ETV Bharat / state

ಸಿದ್ದರಾಮಯ್ಯ, ಕುಮಾರಸ್ವಾಮಿ, ನನಗೆ ಸಂಸ್ಕಾರ ನೀಡಿದ್ದು ದೇವೇಗೌಡರು: ವಿ ಸೋಮಣ್ಣ - v somanna

ದೇವೇಗೌಡರ ಬಗ್ಗೆ ಹಗುರವಾಗಿ ಯಾರೂ ಮಾತನಾಡಬಾರದು ಎಂದು ತುಮಕೂರು ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಹೇಳಿದ್ದಾರೆ.

ಸಿದ್ದರಾಮಯ್ಯ, ಸಿಂಧ್ಯಾ, ನನಗೆ ಸಂಸ್ಕಾರ ನೀಡಿದ್ದು ದೇವೇಗೌಡರು: ವಿ ಸೋಮಣ್ಣ
ಸಿದ್ದರಾಮಯ್ಯ, ಸಿಂಧ್ಯಾ, ನನಗೆ ಸಂಸ್ಕಾರ ನೀಡಿದ್ದು ದೇವೇಗೌಡರು: ವಿ ಸೋಮಣ್ಣ (Etv Bharat)
author img

By ETV Bharat Karnataka Team

Published : May 8, 2024, 3:05 PM IST

ಬೆಂಗಳೂರು: ಸಿದ್ದರಾಮಯ್ಯ, ಕುಮಾರಸ್ವಾಮಿ ಮತ್ತು ನನಗೆ ಸಂಸ್ಕಾರ ಹೇಳಿಕೊಟ್ಟವರು ದೇವೆಗೌಡರು. ಅವರ ಮೇಲೆ ಅನಗತ್ಯ ಆರೋಪ ಮಾಡುವುದು ಸರಿಯಲ್ಲ ಮತ್ತು ಹಗುರವಾಗಿ ಯಾರೂ ಮಾತನಾಡಬಾರದು ಎಂದು ತುಮಕೂರು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹೇಳಿದ್ದಾರೆ.

ವಿಜಯನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ಪ್ರಕರಣ ಎಸ್ಐಟಿಗೆ ಕೊಟ್ಟಿದ್ದಾರೆ, ತನಿಖೆ ಮಾಡಲಿದೆ. ಪ್ರಕರಣದಲ್ಲಿ ಸರ್ಕಾರ ಪದೇ ಪದೆ ಮೂಗು ತೂರಿಸುವುದನ್ನು ಮಾಡಬಾರದು. ಡಿ.ಕೆ ಶಿವಕುಮಾರ್ ಪೆನ್‌ಡ್ರೈವ್ ಹಂಚಿಕೆ ಹಿಂದೆ ಇದ್ದಾರೆ ಎಂಬ ಆರೋಪದ ಬಗ್ಗೆ ಮಾಧ್ಯಮಗಳಲ್ಲಿ ನೋಡಿದೆ, ಇದು ಎಷ್ಟು ಸರಿ - ಎಷ್ಟು ತಪ್ಪು ಗೊತ್ತಿಲ್ಲ ಎಸ್ಐಟಿ ತನಿಖೆ ನಡೆಸಿ ಸತ್ಯ ಹೊರಗೆ ತರಲಿ, ಪ್ರಕರಣ ಸಿಬಿಐಗೆ ಕೊಡಲಿ, ಅದರಲ್ಲಿ ತಪ್ಪೇನಿಲ್ಲ ಎಂದರು.

ಪ್ರಜ್ವಲ್ ಪ್ರಕರಣದಿಂದ ನಮ್ಮ ಚುನಾವಣೆ ಮತ್ತು ರಾಷ್ಟ್ರದ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಈ ಪ್ರಕರಣ ಮೋದಿ ಅವರ ವರ್ಚಸ್ಸಿಗೆ ಒಂದು ಪರ್ಸೆಂಟ್ ಸಹ ಕುಂದುಂಟು ಮಾಡಿಲ್ಲ. ಆದರೆ, ಇಂತಹ ಹೇಯ ಕೃತ್ಯ ಯಾರೇ ಮಾಡಿದ್ದರೂ ಅಸಹ್ಯ. ಲೋಕಸಭೆ ಸದಸ್ಯನಾಗಿ ಇಂಥ ಕೆಲಸ ಮಾಡಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ, ಸಿಎಂ, ಡಿಸಿಎಂ ಗೃಹ ಇಲಾಖೆ ಹಸ್ತಕ್ಷೇಪ ಮಾಡೋದು ಒಳ್ಳೆಯದಲ್ಲ ಎಂದರು.

ಮಾಜಿ ಪ್ರಧಾನಿ ದೇವೇಗೌಡರು ಟಾರ್ಗೆಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸೋಮಣ್ಣ, ದೇವೇಗೌಡರು ಕಳಂಕರಹಿತ ನಾಯಕರು. ಅವರ ಹೆಸರೆತ್ತಲು ನಮಗೆ ಯೋಗ್ಯತೆ ಬೇಕು. ಸಿದ್ದರಾಮಯ್ಯ ಗೊತ್ತಿದ್ದೂ ದೇವೇಗೌಡರ ವಿಚಾರದಲ್ಲಿ ತಪ್ಪು ಮಾಡೋದು ಆಗಬಾರದು, ನಾನು ಸಿದ್ದರಾಮಯ್ಯ ಕುಮಾರಸ್ವಾಮಿ ಇವತ್ತು ಮನ್ನಣೆಗಳಿಸಿದ್ದೇವೆ ಅಂದರೆ ಅದು ದೇವೇಗೌಡರಿಂದ. ಅವರ ದೂರ ದೃಷ್ಟಿ ಚಿಂತನೆ ಇಲ್ಲ ಅಂದಿದ್ದರೆ ನಾವು ಯಾವೂರ ದಾಸಯ್ಯರು? ದೇವೇಗೌಡರನ್ನು ಇನ್ನೊಬ್ಬರ ಜೊತೆ ಹೋಲಿಕೆ ಮಾಡೋಕೆ ನಾನು ಇಷ್ಟಪಡಲ್ಲ. ಅವರು ಕಳಂಕ ರಹಿತ ನಾಯಕ. ದೇವೇಗೌಡರು ನಮ್ಮ ರಾಜ್ಯದವರು ನಮ್ಮ ನಾಯಕರು ಅಂತ ಹೇಳಿಕೊಳ್ಳಲು ಹೆಮ್ಮೆ ಇದೆ. ಇದು ಸಿದ್ದರಾಮಯ್ಯ ಅವರಿಗೆ ಗೊತ್ತಿದ್ದರೂ ಕೂಡ ತಪ್ಪು ಮಾಡ್ತಾ ಇದ್ದಾರೆ, ಅದು ಆಗಬರಾದು ಎಂದರು.

ರಾಹುಲ್ ಉಡಾಫೆ ಮಾತನಾಡೋದನ್ನು ಬಿಡಲಿ: ಸಿಎಂಗೆ ಪತ್ರ ಬರೆಯಲು ರಾಹುಲ್​ಗೆ ಯಾವ ಅಧಿಕಾರ ಇದೆ? ಸಿಎಂಗೆ ಏನು ನಿರ್ದೇಶನ ಕೊಟ್ಟಿರಿ, ಇದೆಲ್ಲ ನಿಮ್ಮಿಂದ ಆಗಬಾರದು ಎಂದು ರಾಹುಲ್ ಗಾಂಧಿ ವಿರುದ್ಧ ಸೋಮಣ್ಣ ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿಗೆ ತಲೆ ಕೆಟ್ಟಿದೆಯಾ? ರಾಷ್ಟ್ರದ ಮಾಜಿ ಪ್ರಧಾನಿಗಳ ಮಗ, ಮೊಮ್ಮಗ ಹೀಗೆ ಮಾತಾಡೋದು ಸರಿನಾ? 400 ಮಹಿಳೆಯರ ರೇಪ್ ಅಂತ ಹೇಳ್ತಾರಲ್ಲ, ಇವರಿಗೆ ಗೊತ್ತಿದೆಯಾ? ಹಾಗಿದ್ದರೆ, ಎಸ್ಐಟಿಗೆ ದಾಖಲೆ ಕೊಡಲಿ ಇಂಥವರನ್ನು ಕಾಂಗ್ರೆಸ್ ಪ್ರಧಾನಿ ಮಾಡ್ತೀವಿ ಅಂತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ತುಮಕೂರಿನಲ್ಲಿ ನಾನು ಗೆಲ್ಲುವ ವಿಶ್ವಾಸ ಇದೆ. ಕ್ಷೇತ್ರದಲ್ಲಿ ನನಗೇನೂ ಫೈಟ್ ಇರಲಿಲ್ಲ ತುಮಕೂರಿಗೂ ನನಗೂ 40 ವರ್ಷದ ಅವಿನಾಭಾವ ಸಂಬಂಧ ಇದೆ ತುಮಕೂರಿನ ಜನ, ಅವರ ಸಂಸ್ಕಾರ ಎಲ್ಲ ನನಗೆ ಪರಿಚಯವಿದೆ. ಜತೆಗೆ ಮತ್ತೆ ಮೋದಿಯವರು ಪ್ರಧಾನಿ ಆಗಲಿ ಅಂತ ಜನ ಬಯಸಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ರೇವಣ್ಣರನ್ನು ಆಸ್ಪತ್ರೆಗೆ ಕರೆದೊಯ್ದಿದ್ದ ಎಸ್ಐಟಿ, ಇಂದು ಪೊಲೀಸ್​ ಕಸ್ಟಡಿ ಅಂತ್ಯ - Woman Kidnap Case

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.