ETV Bharat / state

'ಝೀರೋ ಶಾಡೋ ಡೇ' ಎಂದರೇನು?, ಎಲ್ಲೆಲ್ಲಿ ಕಂಡುಬರುತ್ತದೆ?: ನೀವು ತಿಳಿದಿರಬೇಕಾದ ಮಾಹಿತಿ - Zero Shadow Day - ZERO SHADOW DAY

ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್​ನಲ್ಲಿ ಝೀರೋ ಶಾಡೋ ಡೇ ಅಂಗವಾಗಿ ಇಂದು ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು.

ಝೀರೋ ಶಾಡೋ ಡೇ ಎಂದರೇನು, ಇದು ಎಲ್ಲೆಲ್ಲಿ ಕಂಡುಬರುತ್ತದೆ ಗೊತ್ತಾ?: ಇಲ್ಲಿದೆ ಮಾಹಿತಿ

author img

By ETV Bharat Karnataka Team

Published : Apr 24, 2024, 9:21 PM IST

ಬೆಂಗಳೂರು: ಝೀರೋ ಶಾಡೋ ಡೇ ಅಂಗವಾಗಿ ಇಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆ್ಯಸ್ಟ್ರೋಫಿಸಿಕ್ಸ್​ನಲ್ಲಿ ವಿಶೇಷ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಲೋಹದ ರಾಡ್​ನ ನೆರಳನ್ನು ಅಳೆಯುವ ಕಾರ್ಯವನ್ನು ಶಾಲಾ, ಕಾಲೇಜು ವಿದ್ಯಾರ್ಥಿಗಳ ಮುಂದೆಯೇ ಕೈಗೊಳ್ಳಲಾಯಿತು. ಐಐಎ ವಿಜ್ಞಾನ ಸಂವಹನ, ಸಾರ್ವಜನಿಕ ಸಂಪರ್ಕ ಮತ್ತು ಶಿಕ್ಷಣ ವಿಭಾಗ ಈ ಕಾರ್ಯಕ್ರಮ ಆಯೋಜಿಸಿತ್ತು.

ಶೂನ್ಯ ನೆರಳು ದಿನ ಎಂದರೇನು?: ಸೂರ್ಯ ನೇರವಾಗಿ ವ್ಯಕ್ತಿಯ ತಲೆಯ ಮೇಲಿರುವಾಗ ಲಂಬವಾದ ವಸ್ತುವಿನ ನೆರಳು ಅದರಡಿಯಲ್ಲಿ ಬೀಳುತ್ತದೆ. ಆದ್ದರಿಂದ ಮಧ್ಯಾಹ್ನದ ವೇಳೆ ಯಾವುದೇ ನೆರಳು ಕಾಣಿಸುವುದಿಲ್ಲ. ಹಾಗಾಗಿ ಇದನ್ನು 'ಶೂನ್ಯ ನೆರಳು ದಿನ' ಎಂದು ಕರೆಯಲಾಗುತ್ತದೆ.

ಈ ವಿದ್ಯಮಾನವನ್ನು ವೀಕ್ಷಿಸಲು ಐಐಎ ಸಾರ್ವಜನಿಕರನ್ನು ಆಹ್ವಾನಿಸಿತ್ತು. ಸುರಾನಾ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ 60ಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರತಿ ಕೆಲವು ನಿಮಿಷಗಳಿಗೊಮ್ಮೆ ನೆರಳನ್ನು ಗುರುತಿಸಲು ನಾಲ್ಕು ಗ್ನೋಮನ್‌ಗಳನ್ನು (ಭಾರತೀಯ ಖಗೋಳಶಾಸ್ತ್ರದಲ್ಲಿ ಶಂಕು ಎಂದು ಕರೆಯಲಾಗುವ ನೆಲದ ಮೇಲಿನ ಲಂಬ ಕೋಲುಗಳು) ಸಿದ್ಧವಾಗಿ ಇರಿಸಲಾಗಿತ್ತು. ಇದರ ಜೊತೆಗೆ, ಸಂಸ್ಥೆ ಏರ್ಪಡಿಸಿದ ಪ್ರದರ್ಶನಗಳು ಕೂಡ ಗಮನ ಸೆಳೆದವು.

'ಈಟಿವಿ ಭಾರತ್​' ಜೊತೆಗೆ ಮಾತನಾಡಿದ ಇಂಡಿಯನ್ ಇನ್​ಸ್ಟಿಟ್ಯೂಟ್​ ಆಫ್ ಆಸ್ಟ್ರೋ ಫಿಸಿಕ್ಸ್‌ ಜೌಟ್​ರೀಚ್​ ಡಿಪಾರ್ಟ್​ಮೆಂಟ್​ನ ಅಸೋಸಿಯೇಟ್ ವಿಕ್ರಾಂತ್, "ಝೀರೋ ಶಾಡೋ ಕೇವಲ ಕರ್ಕಾಟಕ ಸಂಕ್ರಾಂತಿ (ಟ್ರಾಪಿಕ್​ ಆಫ್ ಕ್ಯಾನ್ಸರ್) ಮತ್ತು ಮಕರ ಸಂಕ್ರಾತಿ (ಟ್ರಾಪಿಕ್​ ಆಫ್ ಕ್ಯಾಪ್ರಿಕಾರ್ನ್) ರೇಖೆಗಳ ನಡುವಿನ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತದೆ. ಬೆಂಗಳೂರು ಮತ್ತು ಅದರ ಅನುಸಾರ 13 ಡಿಗ್ರಿ ಉತ್ತರ ಅಕ್ಷಾಂಶದಲ್ಲಿ ಬರುವ ಚೆನ್ನೈ, ಮಂಗಳೂರು ಸೇರಿದಂತೆ ಹಲವು ಊರುಗಳಲ್ಲಿ ಝೀರೋ ಶಾಡೋ ಡೇ ಕಂಡುಬಂದಿದೆ. ಕೇರಳ ರಾಜ್ಯದಿಂದ ಮಧ್ಯಪ್ರದೇಶದ ಭೂಪಾಲ್‌ವರೆಗೂ ಮಾತ್ರ ಈ ವಿಶೇಷ ದಿನ ಕಂಡು ಬರುತ್ತದೆ" ಎಂದರು.

"ಕರ್ಕಾಟಕ ಸಂಕ್ರಾಂತಿ ರೇಖೆಯ ಮೇಲಿನ ಭಾಗದಲ್ಲಿರುವ ದೆಹಲಿ ಸೇರಿದಂತೆ ಉತ್ತರ ಭಾಗದಲ್ಲಿ ಕಂಡುಬರುವುದಿಲ್ಲ. ಅರ್ಜೆಂಟೀನಾ, ಆಸ್ಟ್ರೇಲಿಯಾ, ದಕ್ಷಿಣ ಭಾಗದ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ದೇಶಗಳಲ್ಲಿ ಕೂಡ ಝೀರೋ ಶಾಡೋ ಕಂಡು ಬರುವುದಿಲ್ಲ. ಇವತ್ತಿನ ದಿನ ಸೂರ್ಯನ ಕಿರಣ ಸರಿಯಾಗಿ ನೆತ್ತಿಯ ಮೇಲೆ 12:7 ನಿಮಿಷಕ್ಕೆ ಬಂದಿತ್ತು. ಭೂಮಿ 23.5 ಡಿಗ್ರಿ ವಾಲಿಕೊಂಡಿದೆ, ಈ ಕಾರಣದಿಂದಲೇ ಸೂರ್ಯ ತಲೆಯ ಮೇಲೆ ಬರುತ್ತಾನೆ" ಎಂದು ಅವರು ಮಾಹಿತಿ ನೀಡಿದರು.

ಐಐಎ ನಿರ್ದೇಶಕಿ ಅನ್ನಪೂರ್ಣಿ ಸುಬ್ರಮಣ್ಯಂ ಮಾತನಾಡಿ, "ವಿದ್ಯಾರ್ಥಿಗಳು ಸೂರ್ಯ ಮತ್ತು ಭೂಮಿಯ ಚಲನೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಸರಳ ಸಾಧನಗಳನ್ನು ಬಳಸಿಕೊಂಡು ಖಗೋಳ ಮಾಪನಗಳನ್ನು ಅಳೆಯಲು ಇದು ಅತ್ಯುತ್ತಮ ಸಂದರ್ಭ" ಎಂದು ಹೇಳಿದರು.

ಐಐಎ ವಿಜ್ಞಾನಿ ಮಂಜುನಾಥ್ ಹೆಗಡೆ ಮಾತನಾಡಿ, "ಏಪ್ರಿಲ್ 16ರಂದು ಶೂನ್ಯ ನೆರಳಿನ ದಿನವನ್ನು ಐಐಎ ವತಿಯಿಂದ ಆಯೋಜಿಸಿ, ವೀಕ್ಷಣೆಗೆ ಅವಕಾಶವನ್ನು ನೀಡಲಾಗಿತ್ತು. ಮೇ 9ರಂದು ಹೈದರಾಬಾದ್‌ನಲ್ಲಿ, ಮೇ 15ರಂದು ಮುಂಬೈ, ಜೂನ್ 13ರಂದು ಭೋಪಾಲ್‌ನಲ್ಲಿ ಝೀರೋ ಶಾಡೋ ಡೇ ಗೋಚರಿಸಲಿದೆ. ಭೋಪಾಲ್ ಮೇಲಿನ ಭಾಗದಲ್ಲಿ ಝೀರೋ ಶಾಡೋ ಡೇ ನಡೆಯುವುದಿಲ್ಲ. ಜೂನ್ 21ರಂದು ಸಮ್ಮರ್ ಸೋಲ್ಸ್ಟೈಸ್(ವರ್ಷದ ಅತಿ ದೊಡ್ಡ ದಿನ) ನಮ್ಮಲ್ಲಿ ಆಚರಿಸಲಾಗುತ್ತದೆ. ಈ ದಿನ 23.5 ಡಿಗ್ರಿ ಕೋನದಲ್ಲಿ ಸೂರ್ಯ ಗೋಚರಿಸಲಿದ್ದಾನೆ. ಅಂದು ವರ್ಷದಲ್ಲೇ ಅತಿ ದೊಡ್ಡ ದಿನವಾಗಿರಲಿದೆ" ಎಂದು ತಿಳಿಸಿದರು.

ಇದನ್ನೂ ಓದಿ: ಬೆಂಗಳೂರು: ನೆಹರು ತಾರಾಲಯದಲ್ಲಿ 'ಝೀರೋ ಶಾಡೋ ಡೇ' ವಿಶೇಷ ಪ್ರದರ್ಶನ - Zero Shadow Day

ETV Bharat Logo

Copyright © 2025 Ushodaya Enterprises Pvt. Ltd., All Rights Reserved.