ETV Bharat / state

ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸುವ ಕೆಲಸ ನಾವು ಮಾಡ್ತೀವಿ: ಡಿ ಕೆ ಶಿವಕುಮಾರ್ - ರಾಹುಲ್ ಗಾಂಧಿ

ಕಾಂಗ್ರೆಸ್​ ಶಕ್ತಿ ಈ ದೇಶದ ಶಕ್ತಿ. ಕಾಂಗ್ರೆಸ್​ ಇತಿಹಾಸ ಈ ದೇಶದ ಇತಿಹಾಸ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್
author img

By ETV Bharat Karnataka Team

Published : Jan 28, 2024, 7:29 PM IST

ದಾವಣಗೆರೆ/ಚಿತ್ರದುರ್ಗ : ಜಾತಿಗಣತಿ ಆಗಬೇಕು ಎಂದು ರಾಹುಲ್ ಗಾಂಧಿ ದೊಡ್ಡ ಸಂದೇಶ ಕೊಟ್ಟರು. ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಜನರಿಗೆ ಮಾತು ಕೊಟ್ಟಿದ್ದಾರೆ.

ಚಿತ್ರದುರ್ಗದಲ್ಲಿ ನಡೆದ ಶೋಷಿತರ ಜಾಗೃತಿ ರಾಜ್ಯ ಸಮಾವೇಶದಲ್ಲಿ ಮಾತನಾಡಿದ ಅವರು, ಇದೊಂದು ಐತಿಹಾಸಿಕ ಸಮಾವೇಶ. ರಾಜ್ಯದಲ್ಲಿ ಬದಲಾವಣೆ ಪರ್ವವನ್ನು ಶೋಷಿತರ ಸಮುದಾಯ ಜಾಗೃತಿ ಸಮಾವೇಶದ ಮೂಲಕ ಹಮ್ಮಿಕೊಂಡಿದೆ. ಕಾಂಗ್ರೆಸ್ ಪಕ್ಷದ ಪರವಾಗಿ ಎಲ್ಲರಿಗೂ ಅಭಿನಂದನೆಗಳು. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಕೈ ಅಧಿಕಾರಕ್ಕೆ ಬಂದ್ರೆ ಎಲ್ಲರೂ ಅಧಿಕಾರಕ್ಕೆ‌ ಬಂದಂತೆ. ಇದು ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯ. ಮರಕ್ಕೆ ಬೇರು ಎಷ್ಟು ಮುಖ್ಯವೋ ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ ಎಂದಿದ್ದಾರೆ.

ದೇವರು ವರನೂ ಕೊಡಲ್ಲ, ಶಾಪನೂ ಕೊಡಲ್ಲ. ಅವಕಾಶ ಮಾತ್ರ ಕೊಡ್ತಾನೆ. ಅವಕಾಶ ಯಾವ ರೀತಿ ಉಪಯೋಗಿಸಿಕೊಳ್ಳುತ್ತೇವೆ ಎಂಬುದು ಬಹಳ ಮುಖ್ಯ. ಯಶಸ್ಸು ಯಾರ ಆಸ್ತಿಯೂ ಅಲ್ಲ. ಯಾವ ರಾಜನೂ ಯಾವಾಗ್ಲೂ ರಾಜನಾಗಿ ಇರಲು ಸಾಧ್ಯವಿಲ್ಲ. ಕೊನೆಗೆ ಎಲ್ಲರಿಗೂ ರಾಜನಾಗುವ, ಶ್ರೀಮಂತನಾಗುವ ಅವಕಾಶ ಸಿಗುತ್ತೆ. ಇದೇ ಪ್ರಜಾಪ್ರಭುತ್ವದ ಶಕ್ತಿ. ಭಗವದ್ಗೀತೆ, ರಾಮಾಯಣ ಇವು ಧರ್ಮ ಗ್ರಂಥಗಳು. ಅಂಬೇಡ್ಕರ್ ಅವರ ಸಂವಿಧಾನವೇ ನಮಗೆ ಶ್ರೀರಕ್ಷೆಯಾಗಿದೆ ಎಂದು ಡಿಕೆಶಿ ಹೇಳಿದ್ದಾರೆ.

ಹೆಣ್ಣು ಮಕ್ಕಳು ಉಚಿತವಾಗಿ ಪ್ರಯಾಣ ಮಾಡ್ತಿದ್ದಾರೆಂದರೆ ಅದು ಕಾಂಗ್ರೆಸ್ ಶಕ್ತಿ : ಹೆಣ್ಣು ಮಕ್ಕಳು ಎಲ್ಲರೂ ಉಚಿತವಾಗಿ ಪ್ರಯಾಣ ಮಾಡ್ತಿದ್ದೀರಾ ತಾನೆ. ಇದೇ ಕಾಂಗ್ರೆಸ್ ಶಕ್ತಿ. ಇದೇ ಗ್ಯಾರಂಟಿ. ರಾಹುಲ್ ಗಾಂಧಿ ಅವರು ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸಬೇಕು ಅಂತ ಹೇಳಿದ್ದಾರೆ. ಇವತ್ತು ಇಡೀ ದೇಶದಲ್ಲಿ ಜಾತಿಗಣತಿ ಆಗಬೇಕು ಎಂದು ದೊಡ್ಡ ಸಂದೇಶ ಕೊಟ್ಟರು. ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸುವ ಕೆಲಸವನ್ನು ನಾವು ಮಾಡ್ತೀವಿ. ಯಾರೂ ಗಾಬರಿ ಪಡುವ ಅವಶ್ಯಕತೆ ಇಲ್ಲ. ಎಲ್ಲಾ ವರ್ಗದ ಜನರ ರಕ್ಷಣೆಗೆ ನಮ್ಮ ಪಕ್ಷ ಸದಾ ಇರಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಸಿದ್ದರಾಮಯ್ಯ ಕೈಬಲಪಡಿಸಲು ನಾವು ಸೈನಿಕರ ರೀತಿ ನಿಲ್ಲಬೇಕಿದೆ : ಸತೀಶ್ ಜಾರಕಿಹೊಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.