂವೇದಕವು 48-ಮೆಗಾಪಿಕ್ಸೆಲ್ ರೆಸಲ್ಯೂಶನ್ ನೀಡುತ್ತದೆ ಎನ್ನಲಾಗಿದೆ. ಇದು ಈ ಹಿಂದಿನ ಮಾದರಿಯ iPhone 15 Pro ಗಿಂತ ಹೆಚ್ಚು ಸ್ಪಷ್ಟತೆಯೊಂದಿಗೆ ಫೋಟೋಗಳನ್ನು ತೆಗೆದುಕೊಳ್ಳಬಹುದಂತೆ. ಪ್ರೊ ಮ್ಯಾಕ್ಸ್ 48-ಮೆಗಾಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಹೆಚ್ಚಿನ ರೆಸಲ್ಯೂಶನ್ ಫೋಟೋಗಳನ್ನು ತೆಗೆಯಬಹುದು. ಆದರೆ ಈ ನವೀಕರಣವು iPhone 16 Pro Max ಗೆ ಮಾತ್ರ ಸೀಮಿತವಾಗಿದೆ. ಐಫೋನ್ 16 ಪ್ರೊ 48 ಮೆಗಾಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ ಸೋನಿ IMX803 ಸಂವೇದಕದೊಂದಿಗೆ ಹೊರ ಬರಲಿದೆ ಎಂದು ವರದಿಯಾಗಿದೆ.

ಕ್ಯಾಮೆರಾ ಅಪ್‌ಗ್ರೇಡ್ ಅಲ್ಟ್ರಾ ವೈಡ್ ಕ್ಯಾಮೆರಾವನ್ನು iPhone 16 Pro ಮತ್ತು Pro Max ನಲ್ಲಿ ಅಪ್‌ಗ್ರೇಡ್ ಮಾಡಲಾಗುತ್ತದೆ. ಪ್ರಸ್ತುತ 12 ಮೆಗಾಪಿಕ್ಸೆಲ್ ಸಂವೇದಕಕ್ಕೆ ಬದಲಾಗಿ, ಹೊಸ ಮಾದರಿಗಳು 48 ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿರುವ ಸಾಧ್ಯತೆಯಿದೆ. ಈ ಅಪ್‌ಗ್ರೇಡ್‌ನಿಂದಾಗಿ, ಕಡಿಮೆ - ಬೆಳಕಿನ ಪರಿಸ್ಥಿತಿಗಳಲ್ಲಿಯೂ ಫೋಟೋಗಳು ಸಂಪೂರ್ಣ ಸ್ಪಷ್ಟತೆಯೊಂದಿಗೆ ಬರುತ್ತವೆ. ಚಿಕ್ಕ ಸಂವೇದಕಗಳು ಸಾಮಾನ್ಯವಾಗಿ ಕಡಿಮೆ ಬೆಳಕಿನಲ್ಲಿ ಸ್ಪಷ್ಟ, ಪ್ರಕಾಶಮಾನವಾದ ಫೋಟೋಗಳನ್ನು ಸೆರೆಹಿಡಿಯಲು ಸಾಧ್ಯವಿಲ್ಲ. 48 ಮೆಗಾ ಪಿಕ್ಸೆಲ್ ಸಂವೇದಕವು ಹೆಚ್ಚು ಬೆಳಕನ್ನು ಹೀರಿಕೊಳ್ಳಲು ಪಿಕ್ಸೆಲ್ ಬಿನ್ನಿಂಗ್ ತಂತ್ರಜ್ಞಾನವನ್ನು ಬಳಸುತ್ತದೆ. ಪರಿಣಾಮ ಯಾವುದೇ ಬೆಳಕಿನ ಪರಿಸ್ಥಿತಿಗಳಲ್ಲೂ ಉತ್ತಮ ಸ್ಪಷ್ಟತೆಯೊಂದಿಗೆ ಫೋಟೋಗಳು ಹೊರಬರುತ್ತವೆ.

ಟೆಲಿಫೋಟೋ ಕ್ಯಾಮೆರಾ ಅಪ್‌ಗ್ರೇಡ್ ಆಗುತ್ತಿದೆಯೇ?: 5x ಆಪ್ಟಿಕಲ್ ಜೂಮ್‌ನೊಂದಿಗೆ 12 ಮೆಗಾ ಪಿಕ್ಸೆಲ್ ಸಂವೇದಕದೊಂದಿಗೆ ಐಫೋನ್ 16 ಪ್ರೊನಲ್ಲಿ ಟೆಲಿಫೋಟೋ ಕ್ಯಾಮೆರಾ ಎಂದಿನಂತೆ ಮುಂದುವರಿಯುತ್ತದೆ. ಆದಾಗ್ಯೂ, ಐಫೋನ್ 16 ಪ್ರೊ ನವೀಕರಿಸಿದ ಟೆಲಿಫೋಟೋ ಕ್ಯಾಮೆರಾವನ್ನು ನೀಡಬಹುದು ಎಂದು ತಿಳಿದು ಬಂದಿದೆ.

ವಿಡಿಯೋ ಸೆರೆಹಿಡಿಯಲು ವಿಶೇಷ ಬಟನ್: iPhone 16 Pro ಸರಣಿಯಲ್ಲಿ ವಿಶೇಷ ಬಟನ್​ವೊಂದನ್ನು ನೀಡಲಾಗಿದೆ. ಬಟನ್‌ಗಳ ಬದಲಿಗೆ ಹ್ಯಾಪ್ಟಿಕ್ ಪ್ರತಿಕ್ರಿಯೆಯೊಂದಿಗೆ ಕೆಪ್ಯಾಸಿಟಿವ್ ಬಟನ್‌ಗಳನ್ನು ನೀಡಬಹುದು. ಈ ನೋ - ಬಟನ್ ವಿನ್ಯಾಸವು ನೋಟವನ್ನು ಹೆಚ್ಚಿಸಬಹುದು. ಈ ಬಟನ್‌ಗಳು ಒತ್ತಡವನ್ನು ಪತ್ತೆ ಮಾಡುತ್ತದೆ ಮತ್ತು ಟ್ಯಾಪ್ಟಿಕ್ ಎಂಜಿನ್ ಮೋಟಾರ್‌ಗಳಿಂದ ರಚಿಸಲಾದ ಕಂಪನಗಳ ಮೂಲಕ ನಿಜವಾದ ಬಟನ್ ಒತ್ತಿದ ಅನುಭವವನ್ನು ನೀಡುತ್ತದೆ. ವಿಡಿಯೋ ಸೆರೆಹಿಡಿಯಲು ಮೀಸಲಾದ ಬಟನ್ ಸಹ ಇರುವ ಸಾಧ್ಯತೆಯಿದೆ.

ದೊಡ್ಡ ಡಿಸ್ಪ್ಲೇ: ಐಫೋನ್ 16 ಪ್ರೊ, ಪ್ರೊ ಮ್ಯಾಕ್ಸ್ 6.3 ಇಂಚುಗಳು ಮತ್ತು 6.9 ಇಂಚಿನ ದೊಡ್ಡ ಡಿಸ್ಪ್ಲೇಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಬಹುದು ಎಂದು ಹೇಳಲಾಗುತ್ತಿದೆ. ಪ್ರೊ ಮ್ಯಾಕ್ಸ್ 4,676mAh ಬ್ಯಾಟರಿಯೊಂದಿಗೆ ಹೊರ ಬರಬಹುದು. ಆಪಲ್‌ನ ಸುಧಾರಿತ ವಿರೋಧಿ ಪ್ರತಿಫಲಿತ ಲೇಪನ ತಂತ್ರಜ್ಞಾನವನ್ನು ಚಿತ್ರದ ಗುಣಮಟ್ಟವನ್ನು ಇನ್ನಷ್ಟು ಸುಧಾರಿಸಲು ಬಳಸಬಹುದಾಗಿದೆ.

ಇದನ್ನು ಓದಿ:ಕೋಣೆಯಲ್ಲಿನ ಬಿಸಿ ಹೊರ ಹಾಕಲು ಏನು ಮಾಡಬೇಕು: ಏರ್​ ಕೂಲರ್​ ಬಳಕೆ ಹೀಗಿರಲಿ! - Room Cooler

ಎಲ್ಲೆಂದರಲ್ಲಿ ಸಿಗರೇಟ್ ಸೇದುತ್ತೀರಾ? ಈ ಆ್ಯಪ್ ಮೂಲಕ ಪಕ್ಕದಲ್ಲಿದ್ದವರೇ ದೂರು ಕೊಡ್ತಾರೆ ಹುಷಾರ್! - Stop Tobacco App

ಹೈ-ಎಂಡ್​ ಗೇಮಿಂಗ್​ಗಾಗಿ ಎರಡು ಹೊಸ ಚಿಪ್​ಸೆಟ್​ ಬಿಡುಗಡೆ ಮಾಡಿದ ಮೀಡಿಯಾಟೆಕ್ - Mediatek Launches Chipsets50 MP ಕ್ಯಾಮೆರಾದೊಂದಿಗೆ ಸ್ಯಾಮ್​ಸಂಗ್ Galaxy F 55 ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು ಗೊತ್ತಾ? - Samsung launches Galaxy F55

ETV Bharat Logo

Copyright © 2024 Ushodaya Enterprises Pvt. Ltd., All Rights Reserved.