ಮುಂಬೈ: ಭಾರತದೊಂದಿಗಿನ ಮತ್ತು ಇಲ್ಲಿನ ಜನರ ಕುರಿತಾದ ಸಂಬಂಧದ ಬಗ್ಗೆ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ. ಬಿಲೆನಿಯೇರ್ ಬಿಲ್ ಗೇಟ್ಸ್ ಮಾತನಾಡಿದ್ದಾರೆ. ಝೆರೋಧಾ ಸಹ ಸಂಸ್ಥಾಪಕರಾಗಿರುವ ನಿಖಿಲ್ ಕಾಮತ್ ಜೊತೆಗಿನ ಪೋಡ್ಕಾಸ್ಟ್ನಲ್ಲಿ ಈ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ನಿಖಿಲ್ ಕಾಮತ್ ಅವರ 'ಪಿಪಲ್ ಬೈ ಡಬ್ಲೂಟಿಎಫ್' ಪೋಡ್ಕಾಸ್ಟ್ನಲ್ಲಿ ಮಾತನಾಡಿರುವ ಗೇಟ್ಸ್, ಭಾರತದೊಂದಿಗಿನ ಸಂಬಂಧ ಅದ್ಭುತ. ನಾವು ಕೆಲವು ಪ್ರತಿಭಾನಿತ್ವ ಐಟಿ ಪದವೀಧರರನ್ನು ಆಯ್ಕೆ ಮಾಡಿ ಸಿಯಾಟಲ್‌ಗೆ ಕರೆ ತಂದೆವು ಎಂದಿದ್ದಾರೆ.
'ಭಾರತದೊಂದಿಗೆ ಅದ್ಬುತ ಸಂಬಂಧವನ್ನು ಹೊಂದಿದ್ದೇನೆ. ಅಲ್ಲಿನ ಪ್ರತಿಭಾನ್ವಿತ ಐಟಿ ಪದವೀಧರರನ್ನು ನಮ್ಮ ಸಂಸ್ಥೆಗೆ ನೇಮಿಸಿಕೊಂಡು, ಅವರನ್ನು ಸಿಯಾಟಲ್‌ಗೆ ಕರೆತಂದಿದ್ದೇವೆ. ಬಳಿಕ ಅವರು ಹಿಂದಿರುಗಿ ನಮ್ಮ ಅಭಿವೃದ್ಧಿ ಕೇಂದ್ರವನ್ನು ಸೃಷ್ಟಿಸಿದರು. ಇದೀಗ ಭಾರತದಲ್ಲಿ ನಾವು ನಾಲ್ಕು ಸ್ಥಳದಲ್ಲಿ ಸುಮಾರು 25 ಸಾವಿರ ಜನರೊಂದಿಗೆ ಸಮರ್ಥವಾಗಿ ಕೆಲಸ ಮಾಡುತ್ತಿದ್ದೇವೆ. ಮೈಕ್ರೋಸಾಫ್ಟ್‌ನಲ್ಲಿ ನಾನು ಕೆಲಸ ಮಾಡಿದಾಗ ಬಹಳಷ್ಟು ಅದ್ಭುತ ವ್ಯಕ್ತಿಗಳು ಭಾರತದಿಂದ ನೇಮಕಗೊಂಡಿದ್ದರು' ಎಂದು ಗೇಟ್ಸ್ ಸ್ಮರಿಸಿಕೊಂಡರು.
ಇದೇ ವೇಳೆ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರನ್ನು ಪ್ರಶಂಸಿದ ಅವರು, ಪ್ರಸ್ತುತ ಸಿಇಒ ಆಗಿ ಉತ್ತಮ ಕೆಲಸ ಮಾಡುತ್ತಿರುವ ಸತ್ಯ ಆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ನನ್ನ ಮೊದಲ ಡಿಜಿಟಲ್ ವೃತ್ತಿಜೀವನದಲ್ಲಿ ಭಾರತದೊಂದಿಗಿನ ಸಂಪರ್ಕವು ವಿನೋದಮಯವಾಗಿತ್ತು. ಕಂಪನಿಯು ಇಷ್ಟೊಂದು ಔನ್ನತ್ಯಕ್ಕೆ ಏರಲು ಸಾಧ್ಯವಾಯಿತು ಅಂತಾನೂ ಹೇಳಿದರು.
ತಮ್ಮ ಸಂಪಾದನೆಯ ಅರ್ಧದಷ್ಟು ಹಣವನ್ನು ಸಮಾಜಮುಖಿ ಕೆಲಸಕ್ಕೆ ವ್ಯಯಮಾಡುವ ಕುರಿತು ಮಾತನಾಡಿದ ಅವರು, ನಾವು ಹೆಚ್ಚು ಹಣವನ್ನು ಖರ್ಚು ಮಾಡುವ ದೇಶ ಎಂದರೆ ಅದು ಭಾರತವಾಗಿದೆ. ಇಲ್ಲಿನ ವರ್ಷಕ್ಕೆ ಸುಮಾರು ಒಂದು ಬಿಲಿಯನ್ ವ್ಯಯ ಮಾಡುತ್ತಿದ್ದೇವೆ. ಇಲ್ಲಿ ಹೆಚ್ಚು ಹೆಚ್ಚು ಪ್ರತಿಭೆಗಳಿವೆ ಆದರೆ, ಅಲ್ಲಿ ಇನ್ನೂ ಬಡತನ ಮತ್ತು ಸವಾಲುಗಳಿವೆ ಎಂದರು.
ನ್ಯಾಯ ವ್ಯವಸ್ಥೆ ಕುರಿತು ಮಾತನಾಡಿದ ಅವರು, ಭಾರತದ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಸಾಕಷ್ಟು ಪ್ರಕರಣಗಳಿವೆ. ತ್ವರಿತ ನ್ಯಾಯವನ್ನು ನೀಡುವಲ್ಲಿ ವಿಳಂಬವಾಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಅವರು. ದೇಶದ ಕಾನೂನು ವ್ಯವಸ್ಥೆಗೆ ಇನ್ನಷ್ಟು ವೇಗ ನೀಡಬೇಕಾಗದ ಅಗತ್ಯ ಇದೆ ಎಂದು ಹೇಳಿದರು.
ಅಮೆರಿಕ ಮತ್ತು ಭಾರತೀಯ ಕಾನೂನು ವ್ಯವಸ್ಥೆಗಳ ನಡುವಿನ ಅಂತರ ಕುರಿತು ಮಾತನಾಡಿದ ಅವರು, ಅಮೆರಿಕದಲ್ಲಿ ಮಾಡಿದ ಕಾನೂನನ್ನು ಇಲ್ಲಿ ಅನ್ವಯಿಸಲು ಸಾಧ್ಯವಿಲ್ಲ. ಕಾನೂನು ವ್ಯವಸ್ಥೆಯಲ್ಲಿ ಪ್ರತಿಯೊಬ್ಬರನ್ನು ನಾಲ್ಕು ಪಟ್ಟು ಹೆಚ್ಚು ಉತ್ಪಾದಕರನ್ನಾಗಿಸಬೇಕಿದೆ. ಆಗ ನ್ಯಾಯ ವಿತರಣೆಯನ್ನು ಬದಲಾಯಿಸಬಹುದು ಎಂದು ಹೇಳಿದರು.
ಇದನ್ನೂ ಓದಿ: ಇದು ಆ್ಯಪಲ್ ಇಂಟಲಿಜೆನ್ಸ್: ಐಫೋನ್ನಲ್ಲೂ ಇನ್ಮುಂದೆ ಕೃತಕ ಬುದ್ಧಿಮತ್ತೆ