ETV Bharat / state

ಶಿವಮೊಗ್ಗಕ್ಕೆ ರಾಹುಲ್ ಗಾಂಧಿ ಬಂದಿರುವುದು ತುಂಬಾ ಸಂತೋಷ: ಕೆ.ಎಸ್.ಈಶ್ವರಪ್ಪ - K S Eshwarappa - K S ESHWARAPPA

ಶಿವಮೊಗ್ಗಕ್ಕೆ ರಾಹುಲ್ ಗಾಂಧಿ ಆಗಮನದ ಕುರಿತು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕೆ.ಎಸ್.ಈಶ್ವರಪ್ಪ ಮಾತನಾಡಿದರು.

K.S.ESHWARAPPA
ಕೆ.ಎಸ್.ಈಶ್ವರಪ್ಪ (Etv Bharat)
author img

By ETV Bharat Karnataka Team

Published : May 3, 2024, 5:59 PM IST

ಶಿವಮೊಗ್ಗ: ಶಿವಮೊಗ್ಗ ನಗರಕ್ಕೆ ರಾಹುಲ್ ಗಾಂಧಿ ಆಗಮಿಸಿದ್ದು ತುಂಬ ಸಂತೋಷವಾಗಿದೆ. ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸೋಲುವುದರಲ್ಲಿ ಅನುಮಾನವೇ ಇಲ್ಲ ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿಂದು ಮಾತನಾಡಿದ ಅವರು, ಕ್ಷೇತ್ರದ ಜನತೆ ಗೀತಾ ಶಿವರಾಜ್ ಕುಮಾರ್ ಸೋಲುತ್ತಾರೆ, ರಾಘವೇಂದ್ರರಿಗೆ ಮತ ನೀಡಲು ಮನಸಿಲ್ಲ ಎನ್ನುತ್ತಿದ್ದಾರೆ. ಹೀಗಾಗಿ, ನಾನು ಹೆಚ್ಚಿನ ಅಂತರದಲ್ಲಿ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನನಗೆ ಗ್ರಾಮೀಣ, ನಗರ ಪ್ರದೇಶದಲ್ಲಿ ಹೆಚ್ಚಿನ ಬೆಂಬಲ ಸಿಗುತ್ತಿದೆ. ಎಲ್ಲ ಜಾತಿ, ಧರ್ಮದವರು ಬೆಂಬಲಿಸುತ್ತಿದ್ದಾರೆ. ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ ಎಂದರು.

ಯಡಿಯೂರಪ್ಪನವರು ನನ್ನ ಕಾರ್ಯಕ್ರಮ ರದ್ದು ಮಾಡಿಸಲು ಪ್ರಯತ್ನಪಟ್ಟರು. ಇದಕ್ಕಾಗಿ ನನ್ನ ಕಚೇರಿ ಬಳಿ ವಾಮಾಚಾರ ಮಾಡುತ್ತಿದ್ದಾರೆ. ಇದಕ್ಕೆ ಧರ್ಮವೇ ಉತ್ತರ ಕೊಡುತ್ತದೆ ಎಂದು ತಿಳಿಸಿದರು.

ಇನ್ನು, ಮಧು ಬಂಗಾರಪ್ಪಗೆ ರಾಜಕೀಯ ಗೊತ್ತಿಲ್ಲ. ಬಂಗಾರಪ್ಪ ಮಗ ಅನ್ನುವುದು ಬಿಟ್ಟರೆ ಬೇರೆ ಏನಿದೆ ಎಂದರು. ಗೀತಾ ಶಿವರಾಜ್ ಕುಮಾರ್ ಬೆಂಗಳೂರಿನಲ್ಲಿ ಅರಾಮಾಗಿದ್ರು. ಶಿವಮೊಗ್ಗದಲ್ಲಿ ಕಾಂಗ್ರೆಸ್‌ನವರಿಗೆ ಯಾರೂ ಇರಲಿಲ್ವಾ? ಎಂದು ಕೇಳಿದರು.

ಸಿದ್ದರಾಮಯ್ಯ ಸುಳ್ಳಿನ‌ ಸರದಾರ. ಪ್ರಜ್ವಲ್ ರೇವಣ್ಣ ವಿಷಯದ ಬಗ್ಗೆ ಮಾತನಾಡಲು ಇಷ್ಟಪಡಲ್ಲ ಎಂದರು. ಇದೇ ವೇಳೆ ರಾಹುಲ್ ಗಾಂಧಿ ರಾಯ್ ಬರೇಲಿಯಲ್ಲಿ ನಿಂತರೂ ಸೋಲುತ್ತಾರೆ ಎಂದರು.

ಇದನ್ನೂ ಓದಿ: ಹಾಸನ ಪೆನ್​ ಡ್ರೈವ್​ ಕೇಸ್: ಮ್ಯಾಜಿಸ್ಟ್ರೇಟ್ ಮುಂದೆ ಸಂತ್ರಸ್ತೆಯ ಹೇಳಿಕೆ ದಾಖಲು- ಸಚಿವ ಜಿ.ಪರಮೇಶ್ವರ್ - Hassan Pendrive Case

ETV Bharat Logo

Copyright © 2025 Ushodaya Enterprises Pvt. Ltd., All Rights Reserved.