ETV Bharat / state

ಚಾಮರಾಜನಗರ: ಅನೈತಿಕ ಸಂಬಂಧಕ್ಕಾಗಿ ಪೀಡನೆ, ಅತ್ತಿಗೆ ಒಪ್ಪದಿದ್ದಕ್ಕೆ ಅಣ್ಣನ ಕೊಲೆ - CHAMARAJANAGAR CRIME

ಅನೈತಿಕ ಸಂಬಂಧಕ್ಕೆ ಅತ್ತಿಗೆ ಒಪ್ಪದಿದ್ದಕ್ಕೆ ಸ್ವಂತ ಅಣ್ಣನನ್ನೇ ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ತಮ್ಮನಿಂದ ಅಣ್ಣನ ಕೊಲೆ
ತಮ್ಮನಿಂದ ಅಣ್ಣನ ಕೊಲೆ (ETV Bharat)
author img

By ETV Bharat Karnataka Team

Published : Jun 2, 2024, 12:45 PM IST

ಚಾಮರಾಜನಗರ: ಅನೈತಿಕ ಸಂಬಂಧದ ವಿಚಾರಕ್ಕೆ ಗಲಾಟೆ ನಡೆದು ಒಡಹುಟ್ಟಿದ ಅಣ್ಣನನ್ನೇ ತಮ್ಮ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ‌ ಗ್ರಾಮವೊಂದರಲ್ಲಿ ನಡೆದಿದೆ. ಕುಮಾರ್​ ತನ್ನ 45 ವರ್ಷದ ಅಣ್ಣನನ್ನು ಕೊಲೆ ಮಾಡಿರುವ ಆರೋಪಿ.

ಅತ್ತಿಗೆಗೆ ಮೈದುನ ಕುಮಾರ್ ನಿರಂತರವಾಗಿ ಅನೈತಿಕ ಸಂಬಂಧ ಇಟ್ಟುಕೊಳ್ಳುವಂತೆ ಪೀಡಿಸುತ್ತಿದ್ದನಂತೆ, ಇದೇ ವಿಚಾರಕ್ಕೆ ಅಣ್ಣ-ತಮ್ಮನ ನಡುವೆ ಗಲಾಟೆ ಆಗಿ ಬೇರೆ ವಾಸವಾಗಿದ್ದರು. ಶನಿವಾರ ತಡರಾತ್ರಿ ಅಣ್ಣನ ಮನೆಗೆ ಬಂದ ಕುಮಾರ್, ನನ್ನ ಜೊತೆ ಸಂಬಂಧ ಇಟ್ಟುಕೊಳ್ಳದೇ ಬೇರೆಯವರ ಜೊತೆ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಜಗಳ ತೆಗೆದಿದ್ದಾನೆ. ಅಲ್ಲದೆ ತನಗೆ ಬುದ್ಧಿವಾದದ ಮಾತುಗಳನ್ನು ಹೇಳುತ್ತಿಯಾ ಎಂದು ಕುಮಾರ್​ ಚಾಕುವಿನಿಂದ ಇರಿದು ಅಣ್ಣನನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಡ್ಲುಪೇಟೆ ಠಾಣೆ ಪೊಲೀಸರು ಆರೋಪಿ ಕುಮಾರನನ್ನು ಬಂಧಿಸಿದ್ದಾರೆ. ಅವರ ಅಣ್ಣನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಮೃತನ ಪತ್ನಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ಮರಗಸಿ ಮಾಡುವ ವೇಳೆ ವಿದ್ಯುತ್ ತಂತಿ ತಾಗಿ ಮರದಲ್ಲೇ ಕಾರ್ಮಿಕ ಸಾವು - Laborer died in tree

ETV Bharat Logo

Copyright © 2024 Ushodaya Enterprises Pvt. Ltd., All Rights Reserved.