ETV Bharat / technology

ನಾಡಿಗೆ ಆನೆ ಸೇರಿದಂತೆ ಇತರೆ ಪ್ರಾಣಿಗಳ ಪ್ರವೇಶ: ಎಐ ತಂತ್ರಜ್ಞಾನದ ಮೂಲಕ ಮತ್ತೆ ಕಾಡಿಗೆ ಕಳುಹಿಸುವುದು ಹೇಗೆ? - AI For Animal Warning

AI For Animal Warning: 25 ಲಕ್ಷ ಫೋಟೋಗಳಿರುವ ಎಐ ತಂತ್ರಜ್ಞಾನ ಆನೆ ಸೇರಿದಂತೆ ಕಾಡು ಪ್ರಾಣಿಗಳು ನಗರಕ್ಕೆ ಬರದಂತೆ ತಡೆಯುತ್ತಿದೆ. ವನ್ಯಜೀವಿಗಳನ್ನು ಹಿಮ್ಮೆಟ್ಟಿಸಲು AI ತಂತ್ರಜ್ಞಾನವನ್ನು ಹೇಗೆ ಅಭಿವೃದ್ಧಿಪಡಿಸಲಾಯಿತು? ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಯೋಣಾ ಬನ್ನಿ..

ANIMALS ENTRY TO VILLAGE  AI TECHNOLOGY  ANIMAL WARNING BY AI  AI CAMERA
ಎಐ ತಂತ್ರಜ್ಞಾನದ ಚಿತ್ರಗಳು (ETV Bharat)
author img

By ETV Bharat Karnataka Team

Published : Sep 7, 2024, 1:07 PM IST

AI For Animal Warning: ಕರ್ನಾಟಕ, ತಮಿಳುನಾಡು, ರಾಜಸ್ಥಾನ, ಉತ್ತರಾಖಂಡ್​ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಾನವ ಮತ್ತು ಪ್ರಾಣಿಗಳ ಸಂಘರ್ಷಗಳ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಅದರಲ್ಲೂ ಆನೆ, ಚಿರತೆ ಮತ್ತು ಹುಲಿಯ ದಾಳಿಗೆ ಅಸಾಯಕ ಮನುಷ್ಯರು ಪ್ರಾಣ ಕಳೆದುಕೊಳ್ಳುತ್ತಿರುವ ವರದಿಗಳು ಕೂಡಾ ದಿನೇ ದಿನೇ ಹೆಚ್ಚಳವಾಗುತ್ತಿದೆ.

ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಈ ಸಂಘರ್ಷಗಳು ಪರಸ್ಪರ ಕ್ರಿಯೆಯ ಆಧಾರಿತವಾಗಿದೆ. ಇದು ಜನರು ಅಥವಾ ಅವರ ಸಂಪನ್ಮೂಲ ಅಥವಾ ಕಾಡು ಪ್ರಾಣಿಗಳು ಅಥವಾ ಅವುಗಳ ಆವಾಸಸ್ಥಾನಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆಹಾರ, ನೀರು ಅರಸಿ ಅಲೆದಾಡುವ ಕಾಡುಪ್ರಾಣಿಗಳು ಅರಣ್ಯ ಪ್ರದೇಶದ ಸಮೀಪದ ಗ್ರಾಮಗಳಿಗೆ ನುಗ್ಗಿ ಕೃಷಿ ಉತ್ಪನ್ನಗಳಿಗೆ ಹಾನಿ ಮಾಡುತ್ತಿವೆ. ಇದರಿಂದ ಕೆಲವೊಮ್ಮೆ ಮಾನವ-ಪ್ರಾಣಿ ಸಂಘರ್ಷ ನಡೆದು ಪ್ರಾಣಹಾನಿ ಸಂಭವಿಸುತ್ತಿದೆ.

ANIMALS ENTRY TO VILLAGE  AI TECHNOLOGY  ANIMAL WARNING BY AI  AI CAMERA
ಎಐ ತಂತ್ರಜ್ಞಾನದ ಚಿತ್ರಗಳು (ETV Bharat)

ದೇಶಾದ್ಯಂತ ಹೆಚ್ಚುತ್ತಿರುವ ಈ ಪ್ರಕರಣಗಳನ್ನು ನಿವಾರಿಸುವ ನಿಟ್ಟಿನಲ್ಲಿ ನೀತಿಗಳನ್ನು ರೂಪಿಸುವ ಅಗತ್ಯತೆಯನ್ನು ತಿಳಿಸುತ್ತಿದೆ. ಮಾನವರು - ಪ್ರಾಣಿ ಸಂಘರ್ಷಗಳು ವನ್ಯಜೀವಿ ಅಧಿಕಾರಿಗಳ ಮೇಲೆ ಹೆಚ್ಚಿನ ಹೊರೆಯನ್ನು ಹಾಕಿವೆ. ಹೀಗಾಗಿ ಎಐ ತಂತ್ರಜ್ಞಾನ ಬಳಸಿ ನಾಡಿಗೆ ಪ್ರವೇಶ ನೀಡುವ ಪ್ರಾಣಿಗಳ ಕುರಿತು ಮಾಹಿತಿ ಕಲೆ ಹಾಕುತ್ತದೆ. ಆಗ ಅವುಗಳನ್ನು ಮತ್ತೆ ಕಾಡಿಗೆ ಕಳುಹಿಸಲು ಪ್ರಯತ್ನಿಸಲಾಗುತ್ತಿದೆ.

ಎಐ ತಂತ್ರಜ್ಞಾನದ ಧ್ವನಿವರ್ಧಕ (ETV Bharat)

ಆನೆ ಓಡಿಸಲು ಎಐ ತಂತ್ರಜ್ಞಾನ: ಕಾಡು ಪ್ರಾಣಿಗಳನ್ನು ನಾಡಿಗೆ ಬರಲು ತಡೆಯುವ ನಿಟ್ಟಿನಲ್ಲಿ ಕೊಯಮತ್ತೂರು ಜಿಲ್ಲೆಯ ಕರಾಮಾಟ ಸಮೀಪದ ಕೆಮ್ಮಾರಂಪಳ್ಯಂ ಪಂಚಾಯಿತಿ ಆಡಳಿತ ಸದ್ಯ ಬೆಳೆಯುತ್ತಿರುವ ಆಧುನಿಕ ತಂತ್ರಜ್ಞಾನವಾದ ಕೃತಕ ಬುದ್ಧಿಮತ್ತೆಯನ್ನು ಬಳಸುವಲ್ಲಿ ಯಶಸ್ವಿಯಾಗಿದೆ.

ಇದು ಹೇಗೆ ಕೆಲಸ ಮಾಡುತ್ತದೆ?: ಆನೆಗಳು ಸೇರಿದಂತೆ ಇತರೆ ಕಾಡು ಪ್ರಾಣಿಗಳು ಪಟ್ಟಣಕ್ಕೆ ಪ್ರವೇಶಿಸುವ ಸ್ಥಳವನ್ನು ಪತ್ತೆ ಹಚ್ಚಲು ಕಣ್ಗಾವಲು ಕ್ಯಾಮೆರಾದೊಂದಿಗೆ ಧ್ವನಿವರ್ಧಕವನ್ನು ಅಳವಡಿಸಲಾಗಿದೆ. ಇದು 25 ಲಕ್ಷ ಫೋಟೋಗಳೊಂದಿಗೆ AI ಚಾಲಿತ ಕ್ಯಾಮೆರಾ ಆಗಿದೆ. ಕ್ಯಾಮೆರಾ ಇಟ್ಟಿರುವ ಸ್ಥಳದಿಂದ 500 ಮೀಟರ್ ಒಳಗೆ ಕಾಡುಪ್ರಾಣಿಗಳ ಚಲನವಲನ ಕಂಡುಬಂದರೆ, ಕಣ್ಗಾವಲು ಕ್ಯಾಮೆರಾ ಮೊದಲು ಆ ಕಾಡುಪ್ರಾಣಿಯ ಫೋಟೋ ತೆಗೆದು ಎಐ ಕ್ಯಾಮೆರಾಗೆ ಕಳುಹಿಸುತ್ತದೆ.

ಮುಂದೆ, ಆ ಕಾಡು ಪ್ರಾಣಿ ಆನೆಯೇ? ಅಥವಾ AI ಕಾಡೆಮ್ಮೆ ಸೇರಿದಂತೆ ಇತರೆ ಪ್ರಾಣಿಗಳನ್ನು ಕ್ಯಾಮರಾ ಮೂಲಕ ಪತ್ತೆ ಮಾಡುತ್ತದೆ ಮತ್ತು ಧ್ವನಿವರ್ಧಕದ ಮೂಲಕ ಅಲಾರಂ ಪ್ರತಿಧ್ವನಿಸುತ್ತದೆ. ಇದಕ್ಕಾಗಿ ಆಂಬ್ಯುಲೆನ್ಸ್ ಸೈರನ್ ಸದ್ದು, ಬುಡಕಟ್ಟು ಜನರ ಸದ್ದು, ಜೆಸಿಪಿ ಯಂತ್ರ ಕಾರ್ಯನಿರ್ವಹಿಸುತ್ತಿರುವ ಸದ್ದು ಸೇರಿದಂತೆ ನಾನಾ ಶಬ್ದಗಳನ್ನು ದಾಖಲಿಸಲಾಗಿರುತ್ತದೆ.

ವನ್ಯಜೀವಿಗಳ ಓಡಾಟ ಕಡಿಮೆ: ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿರುವುದರಿಂದ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಕೆಮ್ಮಾರಂಬಳಯಂ ಪಂಚಾಯಿತಿ ಅಧ್ಯಕ್ಷೆ ಮಾತನಾಡಿ, ‘ಆನೆಗಳು ದಿನವೂ ಊರಿಗೆ ನುಗ್ಗುವುದರಿಂದ ಕೃಷಿಯನ್ನೇ ಕೈಬಿಡುವ ಸ್ಥಿತಿ ಉಲ್ಬಣಗೊಂಡಿತ್ತು. ಅಧಿಕಾರಿಗಳ ಸಲಹೆಯಂತೆ ಖಾಸಗಿಯವರ ಸಹಯೋಗದಲ್ಲಿ ಪ್ರಾಯೋಗಿಕವಾಗಿ ಎಐ ತಂತ್ರಜ್ಞಾನ ಬಳಸಿದ್ದೇವೆ. ಎಐ ತಂತ್ರಜ್ಞಾನದಿಂದ ಆನೆಗಳು ಸೇರಿದಂತೆ ಇತರೆ ಪ್ರಾಣಿಗಳು ನಗರಕ್ಕೆ ಪ್ರವೇಶಿಸದಂತೆ ತಡೆಯಲಾಗಿದೆ. ನಮ್ಮ ಪಂಚಾಯಿತಿಯ ಎಲ್ಲಾ ಪ್ರದೇಶಗಳಲ್ಲಿ ಎಐ ತಂತ್ರಜ್ಞಾನ ಜಾರಿಗೊಳಿಸುತ್ತೇವೆ ಎಂದು ಕೆಲ ದಿನಗಳ ಹಿಂದೆ ತಿಳಿಸಿದ್ದರು.

ಸ್ಯಾಟಲೈಟ್ ಮ್ಯಾಪಿಂಗ್: ಈ ತಂತ್ರಜ್ಞಾನ ಅಭಿವೃದ್ಧಿಪಡಿಸಿರುವ ಪಿ ಜೆಂಟ್​ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ್ ಮಾತನಾಡಿ, ತಮಿಳು ಅರಣ್ಯ ಇಲಾಖೆ ಸಹಯೋಗದಲ್ಲಿ ಈ ತಂತ್ರಜ್ಞಾನ ಅಳವಡಿಕೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ತಂತ್ರಜ್ಞಾನ ಬಳಸಿ 25 ಲಕ್ಷ ಫೋಟೋ ಅಪ್​ಲೋಡ್ ಮಾಡಿದ್ದೇವೆ. ಆನೆಗಳು ಸೇರಿದಂತೆ ಯಾವುದೇ ರೀತಿಯ ಪ್ರಾಣಿಗಳು ಕ್ಯಾಮೆರಾದಲ್ಲಿ ಸಿಗ್ನಲ್ ಅನ್ನು ಸ್ವೀಕರಿಸುತ್ತವೆ. ಬಳಿಕ ಧ್ವನಿವರ್ಧಕಗಳ ಮೂಲಕ ಅವುಗಳನ್ನು ಮತ್ತೆ ಕಾಡಿನತ್ತ ತೆರಳುವಂತೆ ಮಾಡುತ್ತವೆ ಎಂದು ಹೇಳಿದರು.

ಶೀಘ್ರದಲ್ಲೇ ನಾವು ಉಪಗ್ರಹ ಮ್ಯಾಪಿಂಗ್ ಮೂಲಕ ಕಾಡು ಪ್ರಾಣಿಗಳ ನಿರಂತರ ಚಲನೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಕಾಡು ಹಂದಿ ಸೇರಿದಂತೆ ಇತರೆ ಪ್ರಾಣಿಗಳನ್ನು ಓಡಿಸಲು ಕಡಿಮೆ ವೆಚ್ಚದ AI ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಯೋಜಿಸುತ್ತೇವೆ. ಇದು ರೈತರಿಗೆ ಉಪಯುಕ್ತವಾಗಿದ್ದು, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲೂ ತಂತ್ರಜ್ಞಾನವನ್ನು ಬಳಸಲು ಯೋಜಿಸಲಾಗಿದೆ ಎಂದು ಅವರು ಹೇಳಿದರು.

ಅರಣ್ಯಾಧಿಕಾರಿ ಮಾತು: ಈ ಕುರಿತು ಕೊಯಮತ್ತೂರು ಜಿಲ್ಲಾ ಅರಣ್ಯಾಧಿಕಾರಿ ಜಯರಾಜ್‌ ಮಾತನಾಡಿ, ಆನೆಗಳು ಊರಿಗೆ ಬರದಂತೆ ತಡೆಯಲು ಇರ್ಲಾರ್‌ಪತಿ ಗ್ರಾಮದಲ್ಲಿ ಪ್ರಾಯೋಗಿಕವಾಗಿ ಎಐ ತಂತ್ರಜ್ಞಾನ ಬಳಸಲಾಗಿದೆ. ಮಧುಕರೈ ಅರಣ್ಯದಲ್ಲಿ ಇದೇ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಈ ಉಪಕ್ರಮವು ಉತ್ತಮ ಫಲಿತಾಂಶವನ್ನು ನೀಡುತ್ತಿರುವುದರಿಂದ ಕೆಲವು ಪ್ರದೇಶಗಳಲ್ಲಿ 10 ಕಿ.ಮೀ. ದೂರದವರೆಗೆ ಈ ತಂತ್ರಜ್ಞಾನವನ್ನು ಬಳಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಓದಿ: ಸುನೀತಾ-ಬುಚ್​ರನ್ನು ಬಾಹ್ಯಾಕಾಶದಲ್ಲೇ ಬಿಟ್ಟು ಭೂಮಿಗೆ ಮರಳಿದ ಬೋಯಿಂಗ್ ಸ್ಟಾರ್​ಲೈನರ್! - Boeing Starliner Back to Earth

ETV Bharat Logo

Copyright © 2024 Ushodaya Enterprises Pvt. Ltd., All Rights Reserved.