Googles New Quantum Chip: ತಂತ್ರಜ್ಞಾನ ದೈತ್ಯ ಗೂಗಲ್ ಕ್ವಾಂಟಮ್ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. ಹೊಸ ಕ್ವಾಂಟಮ್ ಚಿಪ್ ಅನಾವರಣಗೊಳಿಸಲಾಗಿದೆ. 'ವಿಲೋ' ಕ್ವಾಂಟಮ್ ಹೆಸರಿನಲ್ಲಿ ತಂದಿರುವ ಈ ಚಿಪ್ ಸಾಮಾನ್ಯ ಕಂಪ್ಯೂಟರ್ಗಳಿಗೆ ಹೋಲಿಸಿದರೆ ಮಿಂಚಿನ ವೇಗದಲ್ಲಿ ಕೆಲಸ ಮಾಡುತ್ತದೆ. ಈ ಮಟ್ಟಿಗೆ ಗೂಗಲ್ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದೆ.
ಕ್ವಾಂಟಮ್ ಚಿಪ್ ಎಂದರೇನು?: ಕ್ವಾಂಟಮ್ ಚಿಪ್ ಎಂಬುದು ಒಂದು ಪ್ರತ್ಯೇಕವಾದ ಕಂಪ್ಯೂಟರ್ ಚಿಪ್. ಇದು ಕ್ವಾಂಟಮ್ ಮೆಕ್ಯಾನಿಸ್ ಸೂತ್ರಗಳನ್ನು ಅನುಸರಿಸಿ ಕೆಲಸ ಮಾಡುತ್ತದೆ. ಸಾಧಾರಣ ಚಿಪ್ಗಿಂತ ಸ್ವಲ್ಪ ಭಿನ್ನವಾಗಿದೆ. ಇದರಲ್ಲಿ ಪ್ರತ್ಯೇಕ ಸಾಮರ್ಥ್ಯದ ಜೊತೆ ಸಾಧಾರಣ ಕಂಪ್ಯೂಟರ್ಗಿಂತ ಹೆಚ್ಚು ವೇಗವಾಗಿ ಕಷ್ಟಕರವಾದ ಸಮಸ್ಯೆಗಳನ್ನು ಪರಿಹರಿಸುತ್ತದೆ.
ಸಾಧಾರಣ ಕಂಪ್ಯೂಟರ್‌ಗಳು ಬೈನರಿ ಭಾಷೆಗಳ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತವೆ. ಅಂದರೆ ಇವು 0,1 ಎಂಬ ಎರಡು ಸಂಕೇತಗಳೊಂದಿಗೆ ಕೆಲಸ ಮಾಡುತ್ತವೆ. ಇದರಲ್ಲಿ 0 ಎಂದರೆ ವಿದ್ಯುತ್ (ಎಲೆಕ್ಟ್ರಾನ್) ಪ್ರವಾಹ ಇಲ್ಲದಿರುವುದು, 1 ಎಂದರೆ ವಿದ್ಯುತ್ ಪ್ರಸಾರ ಇರುವುದು. 0, 1 ಅನ್ನು ಒಂದುಗೂಡಿಸಿ ‘ಬಿಟ್’ ಎಂದು ಕರೆಯುತ್ತಾರೆ. ಈ ಡಬಲ್ ಕೋಡ್‌ನಲ್ಲಿ ಸಂಖ್ಯೆ 1 ಬರೆಯಲು '001' ಎಂದು ಬರೆಯಬೇಕು. ಸಂಖ್ಯೆ 2 ಬರೆಯಲು '0011' ಅಂತಾ ಬಳಸಬೇಕು.
ಕಂಪ್ಯೂಟರ್‌ನಲ್ಲಿರುವ ಟ್ರಾನ್ಸಿಸ್ಟರ್‌ಗಳು ಆಫ್ ಆಗಿರುವಾಗ 0 ಮತ್ತು ಆನ್ ಆಗಿರುವಾಗ 1 ಸಂಕೇತವನ್ನು ಪಡೆಯುತ್ತವೆ. ಇಂದಿನ ಕಂಪ್ಯೂಟರ್‌ಗಳು ಈ ಬೈನರಿ ಕೋಡ್‌ನಲ್ಲಿ ಮಾಹಿತಿ ಸಂಗ್ರಹಿಸುತ್ತವೆ ಮತ್ತು ಪ್ರಕ್ರಿಯೆಗೊಳಿಸುತ್ತವೆ. ಆದರೆ, ಕ್ವಾಂಟಮ್ ಕಂಪ್ಯೂಟರ್‌ಗಳು ಕ್ವಿಟ್‌ಗಳನ್ನು ಬಳಸುತ್ತವೆ. ಒಂದು ಕ್ವಿಟ್ ಒಂದೇ ಸಮಯದಲ್ಲಿ 0 ಮತ್ತು 1 ಆಗಿದೆ. ಅಂದರೆ ಅದು ಒಂದೇ ಸಮಯದಲ್ಲಿ ಆನ್ ಮತ್ತು ಆಫ್ ಆಗಿರಬಹುದು. ಇದನ್ನು ಸೂಪರ್‌ಪೊಸಿಷನ್ ಎಂದು ಕರೆಯಲಾಗುತ್ತದೆ.
ಹೆಚ್ಚಿನ ಮಾಹಿತಿಯನ್ನು ತ್ವರಿತವಾಗಿ ರವಾನೆ ಮಾಡಬಹುದು: ಕ್ವಾಂಟಮ್ ಕಂಪ್ಯೂಟರ್ ಈ ಸೂಪರ್‌ಪೊಸಿಷನ್‌ನ ಸಹಾಯದಿಂದ ಹೆಚ್ಚಿನ ಪ್ರಮಾಣದ ಮಾಹಿತಿಯನ್ನು ತ್ವರಿತವಾಗಿ ಪ್ರಕ್ರಿಯೆಗೊಳಿಸಬಹುದು. ಇದು ಭವಿಷ್ಯದಲ್ಲಿ ಹಲವು ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಲಿದೆ. ಕ್ವಿಟ್‌ಗಳು ಸಾಮಾನ್ಯ ಕಂಪ್ಯೂಟರ್‌ಗಳಿಗಿಂತ ವೇಗವಾಗಿ ಲೆಕ್ಕಾಚಾರಗಳನ್ನು ಪೂರ್ಣಗೊಳಿಸಲು ಅನುವು ಮಾಡಿಕೊಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಅಷ್ಟೇ ಅಲ್ಲ ಗೂಗಲ್ ತನ್ನ ಹೊಸ 'ವಿಲೋ' ಕ್ವಾಂಟಮ್ ಚಿಪ್‌ನಲ್ಲಿ 105 ಕ್ವಿಟ್‌ಗಳನ್ನು ಸಂಯೋಜಿಸಿದೆ.
ಈ ಚಿಪ್ ಯಾವುದೇ ಸಂಕೀರ್ಣವಾದ ಅಂಕಿ - ಅಂಶಗಳ ಸಮಸ್ಯೆಯನ್ನು ಕೇವಲ ಐದು ನಿಮಿಷಗಳಲ್ಲಿ ಪರಿಹರಿಸುತ್ತದೆ. ವಿಶ್ವದ ಅತ್ಯಂತ ವೇಗದ ಸೂಪರ್‌ಕಂಪ್ಯೂಟರ್‌ಗಳು ಅದೇ ಕೆಲಸ ಮಾಡಲು 10 ಸೆಪ್ಟಿಲಿಯನ್ ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಗೂಗಲ್ ಹೇಳಿದೆ. 10 ಸೆಪ್ಟಿಲಿಯನ್ ವರ್ಷಗಳು ಎಂದರೆ '1' ನಂತರ '25' ಸೊನ್ನೆಗಳು ಇರುವ ಸಂಖ್ಯೆಗಳು ಎಂದರ್ಥ. ಅಂದರೆ, ವಿಶ್ವವು ರೂಪುಗೊಂಡ ನಂತರದ ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಗೂಗಲ್ ಹೇಳಿದೆ.
ಬಿಲಿಯನ್ ಎಂದರೆ ಎಷ್ಟು?: ಬ್ರಹ್ಮಾಂಡವು 13.8 ಶತಕೋಟಿ ವರ್ಷಗಳ ಹಿಂದೆ ಪ್ರಾರಂಭವಾಯಿತು. ಬಿಲಿಯನ್ ಎಂದರೆ '9' ಸೊನ್ನೆಗಳ ಪಕ್ಕದಲ್ಲಿ '1' ಎಂದರ್ಥ. ಅದರ ಆರಂಭಿಕ ವರ್ಷಗಳಲ್ಲಿ ಇದು ಈಗಿನದ್ದಕ್ಕಿಂತ ಸಂಪೂರ್ಣವಾಗಿ ವಿಭಿನ್ನವಾಗಿ ಕಾಣುತ್ತದೆ. ಇಡೀ ವಿಶ್ವವು ಸುಮಾರು 400,000 ವರ್ಷಗಳವರೆಗೆ ಅಪಾರದರ್ಶಕವಾಗಿತ್ತು. ಅಂದರೆ ಆ ಸಮಯದಲ್ಲಿ ನಡೆದ ಯಾವುದನ್ನೂ ನಾವು ನೇರವಾಗಿ ಗಮನಿಸುವುದಿಲ್ಲ.
ಅಭಿವೃದ್ಧಿಪಡಿಸಿರುವುದು ಎಲ್ಲಿ?: ಗೂಗಲ್ ಸಿಇಒ ಸುಂದರ್ ಪಿಚೈ ಅವರು ಈ ವಿಲೋ ಕ್ವಾಂಟಮ್ ಚಿಪ್ ಅನ್ನು 'ಎಕ್ಸ್' ವೇದಿಕೆಯಾಗಿ ಅನಾವರಣಗೊಳಿಸಿದರು. ಕ್ಯಾಲಿಫೋರ್ನಿಯಾದ ಸಾಂಟಾ ಬಾರ್ಬರಾದಲ್ಲಿರುವ ಕಂಪನಿಯ ಕ್ವಾಂಟಮ್ ಲ್ಯಾಬ್‌ನಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಗೂಗಲ್ ಹೇಳಿದೆ. ಇದಕ್ಕೆ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಪ್ರತಿಕ್ರಿಯಿಸಿದ್ದಾರೆ. ಇದು ನಿಜಕ್ಕೂ ಅದ್ಭುತ ಆವಿಷ್ಕಾರ ಎಂದು ಶ್ಲಾಘಿಸಿದ್ದಾರೆ.
ಓದಿ: ಐಪಿಎಲ್, ಕೊರಿಯನ್ ಡ್ರಾಮಾ, ಮೊಯೊ ಮೊಯೊ: ಈ ಬಾರಿ ಗೂಗಲ್ನಲ್ಲಿ ಅತೀ ಸರ್ಚ್ ಆದ ವಿಷಯಗಳು ಯಾವುವು?