ETV Bharat / technology

ಭೂಮಿಯ ಸನಿಹ ವಿಮಾನ ಗಾತ್ರದ 2 ಕ್ಷುದ್ರಗ್ರಹಗಳು: ಕಾದಿದೆಯಾ ಅಪಾಯ? - Asteroids - ASTEROIDS

ವಿಮಾನ ಗಾತ್ರದ 2 ಕ್ಷುದ್ರಗ್ರಹಗಳು ಭೂಮಿಯ ಹತ್ತಿರದಲ್ಲಿ ಹಾದು ಹೋಗಲಿವೆ ಎಂದು ನಾಸಾ ಹೇಳಿದೆ.

ನಾಸಾ
ನಾಸಾ (IANS)
author img

By ETV Bharat Karnataka Team

Published : Aug 2, 2024, 4:58 PM IST

ನವದೆಹಲಿ: ವಿಮಾನ ಗಾತ್ರದಷ್ಟು ದೊಡ್ಡದಾದ ಎರಡು ಕ್ಷುದ್ರಗ್ರಹಗಳು ಭೂಮಿಯ ಹತ್ತಿರದಿಂದ ಹಾದುಹೋಗಲಿವೆ ಎಂದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ನಾಸಾ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (ಜೆಪಿಎಲ್) ಹೇಳಿದೆ. 2024 NS1 ಮತ್ತು 2020 PN1 ಎಂದು ಹೆಸರಿಸಲಾದ ಎರಡು ಕ್ಷುದ್ರಗ್ರಹಗಳು ಶುಕ್ರವಾರ ಭೂಮಿಗೆ ಅತಿ ಹತ್ತಿರದಿಂದ ಹಾದುಹೋಗಲಿವೆ ಎಂದು ಅದು ಎಚ್ಚರಿಕೆ ನೀಡಿದೆ.

ಕ್ಷುದ್ರಗ್ರಹ 2024 ಎನ್ಎಸ್ 1 ಇದು 140 ಅಡಿ ಉದ್ದದ ಬಾಹ್ಯಾಕಾಶ ಬಂಡೆಯಾಗಿದ್ದು, ಇದರ ಗಾತ್ರ ಮತ್ತು ಹೆಚ್ಚಿನ ವೇಗದ ಪಥದಿಂದಾಗಿ ಇದು ಭೂಮಿಗೆ ಅಪಾಯಕಾರಿಯಾಗಬಹುದು ಎಂದು ತಿಳಿಸಲಾಗಿದೆ. ಆದರೂ, ನಾಸಾ ಪ್ರಕಾರ ಇದು ಭೂಮಿಯಿಂದ 12,60,000 ಕಿ.ಮೀ (12 ಲಕ್ಷ ಕಿಮೀ) ದೂರದಲ್ಲಿ ಹಾದುಹೋಗುವುದರಿಂದ ಭೂಮಿಗೆ ಯಾವುದೇ ಅಪಾಯವಿಲ್ಲ.

ಮತ್ತೊಂದೆಡೆ, ಕ್ಷುದ್ರಗ್ರಹ 2020 ಪಿಎನ್ 1 ಇದು ಸುಮಾರು 90 ಅಡಿ ವ್ಯಾಸವಿರುವ ಸಣ್ಣ ಬಾಹ್ಯಾಕಾಶ ಬಂಡೆಯಾಗಿದೆ. ಇದು ಭೂಮಿಯಿಂದ 68,87,000 ಕಿ.ಮೀ ದೂರದಲ್ಲಿ ಹಾದುಹೋಗುವುದರಿಂದ ಇದೂ ಕೂಡ ಭೂಮಿಗೆ ಅಪಾಯ ಉಂಟು ಮಾಡುವ ಸಾಧ್ಯತೆಯಿಲ್ಲ ಎಂದು ನಾಸಾ ಹೇಳಿದೆ.

ನಾಸಾದ ಕ್ಷುದ್ರಗ್ರಹ ವಾಚ್ ಡ್ಯಾಶ್​ಬೋರ್ಡ್​ ಭೂಮಿಯ ಹತ್ತಿರಕ್ಕೆ ಬರುವ ಕ್ಷುದ್ರಗ್ರಹಗಳು ಮತ್ತು ಧೂಮಕೇತುಗಳನ್ನು ಟ್ರ್ಯಾಕ್ ಮಾಡುತ್ತದೆ. ಕ್ಷುದ್ರಗ್ರಹಗಳು ಭೂಮಿಯ ಕಕ್ಷೆಗೆ ಪ್ರವೇಶಿಸುವ ದಿನಾಂಕ, ಅವುಗಳ ಅಂದಾಜು ವ್ಯಾಸ, ಸಾಪೇಕ್ಷ ಗಾತ್ರ ಮತ್ತು ಭೂಮಿಯಿಂದ ಎಷ್ಟು ದೂರದಲ್ಲಿವೆ ಎಂಬುದನ್ನು ಈ ಡ್ಯಾಶ್​ಬೋರ್ಡ್​ ನಿರಂತರವಾಗಿ ಮಾಹಿತಿ ನೀಡುತ್ತಿರುತ್ತದೆ.

ಮುಂದಿನ ದಿನಗಳಲ್ಲಿ ಭೂಮಿಗೆ 7.5 ಮಿಲಿಯನ್ ಕಿಮೀ ಅಥವಾ ಚಂದ್ರನಿಗೆ ಇರುವ ದೂರಕ್ಕಿಂತ 19.5 ಪಟ್ಟು ಹತ್ತಿರದೊಳಗೆ ಬರಲಿರುವ 5 ಕ್ಷುದ್ರ ಗ್ರಹಗಳ ಬಗ್ಗೆ ಈ ಡ್ಯಾಶ್​ಬೋರ್ಡ್ ಮಾಹಿತಿ ನೀಡುತ್ತದೆ. ನಾಸಾ ಪ್ರಕಾರ, ಸುಮಾರು 150 ಮೀಟರ್​ಗಿಂತ ದೊಡ್ಡದಾದ ಕ್ಷುದ್ರಗ್ರಹಗಳನ್ನು ಸಂಭಾವ್ಯ ಅಪಾಯಕಾರಿ ವಸ್ತು ಎಂದು ಕರೆಯಲಾಗುತ್ತದೆ.

ಶುಕ್ರವಾರ ಮಾತ್ರವಲ್ಲದೆ ಇನ್ನೂ ಎರಡು ವಿಮಾನ ಗಾತ್ರದ ಕ್ಷುದ್ರಗ್ರಹಗಳು ಸೋಮವಾರ ಭೂಮಿಗೆ ಹತ್ತಿರದಲ್ಲಿ ಹಾದು ಹೋಗುವ ನಿರೀಕ್ಷೆಯಿದೆ. ಕ್ಷುದ್ರಗ್ರಹ 2017 TU1 ಇದು 70 ಅಡಿ ವ್ಯಾಸ ಹೊಂದಿದ್ದು, 2,400,000 ಕಿ.ಮೀ ದೂರದಲ್ಲಿ ಭೂಮಿಯನ್ನು ದಾಟಲಿದೆ. 99 ಅಡಿ ವ್ಯಾಸ ಹೊಂದಿರುವ ಕ್ಷುದ್ರಗ್ರಹ 2023 HB7 ಇದು 3,490,000 ಕಿ.ಮೀ ದೂರದಲ್ಲಿ ಭೂಮಿಯನ್ನು ದಾಟಲಿದೆ.

ಇದನ್ನೂ ಓದಿ: ಅತ್ಯಂತ ಸುಧಾರಿತ ಸ್ಮಾರ್ಟ್​ಪೋನ್​ ಹಾನರ್ Magic6 Pro 5G ಆಗಸ್ಟ್​ 2ರಂದು ಭಾರತದಲ್ಲಿ ಬಿಡುಗಡೆ - HONOR Magic6 Pro 5G

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.