ETV Bharat / state

ಭೂಕುಸಿತಗಳಿಗೆ ಕಾರಣಗಳೇನು, ಭೂವಿಜ್ಞಾನಿ ಹೇಳುವುದು ಏನು? - Geologist Interview - GEOLOGIST INTERVIEW

ನಾವು ಮಳೆಗಾಲದಲ್ಲಿ ಸಾಮಾನ್ಯವಾಗಿ ಗುಡ್ಡ ಕುಸಿತ, ಭೂ ಕುಸಿತ , ಬೆಟ್ಟ ಕುಸಿತ ಹಾಗೂ ರಸ್ತೆ ಕುಸಿತಗಳ ಬಗ್ಗೆ ಕೇಳುತ್ತೇವೆ. ಇತ್ತೀಚೆಗೆ ಕರ್ನಾಟಕದ ಶಿರೂರು ಗುಡ್ಡ ಕುಸಿತ ಮತ್ತು ಈಗ ಕೇರಳದ ವಯನಾಡಿನಲ್ಲಿ ಭೀಕರ ಭೂ ಕುಸಿತ ಸೇರಿದಂತೆ ಹಲವಾರು ಘಟನೆಗಳನ್ನ ನೋಡಿದ್ದೇವೆ. ಮುಖ್ಯವಾಗಿ ಭೂ ಕುಸಿತಗಳಿಗೆ ಪ್ರಾಕೃತಿಕ ಕಾರಣಗಳು ಒಂದು ಕಡೆಯಾದರೆ, ಮತ್ತೊಂದು ಕಡೆ ಪ್ರಕೃತಿಯ ಮೇಲೆ ಮನುಷ್ಯನ ಸ್ವಾರ್ಥ ಕಾರಣವಾಗಿದೆ.

CAUSES OF LANDSLIDE  GEOLOGIST INFORMATION  MYSURU  KERALA TRAGEDY
ಪ್ರೊ. ನಾಗರಾಜು ಸಂದರ್ಶನ (ETV Bharat)
author img

By ETV Bharat Karnataka Team

Published : Jul 31, 2024, 6:46 PM IST

ಪ್ರೊ. ನಾಗರಾಜು ಸಂದರ್ಶನ (ETV Bharat)

ಮೈಸೂರು: ಇತ್ತೀಚೆಗೆ ಮಳೆಗಾಲದಲ್ಲಿ ಹೆಚ್ಚಾಗಿ ಭೂ ಕುಸಿತಗಳು ಆಗುತ್ತಿದ್ದು, ಇದಕ್ಕೆ ಕಾರಣಗಳು ಏನು, ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಭೂ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಡಿ. ನಾಗರಾಜು ಈಟಿವಿ ಭಾರತ್​ಗೆ ಸಂದರ್ಶನ ನೀಡಿದ್ದಾರೆ.

ಸಂದರ್ಶನದಲ್ಲಿ ಮಾಹಿತಿಗಳು ಹಂಚಿಕೊಂಡ ಪ್ರೊ. ನಾಗರಾಜು, ಕಳೆದ 50 ವರ್ಷಗಳ ಹಿಂದೇ ಈ ರೀತಿಯಾ ಸಮಸ್ಯೆಗಳು ಇರಲ್ಲಿಲ್ಲ. ಆದರೆ, ಇತ್ತೀಚೆಗೆ ಪ್ರಕೃತಿ ಸೊಬಗನ್ನು ಸವಿಯಲು ಪ್ರವಾಸಿಗರ ದಂಡೇ ಐತಿಹಾಸಿಕ ಸ್ಥಳಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ. ಈ ಅವಕಾಶವನ್ನ ಸ್ಥಳೀಯ ಭೂ ಮಾಲೀಕರು ವ್ಯವಹಾರಕ್ಕಾಗಿ ಅದೇ ಸ್ಥಳಗಳನ್ನ ಉಪಯೋಗಿಸಿಕೊಂಡು ರೆಸ್ಟೋರೆಂಟ್, ಲಾಡ್ಜ್, ರಸ್ತೆಗಳ ಧಿಕ್ಕನ್ನು ಬದಲು ಮಾಡುತ್ತಾರೆ. ಇದರಿಂದ ಬಿದ್ದ ಮಳೆಯ ನೀರು ಸ್ವಾಭಾವಿಕವಾಗಿ ಹರಿದು ಹೋಗದೇ ಬೇರೆ ಹರಿಯುವ ಮಾರ್ಗಗಳನ್ನ ಹುಡುಕಿಕೊಳ್ಳುತ್ತದೆ. ಈ ಪ್ರಕ್ರಿಯೆಗಳು ಆ ಪ್ರದೇಶದ ಭೂ ಕುಸಿತಗಳಿಗೆ ಕಾರಣವಾಗುತ್ತದೆ. ಜತಗೆ ವಾಹನಗಳ ದಟ್ಟಣೆ ಹೆಚ್ಚಾಗಿದ್ದು, ಇದರಿಂದ ಭೂಮಿ ಸಡಿಲವಾಗುತ್ತದೆ. ಈ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಪ್ರೊ. ನಾಗರಾಜು ಭೂ ಕುಸಿತದ ಕಾರಣಗಳ ಬಗ್ಗೆ ವಿವರಿಸಿದರು.

ಕೇರಳದ ಭೂ ಕುಸಿತಕ್ಕೆ ಕಾರಣವೇನು?: ಕೇರಳದಲ್ಲಿ ಈ ಹಿಂದೆಯೂ ಹಲವು ಸಲ ಭೂ ಕುಸಿತಗಳು ಸಂಭವಿಸಿ, ಅನಾಹುತಗಳು ಘಟಿಸಿವೆ. ಮುಖ್ಯವಾಗಿ ಕೇರಳದ ಬೆಟ್ಟ ಗುಡ್ಡಗಳ ಪ್ರದೇಶಗಳಲ್ಲಿ ಅವೈಜ್ಞಾನಿಕವಾಗಿ ಪ್ರವಾಸಿ ತಾಣಗಳನ್ನಾಗಿ ಬಳಕೆ ಮಾಡಿಕೊಂಡಿದ್ದು, ಮಳೆಗಾಲದಲ್ಲಿ ಬಿದ್ದ ಮಳೆ ನೀರು ಸಲೀಸಾಗಿ ಹೋಗದೇ ಬದಲಿ ಮಾರ್ಗಗಳು ಮೂಲಕ ಹರಿಯುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಅವೈಜ್ಞಾನಿಕ ಕಾರಣಗಳ ಜತೆಗೆ ಹಲವಾರು ಕಾರಣಗಳಿಂದ ಕೇರಳದಲ್ಲಿ ಭೂ ಕುಸಿತಗಳು ಹೆಚ್ಚಾಗುತ್ತಿವೆ ಎಂದು ವಿವರಿಸಿದರು.

ಭೂ ಕುಸಿತ ತಡೆಯುವುದು ಹೇಗೆ?: ಸಾಮಾನ್ಯವಾಗಿ ಹೆಚ್ಚು ಮಳೆಯಾಗುವ ಬೆಟ್ಟ - ಗುಡ್ಡಗಳ ಕಡೆ ಮನುಷ್ಯ ಹಸ್ತಕ್ಷೇಪ ಮತ್ತು ವ್ಯವಹಾರಿಕ ಕೇಂದ್ರಗಳಾನ್ನಾಗಿ ಮಾಡದೇ, ಬಿದ್ದ ಮಳೆಯ ನೀರು ಸರಾಗವಾಗಿ ಹೋಗುವಂತೆ ಮಾಡಬೇಕು. ದೊಡ್ಡ ದೊಡ್ಡ ಬೇರುಗಳು ಬಿಡುವ ಮರಗಳನ್ನ ಬೆಳಸಬೇಕು ಎಂದರು.

ಭೂ ಕುಸಿತ ಸಂಭವಿಸುವ ಸ್ಥಳಗಳಲ್ಲಿ ಸೂಕ್ತ ಮಾನಿಟರ್ ಮಾಡಬೇಕು ಹಾಗೂ ಸಂಬಂಧಪಟ್ಟ ಭೂವಿಜ್ಞಾನಿಗಳು, ಪರಿಸರ ತಜ್ಞರು, ಸಿವಿಲ್ ಇಂಜಿನಿಯರ್​ಗಳು ಸೇರಿದಂತೆ ಭೂ ವಿಜ್ಞಾನದ ಸಂಬಂಧ ಕೆಲಸ ಮಾಡುವ ಎಲ್ಲರೂ ಭೂ ಕುಸಿತ ಉಂಟಾಗುವ ಸ್ಥಳದ ಬಗ್ಗೆ ಮಾಹಿತಿ ಕಲೆ ಹಾಕಿ ಅದನ್ನ ತಡೆಯುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು. ಭೂ ಕುಸಿತದ ಅಪಾಯದ ಬಗ್ಗೆ ಜನಸಾಮಾನ್ಯರಿಗೆ ಪೂರ್ವ ತಿಳಿವಳಿಕೆ ನೀಡಬೇಕು ಎಂದು ಭೂ ವಿಜ್ಞಾನಿ ಪ್ರೊ. ನಾಗರಾಜು ಭೂ ಕುಸಿತಕ್ಕೆ ಕಾರಣಗಳ ಬಗ್ಗೆ ಮತ್ತು ಅವುಗಳಿಂದ ತಪ್ಪಿಸಿಕೊಳ್ಳುವ ವಿಧಾನಗಳ ಬಗ್ಗೆ ವಿವರಿಸಿದರು.

ಓದಿ: ಪ್ರವಾಸಿಗರ ಸ್ವರ್ಗ ವಯನಾಡೀಗ ನರಕ ಸದೃಶ: 164 ಬಲಿ, 300 ಮನೆಗಳು ಸರ್ವನಾಶ; ಮಣ್ಣಿನಡಿ ಬದುಕುಳಿದವರಿಗೆ ಶೋಧ - Wayanad Landslides

ETV Bharat Logo

Copyright © 2025 Ushodaya Enterprises Pvt. Ltd., All Rights Reserved.