ETV Bharat / state

ಮಾಸಗೊಂಡನಹಟ್ಟಿ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ: ಹಣ ಕೊಟ್ಟು ನೀರು ಖರೀದಿಸುತ್ತಿದ್ದಾರೆ ಜನ! - Water scarcity

ಬೆಳಗಾವಿಯ ಮಾಸಗೊಂಡನಹಟ್ಟಿ ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ. ಹೀಗಾಗಿ ಜನರು ಕೂಲಿ ಕೆಲಸ ಮಾಡಿ ಗಳಿಸುವ ಹಣದಲ್ಲಿ ನೀರು ಖರೀದಿಸುವ ಪರಿಸ್ಥಿತಿ ಬಂದೊದಗಿದೆ.

ಮಾಸಗೊಂಡನಹಟ್ಟಿ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ

author img

By ETV Bharat Karnataka Team

Published : Mar 20, 2024, 12:28 PM IST

Updated : Mar 20, 2024, 3:02 PM IST

ಮಾಸಗೊಂಡನಹಟ್ಟಿ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ

ಬೆಳಗಾವಿ: 'ಮೊದಲ ಬರಗಾಲ ಬಿದ್ದಿದ್ದರಿಂದ ನಮ್ಮೂರಾಗ ಕೂಲಿ ಸಿಗಾತಿಲ್ಲ. ಈಗ ನೋಡಿದರೆ ನೀರಿಗೂ ರೊಕ್ಕ ಕೊಟ್ಟು ಖರೀದಿ ಮಾಡಬೇಕ್ರಿ. ಹೊಟ್ಟೆ ನೋಡಕೋದೋ..? ನೀರು ತಗೊಳ್ಳೋದೊ ಒಂದು ತಿಳ್ಯಾತಿಲ್ಲ'.. ಇದು ಬೆಳಗಾವಿ ತಾಲೂಕಿನ ಧಾಮಣೆ ಎಸ್​. ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಸಗೊಂಡನಹಟ್ಟಿ ಗ್ರಾಮದ ಮಹಿಳೆ ಬಾಳವ್ವ ಬಸವಂತ ಪಾಟೀಲ ಎಂಬುವರು ತಮ್ಮೂರಿನ ನೀರಿನ ಸಮಸ್ಯೆ ಕುರಿತು ಈಟಿವಿ ಭಾರತ ಮುಂದೆ ಅಳಲು ತೋಡಿಕೊಂಡ ಪರಿ.

'ಬೋರು ತೆಗೆದರು ನೀರು ಸಿಗುತ್ತಿಲ್ಲ. ನಿಮಗೆ ನೀರು ಕೊಡುತ್ತೇವೆ. ವೋಟು ಹಾಕಿ ಎಂದು ಚುನಾವಣೆ ಸಮಯದಾಗ ಬಂದು ಹೇಳಿ‌ ವೋಟ್ ಹಾಕಿಸಿಕೊಂಡು ಹೋಗ್ತಾರ. ಅದಾದ ಮ್ಯಾಲೆ ನಮ್ಮ ಕಡೆ ಯಾರೂ ತಿರುಗಿ ನೋಡಲ್ಲ. ಶಾಸಕ ಅಭಯ ಪಾಟೀಲ ಅವರು ಮನೆ ಮುಂದೆ ನಲ್ಲಿ ಹಾಕಿಸ್ಯಾರ. ಆದರೂ ಅದರಲ್ಲಿ ನೀರು ಬರುತಿಲ್ಲ. ನೀರಿಗಾಗಿ ನಾವು ಎಲ್ಲಿಗೆ ಹೋಗೋದು ಅಂತಾ' ಆಕ್ರೋಶ ವ್ಯಕ್ತಪಡಿಸಿದರು.

ಒಂದು ಮನೆಗೆ 8 ಕೊಡ ನೀರು; ಮಾಸಗೊಂಡನಹಟ್ಟಿ ಗ್ರಾಮದಲ್ಲಿ ನೀರಿನ ಸಮಸ್ಯೆ ನಿವಾರಿಸಲು ತಾಲೂಕು ಆಡಳಿತದ ವತಿಯಿಂದ ಟ್ಯಾಂಕರ್ ಮೂಲಕ‌ ನೀರು ಪೂರೈಸಲಾಗುತ್ತಿದೆ. ಅದು ಒಂದು ಮನೆಗೆ 8 ಕೊಡ ಅಷ್ಟೇ. ಈ 8 ಕೊಡ ನೀರಿನಲ್ಲಿ 2-3 ದಿನ ಕಳೆಯಬೇಕು. ಒಂದೆಡೆ ರಣಬಿಸಿಲು, ಮತ್ತೊಂದೆಡೆ ನೀರಿಲ್ಲದೇ ಗ್ರಾಮಸ್ಥರು ನರಕಯಾತನೆ ಅನುಭವಿಸುತ್ತಿದ್ದಾರೆ. ಟ್ಯಾಂಕರ್​ ಬಂತು ಎಂದರೆ ಸಾಕು ಮಹಿಳೆಯರು, ವೃದ್ಧರು ಖಾಲಿ ಕೊಡಗಳನ್ನು ಹಿಡಿದು ನಿಲ್ಲಬೇಕು. ಅವರು ಕೊಟ್ಟಷ್ಟು ನೀರು ತುಂಬಿಕೊಳ್ಳಬೇಕು. ಇಲ್ಲವಾದರೆ 500 ರೂ. ಕೊಟ್ಟು ಒಂದು ಟ್ಯಾಂಕರ್ ನೀರು ಖರೀದಿಸಬೇಕು. ಮೊದಲೇ ಇಲ್ಲಿನ ಜನ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಾರೆ. ಬರಗಾಲ ಹಿನ್ನೆಲೆ ಯಾವುದೇ ಕೆಲಸವೂ ಸಿಗುತ್ತಿಲ್ಲ. ಇನ್ನು ಲೋಕಸಭೆ ಚುನಾವಣೆಯಲ್ಲಿ ಬ್ಯುಸಿ ಆಗಿರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಇಲ್ಲಿನ ಜನರ ಗೋಳು ಕೇಳಿಸುತ್ತಿಲ್ಲ.

ನೀರಿಗಾಗಿ ಸಾವಿರಾರು ರೂ. ಖರ್ಚು; ಮತ್ತೋರ್ವ ಮಹಿಳೆ ಪುಷ್ಪಾ ಪಾಟೀಲ ಮಾತನಾಡಿ, ಟ್ಯಾಂಕರ್​ ಬಂತು ಎಂದರೆ ಜಗಳ ಮಾಡಿ ನೀರು ತುಂಬಿಕೊಳ್ಳುತ್ತೇವೆ. ಒಂದು ವೇಳೆ ನೀರು ಸಿಗದಿದ್ದರೆ ರೊಕ್ಕ ಕೊಟ್ಟು ನೀರು ಖರೀದಿಸುತ್ತೇವೆ. ಇಲ್ಲಿಯವರೆಗೆ ನೀರಿಗಾಗಿ 3 ಸಾವಿರ ರೂ. ಖರ್ಚು ಮಾಡಿದ್ದೇವೆ. ನಮ್ಮ ಗಂಡ ಗಾರೆ ಕೆಲಸ ಮಾಡಿ ದುಡಿದು ತಂದ ಹಣವನ್ನು ನೀರಿಗೆ ಖರ್ಚು ಮಾಡುತ್ತಿದ್ದೇವೆ ಎಂದು ಅಸಮಾಧಾನ ಹೊರ ಹಾಕಿದರು.

ಗ್ರಾಮಸ್ಥ ತುಕಾರಾಮ ಸಾವಂತ ಮಾತನಾಡಿ, ಜಲ್​ ಜೀವನ್​ ಮಿಶನ್​ ಯೋಜನೆಯಡಿ ನಲ್ಲಿಗಳನ್ನು ಹಾಕಿದ್ದಾರೆ. ಆದರೆ, ನೀರು ಮಾತ್ರ ಬರುತ್ತಿಲ್ಲ. ಯಾವಾಗ ನೀರು ಬಿಡುತ್ತೀರಿ ಎಂದರೆ, ಇನ್ನು ಕಾಮಗಾರಿ ಪೂರ್ಣ ಆಗಿಲ್ಲ ಅಂತಿದ್ದಾರೆ. ನಾವು ದುಡಿದ ಹಣ ಎಲ್ಲಾ ನೀರಿಗೆ ಹಾಕೋದು ಆಗಿದೆ. ನಮ್ಮ ನೀರಿನ ಸಮಸ್ಯೆ ಯಾರು ಕೇಳುತ್ತಾ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಟಿವಿ ಭಾರತ ಪ್ರತಿನಿಧಿ ಗ್ರಾಮ ಪಂಚಾಯತ್​ ಅಭಿವೃದ್ಧಿ ಅಧಿಕಾರಿ ಉಷಾ ಎಸ್​​. ಅವರನ್ನು ಸಂಪರ್ಕಿಸಿದಾಗ, ಮಾಸಗೊಂಡನಹಟ್ಟಿಯಲ್ಲಿ ನೀರಿನ ಸಮಸ್ಯೆ ಬಹಳಷ್ಟಿದೆ. ಅಲ್ಲಿ ಯಾವುದೇ ಕೆರೆ, ಬಾವಿ, ನದಿಗಳ ಜಲಮೂಲ ಇಲ್ಲ. ಜೆಜೆಎಂ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ಹಾಗಾಗಿ, ನಳಗಳಲ್ಲಿ ನೀರು ಬರುತ್ತಿಲ್ಲ. ಶೀಘ್ರವೇ ಸಮಸ್ಯೆ ಪರಿಹರಿಸಲಾಗುವುದು ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಯಾವುದೇ ನೀರಿನ ಮೂಲ ಇಲ್ಲದಿದ್ದರೂ ಕೂಡ ಅಧಿಕಾರಿಗಳು ಜೆಜೆಎಂ ಕಾಮಗಾರಿಯನ್ನು ಮಾಸಗೊಂಡನಹಟ್ಟಿಯಲ್ಲಿ ಹೇಗೇ ಕೈಗೊಂಡಿದ್ದಾರೆ ಅನ್ನೋದು ಪ್ರಶ್ನೆಯಾಗಿಯೇ ಉಳಿದಿದೆ. ಇನ್ನಾದರೂ ತಾಲೂಕು ಆಡಳಿತ ಸಮರ್ಪಕವಾಗಿ ನೀರು ಪೂರೈಸುವ ಕೆಲಸ ಮಾಡಿ, ಜನರ ನೀರಿನ ಬವಣೆ ನೀಗಿಸಬೇಕಿದೆ.

ಇದನ್ನೂ ಓದಿ: ಟ್ಯಾಪ್‌ಗೆ ಏರಿಯೇಟರ್ ಹಾಕಿಸಿಕೊಳ್ಳಿ, ವಾಟರ್‌ ಬಿಲ್ ತಗ್ಗಿಸಿ! ಬೆಂಗಳೂರಿನಲ್ಲಿದು ಕಡ್ಡಾಯ

Last Updated : Mar 20, 2024, 3:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.