ETV Bharat / state

ಕ್ಷಯ ರೋಗದ ಲಕ್ಷಣಗಳೇನು? ಇದನ್ನು ತಡೆಗಟ್ಟುವುದು ಹೇಗೆ : ವಿಶ್ವ ಕ್ಷಯ ದಿನದ ನಿಮಿತ್ತ ವಿಶೇಷ ಮಾಹಿತಿ - doctor suggestions for TB

ಕ್ಷಯ ರೋಗದ ಲಕ್ಷಣಗಳೇನು? ಇದನ್ನು ಹೇಗೆ ತಡೆಗಟ್ಟಬಹುದು? ಎಂಬುದರ ಬಗ್ಗೆ ವೈದ್ಯರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ವಿಶ್ವ ಕ್ಷಯ ದಿನದ ಅಂಗವಾಗಿ ಈ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

SYMPTOMS OF TUBERCULOSIS  PREVENTED OF TUBERCULOSIS  DOCTOR SUGGESTIONS  WORLD TUBERCULOSIS DAY
ವಿಶ್ವ ಕ್ಷಯ ದಿನದಂಗವಾಗಿ ವಿಶೇಷ ಮಾಹಿತಿ
author img

By ETV Bharat Karnataka Team

Published : Mar 24, 2024, 5:59 AM IST

ಡಾ. ಬದ್ರುದ್ದೀನ್ ಎಮ್.ಎನ್. ಸಲಹೆಗಳು..

ಮಂಗಳೂರು: ಪ್ರತೀ ವರ್ಷದ ಮಾರ್ಚ್ 24 ರಂದು ವಿಶ್ವ ಕ್ಷಯರೋಗ ದಿನವಾಗಿ ಆಚರಿಸಲಾಗುತ್ತಿದೆ. 1882ನೇ ಮಾರ್ಚ್ 24 ರಂದು ವೈದ್ಯಕೀಯ ವಿಜ್ಞಾನಿ ರಾಬರ್ಟ್ ಕಾಕ್ ಕ್ಷಯರೋಗಕ್ಕೆ ಕಾರಣವಾದ ಮೈಕೋಬ್ಯಾಕ್ಟೀರಿಯಂ ಟ್ಯುಬರ್ಕ್ಯುಲೋಸಿಸ್ ಎಂಬ ಸೂಕ್ಷ್ಮಾಣುವನ್ನು ಪತ್ತೆ ಮಾಡಿದರು. ನಂತರ ಮಾ. 24 ರಂದು ವಿಶ್ವ ಕ್ಷಯ ರೋಗ ದಿನವಾಗಿ ಆಚರಿಸಲಾಗುತ್ತಿದೆ.
ಮಾನವನ ದೇಹದಲ್ಲಿ ಸವಾರಿ ಮಾಡುವ ಕ್ಷಯರೋಗವು ಸಾಂಕ್ರಾಮಿಕ ರೋಗವಾಗಿದ್ದು, ಗುಣಪಡಿಸಬಹುದಾದ ಖಾಯಿಲೆ ಆಗಿದೆ. ಆದರೆ ಈ ಖಾಯಿಲೆ ಮನುಷ್ಯನ ಸಹಜಜೀವನಕ್ಕೆ ತೋದರೆಯನ್ನುಂಟು ಮಾಡುತ್ತದೆ. ವಿಶ್ವ ಕ್ಷಯ ದಿನದ ಅಂಗವಾಗಿ ಈ ಖಾಯಿಲೆಯ ಬಗ್ಗೆ ಮಾಹಿತಿಯನ್ನು ತಿಳಿಯೋಣ.

  • ಕ್ಷಯ ರೋಗದ ಲಕ್ಷಣಗಳೇನು?:
  1. ಎರಡು ವಾರ ಅಥವಾ ಅದಕ್ಕಿಂತ ಮೇಲ್ಪಟ್ಟು ಸತತವಾದ ಕೆಮ್ಮು
  2. ಜ್ವರ, ಅದರಲ್ಲೂ ಸಂಜೆ ವೇಳೆ ಹೆಚ್ಚಾಗುವುದು ಹಾಗೂ ರಾತ್ರಿ ವೇಳೆ ಬೆವರುವುದು
  3. ಎದೆಯಲ್ಲಿ ನೋವು, ತೂಕ ಕಡಿಮೆಯಾಗುವುದು, ಹಸಿವಾಗದಿರುವುದು
  4. ಕಫದಲ್ಲಿ ರಕ್ತ ಬೀಳುವುದು
  • ಕ್ಷಯ ರೋಗ ಹೇಗೆ ಹರಡುತ್ತದೆ?:
  1. ಶ್ವಾಸಕೋಶದ ಕ್ಷಯ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ
  2. ಚಿಕಿತ್ಸೆ ಪಡೆಯದ ಕಫದಲ್ಲಿ ಕ್ರಿಮಿಗಳುಳ್ಳ ಕ್ಷಯ ರೋಗಿಯು ವರ್ಷದಲ್ಲಿ 10 ರಿಂದ 15 ಜನಕ್ಕೆ ಈ ಸೋಂಕು ಹರಡುತ್ತಾರೆ
  3. ಹೆಚ್​ಐವಿ ಸೋಂಕು ಇರುವ ವ್ಯಕ್ತಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಿರುವುದರಿಂದ ಆ ವ್ಯಕ್ತಿಗಳು ಕ್ಷಯ ರೋಗದ ಸೋಂಕಿಗೆ ಬೇಗನೆ ಒಳಗಾಗುತ್ತಾರೆ..
  • ಕ್ಷಯ ರೋಗವನ್ನು ಹೇಗೆ ಪತ್ತೆಹಚ್ಚುವುದು?:
    SYMPTOMS OF TUBERCULOSIS  PREVENTED OF TUBERCULOSIS  DOCTOR SUGGESTIONS  WORLD TUBERCULOSIS DAY
    ವಿಶ್ವ ಕ್ಷಯ ದಿನದಂಗವಾಗಿ ವಿಶೇಷ ಮಾಹಿತಿ
  1. ಎರಡು ಬಾರಿ ಕಫ ಪರೀಕ್ಷೆ ಮಾಡುವುದರ ಮುಖಾಂತರ ಕ್ಷಯ ರೋಗವನ್ನು ಪತ್ತೆ ಹಚ್ಚಬಹುದು
  2. ಕಫದ ಪರೀಕ್ಷೆಯಲ್ಲಿ ಕ್ರಿಮಿಗಳು ಕಂಡುಬರದಿದ್ದರೆ ಎಕ್ಸ್ ರೇ ಮುಖಾಂತರ ಕ್ಷಯ ರೋಗ ಪತ್ತೆ ಹಚ್ಚಬಹುದು
  • ಚಿಕಿತ್ಸೆ ಹೇಗೆ?:
  1. ನೇರ ನಿಗಾವಣೆ ಚಿಕಿತ್ಸೆ ( DOTS- DIRECT OBSERVATION TREATMENT SHORT COURSE) ಮೂಲಕ ಔಷಧಿಯನ್ನು ಆರೋಗ್ಯ ಕಾರ್ಯಕರ್ತರ ಎದುರಿನಲ್ಲೆ ಸೇವಿಸುವ ವಿಧಾನ
  2. ಕ್ಷಯ ರೋಗದ ಚಿಕಿತ್ಸೆ 6 ರಿಂದ 20 ತಿಂಗಳವರೆಗೆ ಮೂರು ವಿಧದಲ್ಲಿ ಇರುತ್ತದೆ
  3. 3.ಕ್ಷಯ ರೋಗಕ್ಕೆ ಚಿಕಿತ್ಸೆ ರಾಜ್ಯದ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುತ್ತಿದ್ದು, ಮಿಯಮಿತವಾಗಿ ಹಾಗೂ ನಿಗಧಿತ ಅವಧಿಯವರೆಗೆ ಚಿಕಿತ್ಸೆ ಪಡೆದರೆ ಕ್ಷಯ ರೋಗವನ್ನು ಗುಣಪಡಿಸಬಹುದಾಗಿದೆ.
  • ಕ್ಷಯ ರೋಗ ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳೇನು?:
  1. ಸಾರ್ವಜನಿಕರು ಕೆಮ್ಮಿದಾಗ, ಸೀನಿದಾಗ ಬಾಯಿ ಮತ್ತು ಮೂಗಿಗೆ ಕರವಸ್ತ್ರ ಇಟ್ಟುಕೊಳ್ಳಬೇಕು
  2. ಸಾರ್ವಜನಿಕರು ಕಫವನ್ನು ಮನಸ್ಸಿಗೆ ಬಂದ ಕಡೆ ಉಗುಳಬಾರದು
  3. ನವಜಾತ ಶಿಶುಗಳಿಗೆ ಬಿಸಿಜೆ ಲಸಿಕೆ ಹಾಕಿಸುವುದು
  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ಷಯ ರೋಗ ಪತ್ತೆಯಾದ ಅಂಕಿಅಂಶ:
  1. 2018- 3256
  2. 2019-3439
  3. 2020-2472
  4. 2021-2438
  5. 2022-2964
  6. 2023-2975
  7. 2024 ಮಾರ್ಚ್ 15 ವರೆಗೆ 594
  • ದ.ಕ ಜಿಲ್ಲೆಯಲ್ಲಿ ಎರಡು ಕ್ಷಯಮುಕ್ತ ಗ್ರಾಮ

ಆರು ಮಾನದಂಡಗಳ ಮೂಲಕ ಕ್ಷಯ ಮುಕ್ತ ಗ್ರಾಮಗಳನ್ನು ಘೋಷಿಸಿಲು ಸರಕಾರ ನಿರ್ಧರಿಸಿದ್ದು, ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಗ್ರಾಮಗಳನ್ನು ಕ್ಷಯ ಮುಕ್ತ ಗ್ರಾಮವೆಂದು ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಾಣಿಲ ಮತ್ತು ಪಿಲಾತಬೆಟ್ಟು ಗ್ರಾಮಗಳನ್ನು ಕ್ಷಯ ಮುಕ್ತ ಗ್ರಾಮಗಳೆಂದು ಘೋಷಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಬದ್ರುದ್ದೀನ್ ಎಮ್.ಎನ್. ಈಟಿವಿ ಭಾರತದೊಂದಿಗೆ ಮಾತನಾಡಿ, ಕ್ಷಯರೋಗ ಕೆಮ್ಮುವಾಗ, ಸೀನುವಾಗ ಮತ್ತು ಮಾತನಾಡುವಾಗ ರೋಗ ಹರಡುತ್ತದೆ. ಅಪೌಷ್ಠಿಕತೆ, ಹೊಗೆಬತ್ತಿ ಸೇದುವುದು, ಅಲ್ಕೋಹಾಲ್, ಧೂಳಿನಲ್ಲಿ ಕೆಲಸ ಮಾಡುವುದು, ಹೆಚ್​ಐವಿ, ಮಧುಮೇಹದಿಂದ ಈ ರೋಗ ಜಾಸ್ತಿ ಹರಡುತ್ತದೆ. 1962 ರಲ್ಲಿ ಎಕ್ಸ್​ರೇ ಮೂಲಕ ಕ್ಷಯ ರೋಗ ಪತ್ತೆ ಹಚ್ಚಲಾಗುತ್ತಿತ್ತು. ಈಗ ಕಫ ಪರೀಕ್ಷೆ, ಸಿವಿನೆಟ್ ಪರೀಕ್ಷೆ, ಎಕ್ಸ್ ರೇ ಮಾಡುವ ಮೂಲಕ ಪತ್ತೆಹಚ್ಚಲಾಗುತ್ತದೆ.

ಕೆಮ್ಮುವಾಗ ಮಾಸ್ಕ್ ಧರಿಸುವುದು, ಎಸಿ ಬಳಕೆ ಕಡಿಮೆಮಾಡುವುದು ಉತ್ತಮ. ಇದು ವಂಶಪಾರಂಪರ್ಯವಾಗಿ ಬರುವ ಖಾಯಿಲೆ ಅಲ್ಲ. ಇದು ಒಬ್ಬರಿಂದ ಒಬ್ಬರಿಗೆ ಹರಡುವುದರ ಮೂಲಕ ಹೆಚ್ಚಾಗಿ ಬರುತ್ತದೆ. ಉಗುರು ಮತ್ತು ಕೂದಲಿಗೆ ಹೊರತುಪಡಿಸಿ ಉಳಿದ ಅಂಗಗಳಿಗೆ ಕ್ಷಯರೋಗ ತಟ್ಟಬಹುದು ಎನ್ನುತ್ತಾರೆ ವೈದ್ಯರು.

ಓದಿ: ಕ್ಷಯ ರೋಗ ನಿರ್ಮೂಲನೆಗೆ ಪಣ; ಅಂತಿಮ ಹಂತ ತಲುಪಿದ 11 ಟಿಬಿ ಲಸಿಕೆ ಅಭಿವೃದ್ಧಿ ಕಾರ್ಯ - TB Vaccine

ETV Bharat Logo

Copyright © 2024 Ushodaya Enterprises Pvt. Ltd., All Rights Reserved.