ETV Bharat / state

ಸ್ವಾಭಿಮಾನಿ ಸಮಾವೇಶ; ನಾಲ್ಕು ದಿನ ಕಾದು ನೋಡುವ ನಿರ್ಧಾರ ಮಾಡಿದ ಸಂಸದ ಸಂಗಣ್ಣ ಕರಡಿ - KOPPAL LOK SABHA ELECTION - KOPPAL LOK SABHA ELECTION

ಕೊಪ್ಪಳದಲ್ಲಿ ಸಂಗಣ್ಣ ಕರಡಿ ತಮ್ಮ ಬೆಂಬಲಿಗರು ಹಾಗೂ ಅಭಿಮಾನಿಗಳೊಂದಿಗೆ ಸ್ವಾಭಿಮಾನಿ ಸಮಾವೇಶ ನಡೆಸಿದರು.

MP Sanganna Karadi spoke.
ಸಂಸದ ಸಂಗಣ್ಣ ಕರಡಿ ಬೆಂಬಲಿಗರ ಸ್ವಾಭಿಮಾನಿ ಸಮಾವೇಶದಲ್ಲಿ ಮಾತನಾಡಿದರು.
author img

By ETV Bharat Karnataka Team

Published : Mar 21, 2024, 5:38 PM IST

Updated : Mar 21, 2024, 8:01 PM IST

ಸಂಸದ ಸಂಗಣ್ಣ ಕರಡಿ ಸ್ವಾಭಿಮಾನಿ ಸಮಾವೇಶದಲ್ಲಿ ಮಾತನಾಡಿದರು.

ಕೊಪ್ಪಳ: ಲೋಕಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಬಳಿಕ ರಾಜ್ಯದ ಹಲವು ನಾಯಕರು ಕರೆ ಮಾಡಿ ನನ್ನೊಂದಿಗೆ ಮಾತನಾಡಿದ್ದಾರೆ. ಸ್ಥಳೀಯ ವ್ಯವಸ್ಥೆ ಬಗ್ಗೆ ಅವರಿಗೆ ತಿಳಿಸಿದ್ದೇನೆ. ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್​ ಜೊತೆಗೆ ಮತ್ತೊಮ್ಮೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ. ನಾಲ್ಕು ದಿನ ಕಾದು ಮುಂದಿನ ರಾಜಕೀಯ‌ ನಡೆ ಬಗ್ಗೆ ನಿರ್ಧರಿಸಲಾಗುವುದು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ಕೊಪ್ಪಳದ ಶಿವಶಾಂತ ಮಂಗಲ ಭವನದಲ್ಲಿ ಇಂದು ನಡೆದ ಸಂಗಣ್ಣ ಕರಡಿ ಬೆಂಬಲಿಗರ ಹಾಗೂ ಅಭಿಮಾನಿಗಳ ಸ್ವಾಭಿಮಾನಿ ಸಮಾವೇಶದಲ್ಲಿ ಅವರು ಮಾತನಾಡಿದರು.

ಕ್ಷೇತ್ರದ ಜನರ ಭಾವನೆಗೆ ಧಕ್ಕೆಯಾಗಿದೆ ಎನ್ನುವುದಕ್ಕೆ ಈ ಸಮಾವೇಶ ಸಾಕ್ಷಿಯಾಗಿದೆ. ಲೋಕಸಭೆ ಟಿಕೆಟ್‌ ಮಿಸ್‌ ಆದ ಬಳಿಕ ಬಹುತೇಕರು ಹೇಳಿದ್ದು ಒಂದೇ ಮಾತು. ಇದು ನಿಮಗೆ ಮಾಡಿದ ಅವಮಾನವಲ್ಲ. ಈ ಕ್ಷೇತ್ರದ ನಿಮ್ಮ ಅಭಿಮಾನಿಗಳಾದ ನಮಗೆ ಅವಮಾನ ಮಾಡಿದ್ದಾರೆ. ಅದಕ್ಕಾಗಿ ಈ ಅವಮಾನಕ್ಕೆ ನಾವೆಲ್ಲ ತಕ್ಕ ಉತ್ತರ ನೀಡಬೇಕೆಂದು ಬೆಂಬಲಿಗರ ಸಮಾವೇಶ ಕರೆದು ಅಭಿಪ್ರಾಯ ಸಂಗ್ರಹ ಮಾಡೋಣ ಎಂದು ನನಗೆ ಸಲಹೆ ನೀಡಿದ್ದಾರೆ ಎಂದರು.

ಹಲವು ಬಿಜೆಪಿ ನಾಯಕರಿಂದ ಕರೆ: ಸಮಾವೇಶ ಹಮ್ಮಿಕೊಂಡ ವಿಷಯ ತಿಳಿದ ಬಳಿಕ ನಮ್ಮ ಪಕ್ಷದ ಅನೇಕ ನಾಯಕರು ನನ್ನನ್ನು ಸಂಪರ್ಕ ಮಾಡಿದ್ದಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಸಹ ನನ್ನೊಂದಿಗೆ ಮಾತನಾಡಿ, ಸಭೆ ಬೇಡ, ಸರಿ ಮಾಡೋಣ ಎಂದು ಹೇಳಿದರು. ನಿನ್ನೆ ಮಾಜಿ ಶಾಸಕ ಎಸ್​ ಎ ರಾಮದಾಸ್‌ ಅವರು ಸಹ ಫೋನ್‌ ಮಾಡಿದ್ದರು. ದುಡುಕಿನ ನಿರ್ಧಾರ ಮಾಡಬೇಡಿ ಎಂದು ಕಿವಿಮಾತು ಹೇಳಿದರು ಎಂದು ಕರಡಿ ತಿಳಿಸಿದರು.

ಇವರಷ್ಟೇ ಅಲ್ಲ, ಬಿಜೆಪಿ ಅನೇಕ ನಾಯಕರು ನನಗೆ ಕರೆ ಮಾಡಿ ಮಾತನಾಡಿದ್ದಾರೆ. ಆದರೆ ನನ್ನ ಸ್ವಾರ್ಥಕ್ಕೆ ಟಿಕೆಟ್‌ ಬದಲಾವಣೆ ಮಾಡಬೇಕು ಎಂಬ ಒತ್ತಾಯ ನನ್ನದಲ್ಲ. ಕ್ಷೇತ್ರದ ಜನರ ಭಾವನೆಗೆ ಧಕ್ಕೆಯಾಗಿದೆ ಎಂಬುದಕ್ಕೆ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಗಣ್ಣ ಕರಡಿ ಹೇಳಿದರು.

ಕುಷ್ಟಗಿಯಲ್ಲಿ ಬಿಜೆಪಿ ಜಿಲ್ಲಾ ಕೋರ್‌ ಕಮಿಟಿ ಸಭೆ: ಬುಧವಾರ ಕುಷ್ಟಗಿಯಲ್ಲಿ ಬಿಜೆಪಿ ಜಿಲ್ಲಾ ಕೋರ್‌ ಕಮಿಟಿ ಸಭೆ ಆಯೋಜಿಸಲಾಗಿತ್ತು. ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಕಾರ್ಯಾಲಯವಿದ್ದರೂ ಕುಷ್ಟಗಿಯಲ್ಲಿ ಯಾಕೆ ಸಭೆ ಆಯೋಜಿಸಲಾಗಿತ್ತು ಎಂಬುದು ಗೊತ್ತಿಲ್ಲ ಎಂದು ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ರಾಮದಾಸ್, ಪ್ರಹ್ಲಾದ್ ಜೋಶಿ, ನಳಿನ್ ಕುಮಾರ್ ಕಟೀಲ್ ಮತ್ತು ಸುನಿಲ್ ಕುಮಾರ್ ಸೇರಿದಂತೆ ಪಕ್ಷದ ಹಲವರು ಕರೆ ಮಾಡಿ ಮಾತನಾಡಿದ್ದಾರೆ. ಎರಡ್ಮೂರು ದಿನಗಳಲ್ಲಿ ಪಕ್ಷದ ವರಿಷ್ಠರು ನನ್ನನ್ನೇ ಕರೆಯಿಸಿಕೊಳ್ಳಬಹುದು ಅಥವಾ ಕೊಪ್ಪಳಕ್ಕೆ ಬರಬಹುದು ಎಂದು ಮಾಹಿತಿ ನೀಡಿದರು.

ಸ್ಥಳೀಯ ಮುಖಂಡರ ವಿರುದ್ಧ ಹರಿಹಾಯ್ದ ಕರಡಿ ಅವರು, ಬೆಂಬಲಿಗರ ಸಮಾವೇಶದಲ್ಲಿ ಪಾಲ್ಗೊಂಡವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸ್ಥಳೀಯ ಬಿಜೆಪಿ ನಾಯಕರು ಎಚ್ಚರಿಕೆ ನೀಡಿದ್ದಾರಂತೆ. ಹಾಗೆ ಶಿಸ್ತು ಕ್ರಮ ಕೈಗೊಂಡರೆ ಬಿಜೆಪಿಯಲ್ಲಿ ಯಾರು ಉಳಿಯುವುದಿಲ್ಲ ಎಂದು ಎಚ್ಚರಿಕೆ ರವಾನಿಸಿದರು.

ಸಾಕಷ್ಟು ಬೆಂಬಲಿಗರು ಬಿಜೆಪಿ ಕೊಪ್ಪಳ ಕ್ಷೇತ್ರದ ಟಿಕೆಟ್ ಮರು ಪರಿಶೀಲಿಸಬೇಕು, ಇಲ್ಲವಾದರೆ ಸ್ವತಂತ್ರವಾಗಿ ಸ್ಪರ್ಧೆ ಮಾಡಬೇಕು ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಗಣ್ಣ ಕರಡಿ ನಾಲ್ಕು ದಿನಗಳ ಬಳಿಕ ಮುಂದಿನ ನಿರ್ಧಾರ ಮಾಡೋಣ. ಅಲ್ಲಿಯ ತನಕ ಶಾಂತ ರೀತಿಯಿಂದ ಇರಬೇಕು ಎಂದು ಮನವಿ ಮಾಡಿದರು.

ಇದನ್ನೂಓದಿ:ಇಂಡಿಯಾ ಗೆದ್ದರೆ ಮೇಕೆದಾಟು ತಡೆಯುತ್ತೇವೆ ಎನ್ನುವ ಡಿಎಂಕೆ ನಡೆ ಖಂಡನಾರ್ಹ: ಮುಖ್ಯಮಂತ್ರಿ ಚಂದ್ರು - AAP SUPPORTS MEKEDATU PROJECT

Last Updated : Mar 21, 2024, 8:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.