ETV Bharat / state

ಬೆಳಗಾವಿ: ಬರ್ತ್‌ಡೇ ಪಾರ್ಟಿಗೆ ಹೋಗಿದ್ದ ಯುವಕನ ಬರ್ಬರ ಹತ್ಯೆ - Young Man Murder

ಬೆಳಗಾವಿಯ ನುಗ್ಗಾನಟ್ಟಿಯಲ್ಲಿ ದುಷ್ಕರ್ಮಿಗಳು ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

YOUNG MAN MURDER
ಬಸವರಾಜ ಮುದ್ದಣ್ಣವರ (23) (ETV Bharat)
author img

By ETV Bharat Karnataka Team

Published : Jun 5, 2024, 3:12 PM IST

ಬೆಳಗಾವಿ: ಸ್ನೇಹಿತನ ಬರ್ತ್‌ಡೇ ಪಾರ್ಟಿಗೆ ತೆರಳಿದ್ದ ಯುವಕನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಯರಗಟ್ಟಿ ತಾಲೂಕಿನ ನುಗ್ಗಾನಟ್ಟಿಯಲ್ಲಿ ಕಳೆದ ರಾತ್ರಿ ನಡೆದಿದೆ. ಬಸವರಾಜ ಮುದ್ದಣ್ಣವರ(23) ಕೊಲೆಯಾದ ವ್ಯಕ್ತಿ.

ಎಂಎಸ್‌ಡಬ್ಲ್ಯು ವ್ಯಾಸಂಗ ಮಾಡುತ್ತಿದ್ದ ಬಸವರಾಜ, ನಿನ್ನೆ ರಾತ್ರಿ ಸ್ನೇಹಿತನ ಬರ್ತ್‌ಡೇ ಪಾರ್ಟಿಗೆ ಹೋಗಿದ್ದ. ಈ ವೇಳೆ ಘಟನೆ ನಡೆದಿದೆ. ಹೊಟ್ಟೆ, ಬೆನ್ನಿಗೆ ಚಾಕುವಿನಿಂದ ತೀವ್ರವಾಗಿ ಹಲ್ಲೆ ಮಾಡಲಾಗಿದೆ. ಗಾಯಾಳು ಯುವಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

ಮಗ ಕಾಲೇಜಿನಲ್ಲಿ ಚಿನ್ನದ ಪದಕ ಪಡೆದಿದ್ದ: ಮಗನ ಹತ್ಯೆ ಮಾಡಿದವರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಮೃತ ಯುವಕನ ತಾಯಿ ಒತ್ತಾಯಿಸಿದ್ದಾರೆ. "ನನ್ನ ಮಗ ಯಾರ ತಂಟೆಗೂ ಹೋದವನಲ್ಲ. ಕಾಲೇಜಿನಲ್ಲಿ ಚಿನ್ನದ ಪದಕ ಪಡೆದಿದ್ದ. ಬರ್ತ್‌ಡೇ ಪಾರ್ಟಿಗೆ ಹೋಗುತ್ತಾನೆ ಎಂದಿದ್ದರೆ ನಾವು ಕಳಿಸುತ್ತಿರಲಿಲ್ಲ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು" ಎಂದು ಹೇಳುತ್ತಾ ಅವರು ಕಣ್ಣೀರಿಟ್ಟರು.

ಇದನ್ನೂ ಓದಿ: ಹಾಸನದಲ್ಲಿ ಬೆಳ್ಳಂಬೆಳಗ್ಗೆ ಹರಿದ ನೆತ್ತರು: ನಟೋರಿಯಸ್ ರೌಡಿ ಚೈಲ್ಡ್ ರವಿ ಹತ್ಯೆ - Rowdy Murder

ETV Bharat Logo

Copyright © 2024 Ushodaya Enterprises Pvt. Ltd., All Rights Reserved.